ಮಂಗಳೂರು ವಿವಿ 6 ನೇ ಸೆಮಿಸ್ಟರ್ ಪದವಿ ಫಲಿತಾಂಶ ಪ್ರಕಟ

Date:

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯವು ಜೂನ್ ಜುಲೈ 2025 ರಲ್ಲಿ ಎಲ್ಲಾ ಪದವಿ ಕಾರ್ಯಕ್ರಮಗಳ ದ್ವಿತೀಯ ಚತುರ್ಥ ಮತ್ತು ಆರನೇ ಸೆಮಿಸ್ಟರ್ ನ ಪರೀಕ್ಷೆಗಳು ಇತ್ತೀಚೆಗೆ ಮುಗಿದಿದ್ದು, ಈ ಪರೀಕ್ಷೆಗಳ ವಿವಿದ ವಿಷಯಗಳ ಮೌಲ್ಯಮಾಪನ ಕಾರ್ಯವು ಜು.2 ರಂದು ಆರಂಭಗೊಂಡು ನಾಲ್ಕು ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯ ಮಾಪನ ಕಾರ್ಯವು ನಡೆಯುತ್ತಿದೆ. ಪದವಿಯ ಆರನೇ ಸೆಮಿಸ್ಟರ್ ನ ಮೌಲ್ಯಮಾಪನ ಕಾರ್ಯವು ಜು.19 ರಂದು ಪೂರ್ಣಗೊಂಡಿದ್ದು‌ ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ವ್ಯಾಸಾಂಗಕ್ಕಾಗಿ ಹಾಗೂ ಉದ್ಯೋಗದ ಹಿತದೃಷ್ಟಿಯಿಂದ ಮೌಲ್ಯಮಾಪನ ನಡೆದ ಮೂರೇ ದಿನಗಳಲ್ಲಿ 15, 534 ವಿದ್ಯಾರ್ಥಿಗಳ ಫಲಿತಾಂಶವನ್ನು ಜು.22 ರಂದು ಮಂಗಳವಾರ ಮಂಗಳೂರು ವಿವಿಯ UUCMS (ಯುಯುಸಿಎಮ್ ಎಸ್ ) ನ ಅಧಿಕೃತ ವೆಬ್ಸೈಟ್ www.uucms.karnataka.gov.in ನಲ್ಲಿ ಪ್ರಕಟಿಸಿದೆ.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ .ಧರ್ಮ ಅವರು ಮಂಗಳೂರು ವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಫಲಿತಾಂಶದ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ವಿವಿ ಕುಲಸಚಿವ ಕೆ‌.ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ ಹೆಚ್, ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ , ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಮೌಲ್ಯಮಾಪನ ಪೂರ್ಣಗೊಳಿಸಿದ ಬಿಎಸ್ಸಿ, ಬಿಕಾಂ, ಬಿಎಸ್ ಡಬ್ಲೂ, ಬಿಸಿಎ, ಬಿಬಿಎ, ಬಿಎಸ್ಸಿ( ಎಫ್ ಎನ್ ಡಿ) ಬಿಎಸ್ಸಿ(ಎನ್ಯಿಮೇಶನ್ ಮತ್ತು ವಿಜ್ಯುವಲ್ ಇಫೆಕ್ಟ್, ಬಿಎಸ್ಸಿ (ಫುಡ್ ಟೆಕ್ನಾಲಜಿ), ಬಿಎಸ್ಸಿ ( ಹೋಮ್ ಸೈಯನ್ಸ್), ಬಿ.ಎ( ಎಚ್ ಆರ್ ಡಿ) ಬಿಎಸ್ಸಿ ( ಫ್ಯಾಶನ್ ಡಿಸೈನ್), ಬಿಎಸ್ಸಿ(ಐಡಿ&ಡಿ), ಬಿಹೆಚ್ ಎಂ, ಬಿವಿಎ ಕಾರ್ಯಕ್ರಮಗಳ 6 ನೆ ಸೆಮಿಸ್ಟರ್ ನ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಉಳಿದಂತೆ ಎಲ್ಲಾ ಪದವಿಗಳ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್ ಗಳ ಹಾಗೂ ಬಿಎಚ್ ಎಂ 8 ನೇ ಸೆಮಿಸ್ಟರ್, ಬಿಎ (ಎಸ್ ಎಲ್ ಪಿ), ಹಾಗೂ ಎನ್ಇಪಿ ಅಲ್ಲದ (non NEP) ಕಾರ್ಯಕ್ರಮಗಳ ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ ಹೆಚ್ ಅವರು ತಿಳಿಸಿದ್ದಾರೆ.
ಮಂಗಳೂರು ವಿವಿಯು ಈ ಬಾರಿ ಮೌಲ್ಯಮಾಪನ ಕೇಂದ್ರದಲ್ಲಿಯೇ ಅಂಕತಃಖ್ತೀಕರಣ ದಾಖಲಿಸುವ ಪ್ರಕ್ರಿಯೆಯನ್ನು ಆನ್ ಲೈನ್ ವ್ಯವಸ್ಥೆಯ ಮೂಲಕ ಸಂಪೂರ್ಣವಾಗಿ ಗಣಕೀಕರಣಗೊಳಿಸಿದ್ದರಿಂದ ಮೌಲ್ಯಮಾಪನ ನಡೆಯುತ್ತಿರುವಾಗಲೇ ಫಲಿತಾಂಶವನ್ನು ಪ್ರಕಟಿಸಲು ಸಾಧ್ಯವಾಗಿದೆ. ಇದಕ್ಕೆ ಪೂರಕವಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಂಯೋಜಕರು ಪರೀಕ್ಷಾ ಮಂಡಳಿ ಅಧ್ಯಕ್ಷರು, ಮೌಲ್ಯಮಾಪಕರು , ಶಿಕ್ಷಕೇತರ ಸಿಬ್ಬಂದಿಗಳ ಪೂರ್ಣಪ್ರಮಾಣದ ಸಹಕಾರದಿಂದ ನಿಗದಿತ ಸಮಯದಲ್ಲಿ ಮೌಲ್ಯಮಾಪನವನ್ನು ಪೂರ್ಣಗೊಳಿಸಿ ಅತ್ಯಂತ ಕಡಿಮೆ ಸಮಯದಲ್ಲಿ ಫಲಿತಾಂಶವನ್ನು ಪ್ರಕಟಿಸಲು ಸಾಧ್ಯವಾಗಿದೆ. ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿ, ಮರುಮೌಲ್ಯಮಾಪನಕ್ಕೆ ( ಉಳಿದ ಎಲ್ಲಾ ಫಲಿತಾಂಶ ಪ್ರಕಟವಾದ ಬಳಿಕ): ಅರ್ಜಿ ಆಹ್ವಾನಿಸಿ ಸದ್ಯದಲ್ಲಿಯೇ ವಿಶ್ವವಿದ್ಯಾಲಯದಿಂದ ಪ್ರಕಟಣೆ ಹೊರಡಿಸಲಾಗುವುದು. ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ನಿಗದಿತ ಅರ್ಜಿ ಶುಲ್ಕ ಪಾವತಿಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪಿ.ಎ.ಇಂಜಿನಿಯರಿಂಗ್ ಕಾಲೇಜು: ಬಿ.ಇ.(ಹಾನರ್ಸ್) ಪದವೀಧರರಿಗೆ ಅಭಿನಂದನಾ ಸಮಾರಂಭ

