ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಕಂಬಳದ ಪ್ರಥಮ ಹಂತದ ಪೂವ೯ಭಾವಿ ಸಭೆ

Date:

ಮೂಡುಬಿದಿರೆ : ಇತಿಹಾಸ ಪ್ರಸಿದ್ಧ ವೀರ – ವಿಕ್ರಮ ಜೋಡುಕರೆ ಕಂಬಳ ಹೊಕ್ಕಾಡಿಗೋಳಿ ಇದರ ಪ್ರಥಮ ಹಂತದ ಪೂರ್ವಭಾವಿ ಸಭೆಯು ಕಂಬಳ ಸಮಿತಿಯ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಂಬಳ ವಠಾರದಲ್ಲಿ ಭಾನುವಾರ ನಡೆಯಿತು.


ಡಿಸೆಂಬರ್ 21ರಂದು ಹೊಕ್ಕಾಡಿಗೋಳಿ ಕಂಬಳವು ವಿಜೃಂಭಣೆಯಿಂದ ಜರಗಲಿದೆ ಎಂದು ಸಭೆಯಲ್ಲಿ ಘೋಷಿಸಲಾಯಿತು. ಶೀಘ್ರದಲ್ಲಿ ಕಂಬಳದ ಆಮಂತ್ರಣ ಪತ್ರ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.

ಮುಂದಿನ ವಾರ ಕರೆ ಮುಹೂರ್ತವು ನಡೆಯಲಿದ್ದು ಕಂಬಳಕ್ಕೆ ಸಹಕರಿಸುವ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು, ಭಜನಾ ಮಂಡಳಿಯ ಸದಸ್ಯರು, ಕಂಬಳಾಭಿಮಾನಿಗಳು ಕುದಿ ಕಂಬಳ ನಡೆಸಲು ಶ್ರಮದಾನದ ಮೂಲಕ ಕೈಜೋಡಿಸುವಂತೆ ವಿನಂತಿಸಲಾಯಿತು.

ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ, ಗೌರವ ಸಲಹೆ ಗಾರರು, ಕಾರ್ಯದರ್ಶಿ, ಉಪಾಧ್ಯಕ್ಷರುಗಳು, ಗೌರವನ್ವಿತ ಸದಸ್ಯರು , ಪದಾಧಿಕಾರಿಗಳು, ಊರ ಪ್ರಮುಖರು, ಕಂಬಳಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

‘ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ’ ಆದ್ಯಾತ್ಮಿಕ ಜಾಥಾ

ಉಳ್ಳಾಲ‌: ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ಭಾನುವಾರ ನಡೆದ 'ನಮ್ಮ...

ಮಸ್ಜಿದ್ ಬಿಲಾಲ್ ಸಜಿಪನಡು ಇದರ ನೂತನ ಅಧ್ಯಕ್ಷರಾಗಿ ಜಾಬಿರ್ ಮತ್ತು ಕಾರ್ಯದರ್ಶಿಯಾಗಿ ಇರ್ಶಾದ್

ಉಳ್ಳಾಲ: ಮಸ್ಜಿದ್ ಬಿಲಾಲ್ ಸಲಫಿ ಜುಮಾ ಮಸೀದಿ ಸಜಿಪನಡು ಇದರ ವಾರ್ಷಿಕ...

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...