
ಮಂಗಳೂರು (ಜು 22): ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಿ ವಿಭಾಗದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾಗಿ ಜಮಾಲ್ ಅಜ್ಜಿನಡ್ಕ ಪುನರಾಯ್ಕೆಗೊಂಡರೆ ಎ ವಿಭಾಗದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಮ್ಯಾಥ್ಯು ಡಿಸೋಜಾ ಆಯ್ಕೆಗೊಂಡರು.
ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೀರಿ ಮ್ಯಾರೇಜ್ ಮಹಲ್ ನಲ್ಲಿ ಉಳ್ಳಾಲ ಬ್ಲಾಕ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಬೋಳಿಯಾರ್ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಅಶ್ರಫ್ ಕೆಸಿ ರೋಡ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತಾನಾಡಿದ ರಮೇಶ್ ಶೆಟ್ಟಿ ಬೋಳಿಯಾರ್ ಪಕ್ಷ ಸಂಘಟನೆಯಲ್ಲಿ ಕೋಟೆಕಾರು ವಲಯ ಸಮಿತಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಬಾಹುಳ್ಯವನ್ನು ಉಳಿಸಿ ಎಲ್ಲ ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಗೊಳಿಸುವಲ್ಲಿ ಕಾರ್ಯಕರ್ತರು ಮತ್ತು ಬೂತ್ ಅಧ್ಯಕ್ಷರು ಹೆಚ್ಚಿನ ಶ್ರಮ ವಹಿಸಲು ಕರೆ ಕೊಟ್ಟರು.
ಅದೇ ರೀತಿ ಉಳ್ಳಾಲ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕರ ಶ್ರಮ ಮತ್ತು ಅಭಿವೃದ್ಧಿಯನ್ನು ಜನ ಮೆಚ್ಚಿ ಕೊಂಡ ಬಗ್ಗೆ ಹಾಗೂ ಕೋಟೆಕಾರು ವಲಯದಲ್ಲಿ ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಹೆಚ್ಚಿನ ಪವರ್ ಸ್ಟೇಷನ್ ಗಳನ್ನು ಮಾಡುವಲ್ಲಿ ಗ್ರಾಮದ ಜನರಿಗೆ ಮತ್ತು ಕೋಟೆಕಾರು ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳನ್ನು ಮಾಡಲು ಹೆಚ್ಚಿನ ಅನುದಾನ ನೀಡಿ ಕೆಲಸ ಕಾರ್ಯಗಳನ್ನು ಮಾಡಿಸಿದ ಬಗ್ಗೆ ವಿವರಣೆ ನೀಡಿದರು.
ಈ ವೇಳೆ ಎಲ್ಲಾ ಹಳೇ ಸಮಿತಿಗಳನ್ನು ಬರ್ಖಾಸ್ತು ಮಾಡಿ ಹೊಸ ವಲಯ ಸಮಿತಿಗೆ ಎರಡು ವಿಭಾಗದಲ್ಲಿ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು. ವಲಯ ಒಂದನೆ ವಿಭಾಗಕ್ಕೆ 7 ಬೂತ್ ಗಳ ವಲಯ ಸಮಿತಿ ಮತ್ತು ಎರಡನೆ ವಲಯ ಸಮಿತಿಗೆ 8 ಬೂತ್ ಗಳ ವಲಯ ಸಮಿತಿ ರಚನೆ ಮಾಡಲಾಯಿತು.