ಉಳ್ಳಾಲ: ಕಥೊಲಿಕ್ ಸಭಾ ಮಂಗಳೂರು ಪ್ರದೇಶ, ರಾಣಿಪುರ ಘಟಕದ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ-2025 ಹಾಗೂ ವೃತ್ತಿ ಮಾರ್ಗದರ್ಶನ ಮಾಹಿತಿ ಶಿಬಿರ ಕಾರ್ಯಕ್ರಮ ರಾಣಿಪುರ ಚರ್ಚ್ ಸಭಾಂಗಣದಲ್ಲಿ ನಡೆಯಿತು.
.
ರಾಣಿಪುರ ಚರ್ಚ್ ಧರ್ಮಗುರು ಜಯಪ್ರಕಾಶ್ ಡಿ ಸೋಜ ಕಾರ್ಯಕ್ರಮ ಉದ್ಘಾಟಿಸಿದರು.
ಅತ್ಯಧಿಕ ಅಂಕ ಗಳಿಸಿದ ಎಸ್ಸೆಸ್ಸೆಲ್ಸಿಯ 10 ವಿದ್ಯಾರ್ಥಿಗಳು, ಪಿಯುಸಿಯ ಇಬ್ಬರು ವಿದ್ಯಾರ್ಥಿಗಳು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಥೊಲಿಕ್ ಸಭಾದ ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷ್ ಡಿ ಸೋಜ ಅವರನ್ನು ಸನ್ಮಾನಿಸಲಾಯಿತು.
ಟ್ರೀಜಾ ಮೊಂತೇರೊ, ಹೆರಾಲ್ಡ್ ಲೋಬೊ, ವಿಲ್ಫ್ರೆಡ್ ಡಿ ಸೋಜ, ನೆಲ್ಸನ್ ಡಿಲೀಮಾ
. ಫೆಲಿಕ್ಸ್ ಮೊಂತೇರೊ . ಅಲೋಶಿಯಸ್ ಕಾಲೇಜು ನಿವೃತ್ತ ಪ್ರೊಫೆಸರ್ ಡಾ.ಜೋನ್ ಡಿ ಸಿಲ್ವ ಅವರು ವೃತ್ತಿ ಮಾರ್ಗದರ್ಶನ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ರಾಣಿಪುರ ಕಾನ್ವೆಂಟ್ ಸುಪೀರಿಯರ್ ಲವೀಟಾ ಡಯಾಸ್, ಕ್ಯಾಥೊಲಿಕ್ ಸಭಾ ವಲಯ ಅಧ್ಯಕ್ಷ ಡೊಲ್ಫಿ ಡಿ ಸೋಜ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಅರುಣ್ ಮೊಂತೇರೊ, ಆಯೋಗಗಳ ಸಂಯೋಜಕ ನೆವಿಲ್ ಡಿಸೋಜ, ಘಟಕ ಅಧ್ಯಕ್ಷ ಲವೀನ ಡಿಸೋಜ ಮತ್ತು ಕಾರ್ಯದರ್ಶಿ ಎಮಿಲಿಯಾನಾ ಗೊನ್ಸಾಲ್ವಿಸ್ ,ರೋಜಲಿನ್ ಡಿ ಸೋಜ ಉಪಸ್ಥಿತರಿದ್ದರು.
ಕಥೊಲಿಕ್ ಸಭಾ ರಾಣಿಪುರ ಘಟಕದ ಅಧ್ಯಕ್ಷ ಲವೀನ ಗ್ರೆಟ್ಟ ಡಿ ಸೋಜ ಸ್ವಾಗತಿಸಿದರು. ಕಾರ್ಯದರ್ಶಿ ಎಮಿಲಿಯಾನಾ ಗೊನ್ಸಾಲ್ವಿಸ್ ವಂದಿಸಿದರು. ವಿಲ್ಮ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.