ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ‘ಪಿಯು ಕ್ಯಾಂಪಸ್ ಕ್ರೋಮಾ’ 2025

Date:

ಪೇಸ್ ಗ್ರೂಪ್‌ ನ ಬೆಳ್ಳಿಹಬ್ಬ ‘ಪೇಸ್ ಸಿಲ್ವಿಯೋರಾ 2025’ರ ಅಂಗವಾಗಿ ಪಿ.ಎ. ಎಜ್ಯುಕೇಶನಲ್ ಟ್ರಸ್ಟ್‌ನಡಿ ಕಾರ್ಯನಿರ್ವಹಿಸುತ್ತಿರುವ ಪಿ.ಎ. ಪ್ರಥಮ ದರ್ಜೆ ಕಾಲೇಜು ವತಿಯಿಂದ ‘ಕ್ಯಾಂಪಸ್ ಕ್ರೋಮಾ 2025’ ಎಂಬ ರಾಷ್ಟ್ರ ಮಟ್ಟದ ಉತ್ಸವ ಮತ್ತು ಆಹಾರ ಮೇಳ ಅ.30ರಂದು ಕೊಣಾಜೆಯ ಮಂಗಳೂರು ವಿವಿ ಬಳಿಯ ಪೇಸ್ ಜ್ಞಾನ ನಗರದಲ್ಲಿ ನಡೆಯಿತು.

ಕೆಸಿಸಿಐ ಅಧ್ಯಕ್ಷ ಪಿ.ಬಿ.ಅಹ್ಮದ್ ಮುದಸ್ಸರ್ ಮುಖ್ಯ ಅಥಿತಿಗಳಾಗಿ ಕಾರ್ಯಕ್ರಮ ಉದ್ಘಾಟಿಸಿ ‘ಪಿ.ಎ ಪ್ರಥಮ ಕಾಲೇಜು ಯಾವತ್ತಿದ್ದರು ಪಠ್ಯದ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಹೊಸ ಜಗದೆಡೆಗೆ ಕರಕೊಂಡು ಹೋಗುವುದು’ ಎಂದು ಮಾತನಾಡಿದರು. ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರ್ಫಾಝ್ ಜೆ. ಹಾಶಿಂ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಯುವ ಶಕ್ತಿ, ಸೃಜನಶೀಲತೆ, ನಾವೀನ್ಯತೆಯ ಉತ್ಸವ ಇದಾಗಿದ್ದು, ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳನ್ನು ಹಂಚಿಕೊಳ್ಳಲು, ಆಸಕ್ತಿಗಳನ್ನು ಅನ್ವೇಷಿಸಲು ಉತ್ತಮ ವೇದಿಕೆ ಒದಗಿಸಿ ಕೊಡಲಾಯಿತು. ಡಯಟೆಕ್ 7.0 ನಡಿ ಹಣ್ಣು ಕೆತ್ತನೆ ಸ್ಪರ್ಧೆ, ಪೋಸ್ಟರ್ ತಯಾರಿ, ಕುಕ್ಕಿಂಗ್ ವಿದ್ ಫೈರ್ ಸ್ಪರ್ಧೆ ನಡೆಯಿತು. ಕ್ಯಾಮಿಯೋ 3.0ನಡಿ ಟ್ರೆಝರ್ ಹಂಟ್, ಬ್ರಾಂಡ್ ರಂಗೋಲಿ, ಕಾರ್ಪೊರೇಟ್ ವಾಕ್, ಹಾಗೂ ಹೂಮನಿಸ್ಟ್ 3.0 ನಡಿ ಕೊಲಾಜ್ ತಯಾರಿಕೆ, ಡಾಕ್ಯುಮೆಂಟರಿ ಸ್ಪರ್ಧೆ, ಮತ್ತು ಟೆಕ್ಟೋನಿಕ್ 3.0ನಡಿ ಐಟಿ ಕ್ವಿಝ್, ಕ್ಯಾನ್‌ವಾಸ್ ಬಳಸಿ ಪೋಸ್ಟರ್ ತಯಾರಿ ಸ್ಪರ್ಧೆಗಳು ನಡೆಯಿತು.

ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಫುಡ್ ಬ್ಲಾಗರ್ ಅಬ್ದುಲ್ ಬಾಸೀಮ್ ನಳಕತ್ ಭಾಗವಹಿಸಿದರು ಮತ್ತು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆಹಾರ ಮೇಳದ ಅತ್ಯುತ್ತಮ ಸ್ಟಾಲ್ ನ್ನು ಗುರುತಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಎ.ಜಿ.ಎಂ ಕ್ಯಾಂಪಸ್ ಶ್ರೀ ಶರಪುದ್ಧೀನ್ ಪಿ.ಕೆ, ವಿದ್ಯಾರ್ಥಿ ವ್ಯವಹಾರ ಮುಖ್ಯಸ್ಥರಾದ ಶ್ರೀ ಸಯ್ಯದ್ ಅಮೀನ್ ಅಹಮದ್, ಪಿ ಎ ಇ ಟಿ ಯ ಪ್ರಾಂಶುಪಾಲರಾದ ಫ್ರೋ. ಇಸ್ಮಾಯಿಲ್ ಖಾನ್, ಪಿ ಎ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಜಿ ಹರಿಕೃಷ್ಣನ್, ಪೇಸ್ ದೈಹಿಕ ನಿರ್ದೇಶಕರಾದ ಡಾ ಇಕ್ಬಾಲ್, ಪರ್ಚೆಸ್ ಮ್ಯಾನೇಜರ್ ಶ್ರೀ ಹಾರಿಸ್ ಟಿ.ಡಿ, ಪೇಸ್ ಕಾಲೇಜು ಪ್ರವೇಶಾತಿ ಅಧಿಕಾರಿ ಶಫಿನಾಝ್, ಐ.ಕ್ಯೂ.ಎ.ಸಿ ನಿರ್ದೇಶಕಿ ವಾಣಿಶ್ರೀ ವೈ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಮತ್ತು ಕಾರ್ಯಕ್ರಮದ ಸಂಯೋಜಕರಾದ ಅಬ್ದುಲ್ ಸಮೀರ್, ಗುರುರಾಜ್ ಹಾಗೂ ಆಹಾರ ಮೇಳದ ಸಂಯೋಜಕರಾದ ಸಾಜಿರ್ ಅಹ್ಮದ್ ಉಪಸ್ಥಿತರಿದ್ದರು.

ಸ್ಪರ್ಧೆಯ ಭಾಗವಾಗಿ ವಿವಿಧ ವಿಭಾಗಗಳಿಂದ ೧೦ ಕ್ಕೂ ಅಧಿಕ ಸ್ಪರ್ಧೆಗಳನ್ನು ಏರ್ಪಡಿಸಿದ್ದು ೧೫ ಕ್ಕೂ ಅಧಿಕ ಕಾಲೇಜುಗಳು ಭಾಗವಹಿಸದರು ಮತ್ತು ಅದರಲ್ಲಿ ವಿಜೇತರಾದವರ ವಿವರ ಇಂತಿದೆ.

ಟೆಕ್ಟೋನಿಕ್ 3.0ರ ಭಾಗವಾಗಿ ಬ್ರೈನ್ ಬ್ಲಾಸ್ಟ್ ಐಟಿ ಕ್ವಿಝ್ ನಲ್ಲಿ ಪ್ರಥಮ ಎಕ್ಸ್ ಪರ್ಟ್ ಪಿ.ಯು ಕಾಲೇಜ್ ಮತ್ತು ದ್ವಿತೀಯ ಪ್ರಸ್ಟೀಜ್ ಪಿ.ಯು ಕಾಲೇಜ್ ತಮ್ಮದಾಗಿಸಿಕೊಂಡರು.
ಪೋಸ್ಟರ್ ಕ್ವಿಸ್ಟ್ ಅಲ್ಲಿ ಪ್ರಥಮ ಮತ್ತು ದ್ವಿತೀಯ ಕಣಚೂರ್ ಪಿ.ಯು ಕಾಲೇಜ್ ತಮ್ಮದಾಗಿಸಿಕೊಂಡರು.

ಹ್ಯೂಮನಿಸ್ಟ್ 3.0 ರ ಭಾಗವಾಗಿ ಟ್ರಾಂಕ್ಯುಲ್ ಫ್ಲಾಶ್ ನಲ್ಲಿ ಪ್ರಥಮ ಕನಚೂರ್ ಪಿ ಯು ಕಾಲೇಜ್ ಮತ್ತು ದ್ವಿತೀಯ ಕುನಿಲ್ ಪಿ.ಯು ಕಾಲೇಜ್ ತಮ್ಮದಾಗಿಸಿಕೊಂಡರು.
ಕ್ರೋಮ ರೀಲ್ಸ್ ಅಲ್ಲಿ ಪ್ರಥಮ ಕುನಿಲ್ ಪಿ ಯು ಕಾಲೇಜ್ ಮತ್ತು ದ್ವಿತೀಯ ಕಣಚೂರ್ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು.

ಡಯಟೆಕ್ 7.0 ರ ಭಾಗವಾಗಿ ಫ್ರೂಟ್ ಆರ್ಟ್ ಗ್ಯಾಲರಿಯಲ್ಲಿ ಪ್ರಥಮ ವಿಶ್ವಮಂಗಳ ಪಿ ಯು ಕಾಲೇಜ್ ಹಾಗೂ ದ್ವಿತೀಯ ಕಣಚೂರ್ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು.
ನ್ಯೂಟ್ರಿ ಕಾನ್ವಾಸ್ ಅಲ್ಲಿ ಪ್ರಥಮ ವಿಶ್ವಮಂಗಳ ಪಿ ಯು ಕಾಲೇಜ್ ಹಾಗೂ ದ್ವಿತೀಯ ಎಕ್ಸ್ ಪರ್ಟ್ ಪಿ.ಯು ಕಾಲೇಜ್ ತಮ್ಮದಾಗಿಸಿಕೊಂಡರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...