ಪ.ಪೂ. ಕಾಲೇಜುಗಳ ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ಸ್: ಆಳ್ವಾಸ್ ಗೆ 11 ಪದಕ

Date:

ಮೂಡುಬಿದಿರೆ : ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮೈಸೂರು ಹಾಗೂ ಆರ್ ವಿ ಪದವಿಪೂರ್ವ ಕಾಲೇಜು, ಮೈಸೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕಿಯರ ಅಥ್ಲೆಟಿಕ್ಸ್ ನಲ್ಲಿ ಆಳ್ವಾಸ್ ಪಿಯು ಕಾಲೇಜು ಒಟ್ಟು 7 ಚಿನ್ನ, 3 ಬೆಳ್ಳಿ ಮತ್ತು 01 ಕಂಚಿನ ಪದಕಗಳೊಂದಿಗೆ ಒಟ್ಟು 11 ಪದಕಗಳನ್ನು ಪಡೆದುಕೊಂಡಿತು. ಜೊತೆಯಲ್ಲಿ ರಾಷ್ಟ್ರ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ 8 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ: ನಾಗಿಣಿ – 800ಮೀ (ಪ್ರಥಮ), 1500ಮೀ (ಪ್ರಥಮ), ಗುಡ್ಡಗಾಡು ಓಟ (ಪ್ರಥಮ), 4400ಮೀ ರಿಲೇ (ಪ್ರಥಮ), ಚರಿಷ್ಮಾ – 3000ಮೀ (ಪ್ರಥಮ), 1500ಮೀ (ದ್ವಿತೀಯ), ಗುಡ್ಡಗಾಡು ಓಟ (ದ್ವಿತೀಯ), 4400ಮೀ ರಿಲೇ (ಪ್ರಥಮ), ಗೋಪಿಕಾ ಜಿ – 100ಮೀ (ಪ್ರಥಮ), 4100ಮೀ ರಿಲೇ (ಪ್ರಥಮ), ಮಾನ್ವಿ ವಿ ಶೆಟ್ಟಿ – 4100ಮೀ. ರಿಲೇ (ಪ್ರಥಮ), ಭಾನವಿ – 4100ಮೀ ರಿಲೇ (ಪ್ರಥಮ), ವೈಷ್ಣವಿ – 4100ಮೀ ರಿಲೇ (ಪ್ರಥಮ), ನಿರ್ಮಲಾ – 400ಮೀ ಹರ್ಡಲ್ಸ್ (ದ್ವಿತೀಯ), 4400ಮೀ ರಿಲೇ (ಪ್ರಥಮ), ಜಾನಕಿ ಜಿ ಸಿ – 4400ಮೀ. ರಿಲೇ (ಪ್ರಥಮ), ಗಾನವಿ – 800ಮೀ (ತೃತೀಯ) ಸ್ಥಾನ ಪಡೆದಿದ್ದಾರೆ. ವೈಯಕ್ತಿಕ ಪ್ರಶಸ್ತಿಯನ್ನು ಆಳ್ವಾಸ್ ಕ್ರೀಡಾಪಟು ನಾಗಿಣಿ ಪಡೆದುಕೊಂಡರು.


ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ ಆಳ್ವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜುಲೈ 20: ಕಲ್ಲಡ್ಕ ಮಸೀದಿಯ ನೂತನ ಖಾಝಿಯಾಗಿ ಜಿಫ್ರಿ ಮುತ್ತುಕೋಯಾ ತಂಙಳ್ ಅಧಿಕಾರ ಸ್ವೀಕಾರ

ಬಂಟ್ವಾಳ: ಇತ್ತೀಚೆಗೆ ನಿಧನರಾದ ಶೈಖುನಾ ತ್ವಾಖಾ ಉಸ್ತಾದ್ ಅವರ ಉತ್ತರಾಧಿಕಾರಿಯಾಗಿ ಕಲ್ಲಡ್ಕ...

ಉಚ್ಚಿಲ: ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ಸ್ಪೀಡ್-೧೦೦ ಮಾರುಕಟ್ಟೆಗೆ ಬಿಡುಗಡೆ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಪರಿಚಯಿಸಿರುವ ಅತಿ ಉನ್ನತ ಮಟ್ಟದ...

ಟಿಪ್ಪುನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವದ ಸ್ವಾಗತ ಸಮಿತಿ ರಚನೆ

ವಿಟ್ಲ: ವಿಟ್ಲದ ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ...