ಮಂಗಳೂರು: ಸಜಿಪ ನಡು ಗ್ರಾಮ ನಿವಾಸಿ ಉಮ್ಮರ್ ಫಾರೂಕ್ ಎಂಬವರು ಜೂನ್ 6ರಂದು ಮುಂಜಾನೆ ನಂದಾವರದಿಂದ ದೇರಳಕಟ್ಟೆ ಕಡೆಗೆ ತೆರಳುತ್ತಿದ್ದಾಗ ಸಜೀಪನಡು ದೇರಾಜೆ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತರು ತನ್ನ ಮೇಲೆ ತಲ್ವಾರ್ ಬೀಸಿ ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ತನಿಖೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲಿಸರು ಇದೊಂದು ಸುಳ್ಳು ದೂರು ಎಂದು ಆರೋಪಿಸಿ ದೂರುದಾರನ ವಿರುದ್ದವೇ ಜಾಮೀನು ರಹಿತ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲು ಸೇರಿದ್ದರು.ಈ ಬಗ್ಗೆ ಉಮ್ಮರ್ ಫಾರೂಕ್ ರವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಸಂಖ್ಯೆ 128/2025 ರಲ್ಲಿ ದೂರುದಾರ ಹಾಗೂ ಆರೋಪಿಯಾಗಿರುವ ಉಮ್ಮರ್ ಫಾರೂಕ್ ರವರಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿ ಆದೇಶ ನೀಡಿದೆ. ಉಮ್ಮರ್ ಫಾರೂಕ್ ರವರ ಪರವಾಗಿ ವಕೀಲರಾದ ಕಬೀರ್ ಕೆಮ್ಮಾರ ವಾದ ಮಂಡನೆ ಮಾಡಿದ್ದಾರೆ. ಇದೇ ಪ್ರಕರಣದಲ್ಲಿ ದೂರುದಾರನ ವಿರುದ್ಧವೇ ಷಡ್ಯಂತರ ನಡೆಸಿ ಬಂದಿಸಿದ್ದಾರೆಂದು ಆರೋಪಿಸಿ ಫೇಸ್‌ಬುಕ್ ಪೋಸ್ಟ್ ಮಾಡಿದ್ದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಹಾಗೂ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿಯ ವಿರುದ್ಧವೂ ಪೋಲಿಸರು ಪ್ರಕರಣ ದಾಖಲಿಸಿದ್ದರು.
ಬಂಟ್ವಾಳ : ತಲ್ವಾರ್ ದಾಳಿ ಸುಳ್ಳೆಂದು ಆರೋಪಿಸಿ ಬಂಧಿತನಾಗಿದ್ದ ಉಮ್ಮರ್ ಫಾರೂಕ್ ಸಜಿಪರವರಿಗೆ ಜಾಮೀನು ಮಂಜೂರು
Date: