ಕೂರತ್ ತಂಙಳ್ ಅನುಸ್ಮರಣೆ , ವಿದ್ಯಾರ್ಥಿ – ಪೋಷಕರ ಸಮಾವೇಶ
ಉಳ್ಳಾಲ: ವಿದ್ಯಾರ್ಥಿಗಳನ್ನು ನಿಯಂತ್ರಿಸುವ ಜವಾಬ್ದಾರಿ ಪೋಷಕರದ್ದು. ಏಳು ವಯಸ್ಸಿಗೆ ತಲುಪಿದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದ ಉತ್ತಮ ವ್ಯಕ್ತಿ ಯಾಗಿ ಬೆಳೆಸಬೇಕು ಎಂದು ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಹೇಳಿದರು.
ಅವರು ಕರ್ನಾಟಕ ಮುಸ್ಲಿಂ ಜಮಾಅತ್ ಕಲ್ಕಟ್ಟ ಇದರ ಆಶ್ರಯದಲ್ಲಿ ಸಯ್ಯಿದ್ ಫಝಲ್ ಕೋಯಮ್ಮ ಕೂರತ್ ತಂಙಳ್ ಅನುಸ್ಮರಣೆ ಹಾಗೂ ವಿದ್ಯಾರ್ಥಿ – ಪೋಷಕರ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
10 ವರ್ಷ ಕಳೆದ ಮಕ್ಕಳು ಎಂಡಿಎಂಎ, ಡ್ರಗ್ಸ್ ದಂಧೆ ಗೆ ಬಲಿಯಾಗುವುದು ಜಾಸ್ತಿ ಆಗುತ್ತಿದೆ. ಈ ವಿಚಾರದಲ್ಲಿ ಮಕ್ಕಳನ್ನು ರಕ್ಷಿಸುವ ಕೆಲಸ ನಮ್ಮಿಂದ ಆಗಬೇಕು ,ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಬೇಕು.ಉತ್ತಮ ಶಿಕ್ಷಣ ಪಡಕೊಂಡರೆ ನಮಗೆ ಬದುಕು ಕಟ್ಟಿಕೊಳ್ಳಲು,ದೇಶ ಕಟ್ಟಲು ಸಾಧ್ಯ. ಸಾಧ್ಯ ವಾದಷ್ಟು ಮಟ್ಟಿಗೆ ನಮ್ಮ ದೇಶದಲ್ಲೇ ಉದ್ಯೋಗ ಪಡೆದುಕೊಂಡು ಯಶಸ್ಸು ಜೀವನ ನಡೆಸಬೇಕು ಎಂದು ಕರೆ ನೀಡಿದರು
ಕರ್ನಾಟಕ ಮುಸ್ಲಿಂ ಜಮಾಅತ್ ಕಲ್ಕಟ್ಟ ಅಧ್ಯಕ್ಷ ಡಿಐ ಅಬೂಬಕ್ಕರ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಕಲ್ಕಟ್ಟ ಜುಮಾ ಮಸೀದಿ ಖತೀಬ್ ಇಸ್ಹಾಕ್ ಸಖಾಫಿ ನಂದಾವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸದ್ ರ್ ಉಸ್ತಾದ್ ಶರೀಫ್ ಸ ಅದಿ ದುಆ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಶಾಫಿ ಸಅದಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮ ದಲ್ಲಿ ಕಲ್ಕಟ್ಟ ಜುಮಾ ಮಸೀದಿ ಉಪಾಧ್ಯಕ್ಷ ಅಶ್ರಫ್ ಕಟ್ಟೆ, ಮುಹಮ್ಮದ್ ಕಂಡಿಕ,ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೋನು ಕಲ್ಕಟ್ಟ ಕಾರ್ಯದರ್ಶಿ ಹಸೈನಾರ್ ತಟ್ಲ , ರಝಾಕ್ ಕಂಡಿಕ,ಮದ್ರಸ ಉಸ್ತುವಾರಿ ಮೊಯ್ದಿನ್ ಮೋನು ,ಇಸ್ಮಾಯಿಲ್ ಸ ಅದಿ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.
ಇಬ್ರಾಹಿಂ ಮದನಿ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು ಅಬ್ದುಲ್ ರಹಿಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮಾಸ್ಟರ್ ವಂದಿಸಿದರು.
ಕೂರತ್ ತಂಙಳ್ ಅನುಸ್ಮರಣೆ , ವಿದ್ಯಾರ್ಥಿ – ಪೋಷಕರ ಸಮಾವೇಶ
Date: