ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಿಸದಂತೆ ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದು ಅತ್ಯಂತ ಖಂಡನೀಯ

Date:

ಬೆಂಗಳೂರು: ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಆಚರಣೆಯನ್ನು ಘೋಷಿಸುವ ಮೊದಲು ಶ್ರೀರಂಗಪಟ್ಟಣ ಸಹಿತ ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನು ರಾಜಾರೋಷವಾಗಿ ಬಹಳ ಸಂಭ್ರಮದಿಂದ ಜನತೆ ಆಚರಿಸುತ್ತಿದ್ದರು. ಯಾರ ಬೇಡಿಕೆ ಇಲ್ಲದೆ, ಏಕಾಏಕಿ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಟಿಪ್ಪು ಜಯಂತಿ ಆಚರಿಸುವ ಘೋಷಣೆ ಮಾಡಿ, ಕೇವಲ ಬಿಜೆಪಿ ಮತ್ತು ಸಂಘಪರಿವಾರದ ಒತ್ತಡಕ್ಕೆ ಮಣಿದು ತಾನು ಟಿಪ್ಪು ಜಯಂತಿಯನ್ನು ಆಚರಿಸುವುದನ್ನು ಕೈ ಬಿಟ್ಟಿದಲ್ಲದೇ ಶ್ರೀರಂಗಪಟ್ಟಣ ಸೇರಿದಂತೆ ರಾಜ್ಯಾದ್ಯಂತ ಜನತೆ ಖಾಸಗಿಯಾಗಿಯೂ ಜಯಂತಿ ಆಚರಿಸಲೂ ನಿಷೇಧ ಹೇರಿ ಮೃದು ಹಿಂದುತ್ವವನ್ನು ಪ್ರದರ್ಶಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ರವರನ್ನು ಅವಮಾನಿಸಲಾಗಿದೆ. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಅಭಿಮಾನಿಗಳಿಗೆ ಟಿಪ್ಪು ಸಮಾಧಿಯ ದರ್ಶನ ಮಾಡಕ್ಕೂ ಅವಕಾಶ ನಿರಾಕರಿಸಿದ ರಾಜ್ಯ ಸರ್ಕಾರ ಬಜರಂಗದಳದ ಅನೇಕ ಕಾರ್ಯಕ್ರಮಗಳಿಗೆ ಶ್ರೀರಂಗಪಟ್ಟಣದಲ್ಲಿ ಅವಕಾಶ ನೀಡಿತ್ತು. ಇದರಿಂದ ಕಾನೂನು ಸುವ್ಯಸ್ಥೆ ಹಾಳಾಗಲ್ಲಿಲವೇ..?

ಟಿಪ್ಪು ಸುಲ್ತಾನ್ ಮುಸ್ಲಿಂ ಅಲ್ಲದೆ, ಈ ನೆಲದ ಬೇರೆ ಯಾವುದೇ ಪ್ರಬಲ ಜಾತಿಯಲ್ಲಿ ಹುಟ್ಟಿದ್ದರೆ, ಟಿಪ್ಪು ಸಾಧನೆಗಾಗಿ ಅವರನ್ನು ಜಾಗತಿಕ ನಾಯಕನಾಗಿ ಈ ನಮ್ಮ ರಾಜಕೀಯ ವ್ಯವಸ್ಥೆ ವಿಜೃಂಭಿಸುತಿತ್ತು. ಟಿಪ್ಪು ಕೇವಲ ಮುಸ್ಲಿಂನಾಗಿರುವುದಕ್ಕಾಗಿಯೇ ಈ ದುರಂತಮಯ ವಾತಾವರಣ ಕಾಣಲು ಸಿಗುತ್ತಿದೆ.

ಚುನಾವಣೆಯ ಸಂದರ್ಭದಲ್ಲಿ ತಾನು ಜಾತ್ಯತೀತ ತತ್ವವನ್ನು ಪ್ರತಿಪಾದಿಸುವ ಪಕ್ಷ, ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಗುಲ್ಲೆಬ್ಬಿಸಿ,

ಮುಕ್ತ ಮುಸ್ಲಿಂ ಸಮುದಾಯದ ಮತವನ್ನು ಪಡೆದು ಅಧಿಕಾರ ಹಿಡಿದ ನಂತರ ಎಂದಿನಂತೆ ಮುಸ್ಲಿಂ ಸಮುದಾಯಕ್ಕೆ ಮೋಸ ಮಾಡುವುದು ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯಾಗಿ ಬಿಟ್ಟಿದೆ. ಕಾಂಗ್ರೆಸ್ ಪಕ್ಷದ ಈ ಒಳವರ್ಮವನ್ನು ಮುಸ್ಲಿಂ ಸಮುದಾಯ ಅರ್ಥ ಮಾಡಿಕೊಳ್ಳಲ್ಲಿಲ್ಲ ಎಂದರೆ ಅದು ಆತ್ಮಹತ್ಯೆ ಮಾಡಿಕೊಂಡಂತೆ ಆಗುತ್ತದೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...