SDTU ಮಂಗಳೂರು ಗ್ರಾಮಾಂತರ ನೂತನ ಜಿಲ್ಲಾಧ್ಯಕ್ಷರಾಗಿ ಸಲೀಮ್ ಜಿಕೆ ಗುರುವಾಯನಕೆರೆ, ಪ್ರ. ಕಾರ್ಯದರ್ಶಿಯಾಗಿ ಸೆಲೀಮ್ ಆಲಾಡಿ

Date:

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಮಂಗಳೂರು ಗ್ರಾಮಾಂತರ ನೂತನ ಜಿಲ್ಲಾ ಸಮಿತಿಯ ಪದಗ್ರಹಣ SDTU ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಸಾಲ್ಮರ ರವರ ಅಧ್ಯಕ್ಷತೆಯಲ್ಲಿ ಪುತ್ತೂರಿನ ಮನಿಷಾ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಕಾರ್ಮಿಕ ಹೋರಾಟದ ಇತಿಹಾಸ ಮತ್ತು ಆ ಹೋರಾಟದ ಫಲವಾಗಿ ಕಾರ್ಮಿಕರ ಶ್ರೇಯೋಭಿವ್ರದ್ದಿಗಾಗಿ ಚಾಲ್ತಿಯಲ್ಲಿದ್ದ ಕಾನೂನನ್ನು ಉದಾರೀಕರಣ, ಖಾಸಾಗಿಕರಣ, ಜಾಗತಿಕರಣದ ಹೆಸರಿನಲ್ಲಿ ಗಾಳಿಗೆ ತೂರಿ ಕಾರ್ಮಿಕರನ್ನು ಸರಕಾರ ಶೋಷಣೆಗೆಯ್ಯುತ್ತಿದೆ ಈ ನಿಟ್ಟಿನಲ್ಲಿ SDTU ಕಾರ್ಮಿಕರನ್ನು ಸಂಘಟಿಸಿ ಅವರಲ್ಲಿ ಪ್ರಜ್ಞಾವಂತಿಕೆ ಮೂಡಿಸಿ ಹಕ್ಕು ಮತ್ತು ಅವಕಾಶಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದೆ ಎಂದರು.

ಸೆಲೀಮ್ ಜಿಕೆ ಗುರುವಾಯನಕೆರೆ

SDTU ರಾಜ್ಯ ಸಹ ಸಂಚಾಲಕ ಖಾದರ್ ಫರಂಗಿಪೇಟೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯನ್ನು ಘೋಷಣೆ ಮಾಡಿದರು

2025-28 ರ ಅವಧಿಗೆ ನೂತನ ಜಿಲ್ಲಾಧ್ಯಕ್ಷರಾಗಿ ಸೆಲೀಮ್ ಜಿಕೆ ಗುರುವಾಯನಕೆರೆ, ಉಪಾಧ್ಯಕ್ಷರಾಗಿ ಫಿಲಿಫ್ ಹೆನ್ರಿ ಡಿಸೋಜ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಮ್ ಆಲಾಡಿ, ಕಾರ್ಯದರ್ಶಿಯಾಗಿ ಫಝಲ್ ಉಜಿರೆ ಕೋಶಾಧಿಕಾರಿ ಹನೀಫ್ ನೆಲ್ಯಾಡಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶ್ರಫ್ ಕಲ್ಲೇರಿ ಇಸಾಕ್ ತಲಪಾಡಿ, ಹಮೀದ್ ಕೂರ್ನಡ್ಕ, ಮುಬಾರಕ್ ಪೊನ್ನೋಡಿ, ಅಝೀಜ್ ಉಪ್ಪಿನಂಗಡಿ ಯವರು ಆಯ್ಕೆಯಾದರು

ಸಲೀಮ್ ಆಲಾಡಿ

ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಬೆಂಗರೆ, ಕರ್ನಾಟಕ ರಾಜ್ಯ ರೈತ ಸಂಘ ಬಂಟ್ವಾಳ ತಾಲೂಕು ಕಾರ್ಯದರ್ಶಿ ಎನ್. ಕೆ ಇದ್ದಿನಬ್ಬ, ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘ ಪುತ್ತೂರು ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಭಾರತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಬನ್ನೂರ್, ನೇತ್ರಾವತಿ ಆಟೋ ಚಾಲಕ ಮಾಲಕರ ಸಂಘದ ಉಪ್ಪಿನಂಗಡಿ ಅಧ್ಯಕ್ಷ ಫಾರೂಕು ಝಿಂದಗಿ, ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ಏರಿಯಾ ಅಧ್ಯಕ್ಷ ಅಸಿಫ್ ಮುಕ್ವೆ ಉಪಸ್ಥಿತರಿದ್ದರು
ಸಿದ್ದೀಕ್ ಬೀಟಿಗೆ ನಿರೂಪಿಸಿ ಸೆಲೀಮ್ ಆಲಾಡಿ ಧನ್ಯವಾದಗೈದರು

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...