
ಕಡಬ ಪಟ್ಟಣ ಪಂಚಾಯತ್ ಇದರ ನೂತನ ಅದ್ಯಕ್ಷರಾಗಿ ತಮನ್ನಾ ಜಬೀನ್ ಉಪಾಧ್ಯಕ್ಷರಾಗಿ ನೀಲಾವತಿ ಶಿವರಾಂ ಆಯ್ಕೆಯಾದರು. ಹೊಸದಾಗಿ ರಚನೆಯಾಗಿರುವ ಕಡಬ ಪಟ್ಟಣ ಪಂಚಾಯತ್ಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 8 ಮತ್ತು ಬಿಜೆಪಿ 5 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಇವತ್ತು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ತಮನ್ನಾ ಜಬೀನ್ ಅಧ್ಯಕ್ಷ ಮತ್ತು ನೀಲಾವತಿ ಶಿವರಾಂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಪಕ್ಷದಿಂದ ಗುಣವತಿ ರಘುರಾಮ ಮತ್ತು ಅಕ್ಷತಾ ಬಾಲಕೃಷ್ಣ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿಗಳಾದ ಎಂ.ಎಸ್.ಮಹಮ್ಮದ್,ಕುಳಾಲು ಸುಬಾಶ್ಚಂದ್ರ ಶೆಟ್ಟಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಸಿ ಶುಭಕೋರಿದರು. ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷರಾದ ಶ್ರೀ ಹರೀಶ್ ಕುಮಾರ್ ಉಪಸ್ಥಿತಿತರಿದ್ದರು..