ಕೊಣಾಜೆ: ಪದವಿ, ಶಿಕ್ಷಣದೊಂದಿಗೆ ನಾವು ಪಡೆದುಕೊಳ್ಳುವ ಕೌಶಲಗಳು ನಮ್ಮ ಬದುಕಿಗೆ ಸ್ಪೂರ್ತಿಯಾಗುತ್ತವೆ....

ಮಂಗಳೂರು ವಿವಿ 46 ನೇ ಸಂಸ್ಥಾಪನಾ ದಿನಾಚರಣೆ

ಕೋಣಾಜೆ: ಪ್ರಸ್ತುತ ಕಾಲಘಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಲ್ಪ ಆತಂಕದ ಸ್ಥಿತಿಯನ್ನು ಎದುರಿಸಿದರೂ...

ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ ಅವರಿಗೆ ಬಿಳ್ಕೊಡುಗೆ

ಬಂಟ್ವಾಳ: ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ...

ಸೆ. 14 ರಂದು ಸುರಿಬೈಲ್ ಮದರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್

ಕಲ್ಲಡ್ಕ: ಬದ್ರಿಯಾ ಜುಮ್ಮಾ ಮಸೀದಿ ಸುರಿಬೈಲ್ ಇದರ ಅಧೀನದಲ್ಲಿರುವ ನುಸ್ರತುಲ್ ಉಲೂಂ...