ಕಾವೂರು: ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ)ಮಂಗಳೂರು ಇದರ ಉದ್ಘಾಟನಾ ಕಾರ್ಯಕ್ರಮ ಕಾವೂರು ವ್ಯವಸಾಯ ಸೇವಾ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ. ವೈ ಭರತ್ ಶೆಟ್ಟಿ ಪ್ರಚಲಿತ ಚಾರಿಟೇಬಲ್ ಟ್ರಸ್ಟ್ ನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಡಾ ಸಂಸದ್ ರವರು ಸುಮಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಿರುತ್ತಾರೆ. ಆ ನಿಟ್ಟಿನಲ್ಲಿ ಈ ಟ್ರಸ್ಟ್ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನಿಡುತ್ತಾದೆ ಎಂಬ ವಿಶ್ವಾಸ ನನ್ನಗಿದೆ. ಈ ಟ್ರಸ್ಟ್ ಗೆ ನನ್ನ ಬೆಂಬಲ ಹಾಗೂ ಸಹಕಾರ ಯಾವತ್ತು ಇದೆ ಎಂದು ಹೇಳಿದರು.

ಕಾವೂರು ಪೋಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಬಿರಂದಾರ್ ಪ್ರಚಲಿತ ಚಾರಿಟೇಬಲ್ ಟ್ರಸ್ಟ್ ನ ಲೋಗೊ ಅನಾವರಣಗೈದರು. ಬಳಿಕ ಮಾತನಾಡಿದ ಅವರು ದ.ಕ ಜಿಲ್ಲೆಯಲ್ಲಿ ಮಹಿಳೆಯರಿಗೆ ವಿಶೇಷವಾದ ಗೌರವವನ್ನು ನೀಡುತ್ತಾರೆ ಆ ನಿಟ್ಟಿನಲ್ಲಿ ದ.ಕ ಜಿಲ್ಲೆಯಲ್ಲಿ ಮಹಿಳಾ ದೌರ್ಜನ್ಯದ ಸಂಖ್ಯೆ ಕಡಿಮೆ ಮಹಿಳೆಯರಿಗೆ ಮಕ್ಕಳಿಗೆ ಸಮಸ್ಯೆಯಾದಾಗ ಪ್ರಚಲಿತ ಚಾರಿಟೇಬಲ್ ಅವರೊಂದಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಪ್ರಚಲಿತ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ.ಸಂಸದ್ ಕುಂಜತ್ತಬೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ನ್ಯಾಯವಾದಿ ಶೈಲಜಾ ರಾಜೇಶ್, ನಂದಿನಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷ ಭಾರತಿ, ಲೇಖಕ ಬದ್ರುದ್ದೀನ್ ಕೂಳೂರು, ರಂಗಸ್ವರೂಪ ಕುಂಜತ್ತಬೈಲ್(ರಿ) ಅಧ್ಯಕ್ಷ ರಹ್ಮಾನ್ ಖಾನ್ ಕುಂಜತ್ತಬೈಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಪ್ರಚಲಿತ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಹನಿಷ ಸವಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಚಲಿತ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ವಿಧಿಶ ಸಾಲಿಯಾನ್ ಪ್ರಾರ್ಥನೆಗೈದರು. ಟ್ರಸ್ಟಿ ಕವಿತಾ ಶ್ರೀರಾಮ್ ಸ್ವಾಗತಿಸಿದರು. ಟ್ರಸ್ಟಿ ತಝ್ಬಯ ಎಸ್.ಆರ್ ವಂದಿಸಿದರು.


