ಉಳ್ಳಾಲದಲ್ಲಿ ಮುಹಿಯಿದ್ದೀನ್ ಬಾವ , ತಾಜುಲ್ ಉಲಮಾ(ಖ.ಸಿ.) ರವರ ಆಂಡ್ ನೇರ್ಚೆ

Date:

ಉಳ್ಳಾಲ : ಪ್ರವಾದಿ ಮುಹಮ್ಮದ್ ಪೈಗಂಬರ್ (ಸ )ರವರು ವಿದ್ಯಾಭ್ಯಾಸಕ್ಕೆ ‌ಪ್ರೋತ್ಸಾಹ ನೀಡುವ ಮೂಲಕ ಸಮಾಜದ ಉತ್ತಮ ಬೆಳಕು ನೀಡಿದ ವ್ಯಕ್ತಿ ಆಗಿದ್ದರು. ಸಮಾಜದ ಅಭಿವೃದ್ಧಿಗಾಗಿ ಅವರು ನೀಡಿದ ಸೇವೆಯನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಬರಬೇಕು ಎಂದು ಹುಸೈನ್ ಸಅದಿ ಕೆಸಿರೋಡ್ ಕರೆ ನೀಡಿದರು.

ಅವರು ಉಳ್ಳಾಲ ಜುಮಾ ಮಸೀದಿ ಹಾಗೂ ಸಯ್ಯಿದ್ ಮದನಿ ದರ್ಗಾ ಇದರ ಆಶ್ರಯದಲ್ಲಿ ಮುಹಿಯಿದ್ದೀನ್ ಬಾವ ಮತ್ತು ತಾಜುಲ್ ಉಲಮಾ(ಖ.ಸಿ.) ರವರ ಹೆಸರಿನಲ್ಲಿ ದರ್ಗಾ ಸಭಾಂಗಣದಲ್ಲಿ ಸೋಮವಾರ ನಡೆದ ಆಂಡ್ ನೇರ್ಚೆ ಕಾರ್ಯಕ್ರಮ ದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು ನಮಗೆ ಧಾರ್ಮಿಕ ಶಿಕ್ಷಣ ಜೊತೆ ಲೌಕಿಕ ಶಿಕ್ಷಣ ಬೇಕು. ಇಸ್ಲಾಮಿನ ಚೌಕಟ್ಟು ‌ಮೀರದ ರೀತಿಯಲ್ಲಿ ನಮ್ಮ ಕಾರ್ಯ ಚಟುವಟಿಕೆಗಳು ಇರಬೇಕು ಎಂದರು.

ಸಯ್ಯಿದ್ ಅಬ್ದುಲ್ ರಹ್ಮಾನ್ ಮಸ್ ಊದ್ ತಂಙಳ್ ದುಆ ಆಶೀರ್ವಚನ ನೀಡಿದರು.ಬಾದ್ ಶಾ ಸಖಾಫಿ ಕೊಲ್ಲಂ ಮಾತನಾಡಿದರು.ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.ಈ ಕಾರ್ಯಕ್ರಮ ದಲ್ಲಿ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿ ಸ್ಟಾರ್, ವಕ್ಫ್ ಅಧಿಕಾರಿ ಅಬೂಬಕರ್ ಮೋಂಟುಗೋಳಿ, ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಪಿಲ್ ಮಜೀದ್ ಫಾಳಿಲಿ,ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಮಾಜಿ ಅಧ್ಯಕ್ಷ ಹಾಜಿ ಯು.ಎಸ್. ಹಂಝ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ,ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಹಾಜಿ, ಹಮೀದ್ ಕಲ್ಲಾಪು, ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ,ನಜೀಮ್ ನೂರಾನಿ , ಅಬ್ದುಲ್ ಸಲಾಂ ಸಖಾಫಿ ,ನುಹ್ಮಾನ್ ನೂರಾನಿ, ತಸ್ಲೀಮ್ ನೂರಾನಿ, ಬಶೀರ್ ಸಖಾಫಿ,ಹಾಫಿಲ್ ಜಮಾಲ್ ಮದನಿ ನೂರಾನಿ , ಹಾಫಿಲ್ ಸಿನಾನ್ ಮದನಿ ,ಅಬ್ದುಲ್ ರಝಾಕ್ ಲತೀಫಿ, ಫಾರೂಕ್ ಮುಸ್ಲಿಯಾರ್, ಅಸದ್ ಮುಸ್ಲಿಯಾರ್,ಅಲ್ತಾಫ್ ಮತ್ತಿತರರು ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...