ತಾಲಿಬಾನ್ ನೀತಿಗೆ ಮಣಿದ ಬಿಜೆಪಿ ಸರ್ಕಾರದ ನಡೆಗೆ ಉಳ್ಳಾಲ ಬ್ರಾಕ್ ಮಹಿಳಾ ಕಾಂಗ್ರೆಸ್ ಖಂಡನೆ

Date:

ತಾಲಿಬಾನ್ ವಿದೇಶಾಂಗ ಸಚಿವರ ಭೇಟಿಯ ವೇಳೆ, ಮಹಿಳಾ ಪತ್ರಕರ್ತರನ್ನು ಹೊರಗಿಟ್ಟು “ಪುರುಷರಿಗೆ ಮಾತ್ರ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ನೀಡಿದ ಕೇಂದ್ರ ಸರ್ಕಾರದ ನಡೆಯನ್ನು ಉಳ್ಳಾಲ ವಲಯ ಮಹಿಳಾ ಕಾಂಗ್ರೆಸ್ ತೀವವಾಗಿ ಖಂಡಿಸಿದೆ.

“ನಮ್ಮ ದೇಶದ ಪ್ರಜಾಪ್ರಭುತ್ತ ನೀತಿ ಮತ್ತು ಸಾಂವಿಧಾನಿಕ ಮೌಲ್ಯಗಳು ವಿಶ್ವಕ್ಕೆ ಮಾದರಿಯಾಗಬೇಕು. ಬೇರೆ ದೇಶದ ಪ್ರತಿನಿಧಿಗಳು ಯಾರೇ ಭಾರತಕ್ಕೆ ಬಂದರೂ, ಅವರು ತಾಲಿಬಾನ್ ಧೋರಣೆ ಅಥವಾ ಸರ್ವಾಧಿಕಾರಿ ನಿಲುವು ಹೊಂದಿರಬಹುದು, ಆದರೆ ಭಾರತದಿಂದ ಅವರು ಸಮಾನತೆ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನೂ ಕಲಿಯಬೇಕು, ಅದಕ್ಕೆ ವಿರುದ್ಧವಾಗಿ, ಅವರು ಇಲ್ಲಿ ಬಂದಾಗ, ನಾವು ಅವರ ನೀತಿಗೆ ಮಣಿಯಬಾರದು. ಈ ಘಟನೆ ಭಾರತದ ಸಂವಿಧಾನ, ಮೂಲಭೂತ ಮೌಲ್ಯಗಳು, ಮತ್ತು ಮಹಿಳೆಯರಿಗೆ ಮಾಡಿರುವ ಅವಮಾನವಾಗಿದೆ. ಈ ಅವಮಾನದ ದಿವಸವನ್ನು ಈ ದೇಶದ ಮಹಿಳೆಯರು ಯಾವತ್ತೂ ಮರೆಯುವುದಿಲ್ಲ.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ ರಾಜ್ಯ ಪದಾಧಿಕಾರಿ ಸುರೇಖಾ ಚಂದ್ರಹಾಸ, ನಗರಾಧ್ಯಕ್ಷ ಅಮಿತ ಅಶ್ವಿನ್ ಪೂಜಾರಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಉಪಾಧ್ಯಕ್ಷೆ ಸಪ್ಪಾ ಹರೀಶ್, ರಝಿಯಾ ಇಬ್ರಾಹಿಂ ಕಾರ್ಮಿಕ ಅಧ್ಯಕ್ಷೆ ಪ್ರಭಾವತಿ ಶೆಟ್ಟಿ, ತುಳಸಿ ಗಟ್ಟಿ ಕೋಟೆಕಾರ್, ರೇವತಿ ಕುಂಪಲ, ದೇವಕಿ ಪೂಜಾರಿ, ಜೇಸಿಂತ ಮಂಡೋನ್ನ, ವೀಣಾ ಶಾಂತಿ, ಭಾರತಿ, ದೀಕ್ಷಿತಾ ಶಾಲಿನಿ ಶೆಟ್ಟಿ,ಚಂಚಲಕ್ಷ್ಮಿ ಕೊಣಾಜೆ ಮತ್ತು ಅನೇಕರು ಕೇಂದ್ರ ಸರ್ಕಾರದ ಈ ಕ್ರಮವನ್ನು ಖಂಡಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...