
ಮಾಣಿ: ಕುದುಂಬ್ಲಾಡಿ ಕೆದಿಲದಲ್ಲಿ ಕಳೆದ 7 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಸಂಸ್ಥೆಯಲ್ಲಿ ಸಫ್ಟೆಂಬರ್-30-2025 ಮಂಗಳವಾರ ಬೆಳಿಗ್ಗೆ 11:30ಕ್ಕೆ ಫ್ಯಾಮಿಲಿ ಮುಲಾಖಾತ್ ನಡೆಯಲಿದೆ.
ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ, ಕುದುಂಬ್ಲಾಡಿ
ಸಂಸ್ಥೆಯ ಸಾರಥಿ ಶೈಖುನಾ ಎಂ.ಇ ಅಬ್ದುರ್ರಝ್ಝಾಖ್ ಮದನಿ ಕಾಮಿಲ್ ಸಖಾಫಿ ಉಸ್ತಾದ್ರವರ ಪೂರ್ವ ಶಿಷ್ಯಂದಿರ ಸಂಘಟನೆಯಾದ MDI FRIENDS ನಡೆಸುತ್ತಿರುವ ಈ
ಫ್ಯಾಮಿಲಿ ಮುಲಾಖಾತ್ ಕಾರ್ಯಕ್ರಮಕ್ಕೆ ಶೈಖುನಾ ಉಸ್ತಾದರು ನೇತೃತ್ವ ನೀಡಲಿದ್ದಾರೆ. ಈ ಸಂಗಮದಲ್ಲಿ ಪೆರುವಾಯಿ
ಸಯ್ಯಿದ್ ಹಬೀಬುಲ್ಲಾ ತಙ್ಙಳ್ರವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ.
ಉಸ್ತಾದರ ಪೂರ್ವ ವಿಧ್ಯಾರ್ಥಿಗಳೆಲ್ಲರೂ ಈ ಸಂಗಮದಲ್ಲಿ ಭಾಗವಹಿಸಬೇಕೆಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಐ.ಕೆ ಇಕ್ಬಾಲ್ ಮದನಿ, ಕುಕ್ಕೋಟ್ಟು ಪ್ರಕಟನೆಗೆ ತಿಳಿಸಿದ್ದಾರೆ.


