ಮಂಗಳೂರು: ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ರವರಿಗೆ BNSS ಕಾಯ್ದೆ 130 ಅಡಿಯನ್ನು ದುರುಪಯೋಗ ಪಡಿಸಿಕೊಂಡು ಪೋಲಿಸ್ ಇಲಾಖೆ ತಾಲೂಕು ದಂಡಾಧಿಕಾರಿಗಳ ಮೂಲಕ ಐದು ಲಕ್ಷ ರೂಪಾಯಿ ಬಾಂಡ್ ಹಾಗೂ ಜಾಮೀನು ಮುಚ್ಚಳಿಕೆ ನೀಡುವಂತೆ ನೋಟಿಸ್ ನೀಡಿರುವ ಇಲಾಖೆಯ ನಡೆಯನ್ನು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಕೆ.ಎ ಪುತ್ತೂರು ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪುತ್ತೂರಿನ ಸಜ್ಜನ ರಾಜಕಾರಣಿಯಲ್ಲಿ ಓರ್ವರಾಗಿರುವ ಅಶ್ರಫ್ ಕಲ್ಲೇಗ ರವರು ಸಾಮಾಜಿಕ,ರಾಜಕೀಯ ಹಾಗೂ ಧಾರ್ಮಿಕ ನೆಲೆಗಟ್ಟಿನಲ್ಲಿ ಜಾತಿ-ಪಕ್ಷ ಭೇದ ಮರೆತು ಜನರೊಂದಿಗೆ ಉತ್ತಮ ಸಂಪರ್ಕದಲ್ಲಿರುವ ಹಾಗೂ ಪೊಲೀಸ್ ಇಲಾಖೆಯೊಂದಿಗೂ ಸಹಕರಿಸುವಂತಹ ಸಜ್ಜನ ಮೃದು ಸ್ವಭಾವದ ಹಾಗೂ ಸತ್ಯವನ್ನು ಗಟ್ಟಿ ಧ್ವನಿಯಲ್ಲಿ ಹೇಳುವ ವ್ಯಕ್ತಿಯಾಗಿದ್ದಾರೆ. ಅವರ ಮೇಲೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಅಥವಾ ಗಂಭೀರ ಸ್ವರೂಪದ ಪ್ರಕರಣದಲ್ಲಿ ಭಾಗಿಯಾದವರೋ ಅಥವಾ ಕೇಸ್ ನಲ್ಲಿ ಇರುವ ವ್ಯಕ್ತಿಯೋ ಅಲ್ಲದಿರುವಾಗ ಅವರಿಗೆ BNSS ಕಾಯಿದೆಯ 130 ರ ಅಡಿಯಲ್ಲಿ ಐದು ಲಕ್ಷ ರೂಪಾಯಿ ಬಾಂಡ್ ಹಾಗೂ ಜಾಮೀನು ಮುಚ್ಚಳಿಕೆ ನೋಟಿಸ್ ನೀಡುವ ಅಗತ್ಯ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಈಶ್ವರಮಂಗಳದ ನಕಲಿ ಶೂಟೌಟ್ ಹಾಗೂ ಧರ್ಮಸ್ಥಳದ ಮನೆ ಜಪ್ತಿ ಪ್ರಕರಣದ ಬಗ್ಗೆ ಅವರು ಪತ್ರಿಕಾಗೋಷ್ಠಿಯಲ್ಲಿ ಧ್ವನಿ ಎತ್ತಿದ ಕಾರಣದಿಂದಾಗಿ ಪೋಲಿಸ್ ಇಲಾಖೆ ಅವರ ಮೇಲೆ ರಿವೇಂಜ್ ತೀರಿಸುವ ನಿಟ್ಟಿನಲ್ಲಿ ಈ ಪ್ರಕರಣ ದಾಖಲಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ, ನಿರಂತರವಾಗಿ ಪೊಲೀಸ್ ಇಲಾಖೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ಕಾಣುವಾಗ ಜಿಲ್ಲೆ ನಿದಾನವಾಗಿ ಅಘೋಷಿತ ತುರ್ತು ಪರಿಸ್ಥಿತಿಯತ್ತ ಹೋಗುತ್ತಿರುವ ಲಕ್ಷಣಗಳು ಕಾಣುತ್ತಿದೆ, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು SDPI ಆತಂಕ ವ್ಯಕ್ತಪಡಿಸಿದೆ .
ಅಶ್ರಫ್ ಕಲ್ಲೇಗ ಅವರಿಗೆ 5 ಲಕ್ಷ ರೂ. ಬಾಂಡ್ ಮುಚ್ಚಳಿಕೆ ನೀಡಿರುವ ಪೊಲೀಸ್ ಇಲಾಖೆಯ ನೋಟಿಸ್ ಅಘಾತಕಾರಿ ಹಾಗೂ ಕಾನೂನಿನ ಅತಿರೇಕವಾಗಿದೆ. ಯಾವುದೇ ಪ್ರಕರಣ ಅಥವಾ ಕಾನೂನು ಉಲ್ಲಂಘನೆಯ ಆರೋಪಗಳು ಇಲ್ಲದಿದ್ದರೂ, ಅಶ್ರಫ್ ಕಲ್ಲೇಗ ಅವರಿಗೆ ಈ ರೀತಿಯ ನೋಟಿಸ್ ನೀಡಿರುವುದು ಸರ್ಕಾರದ ವಿರೋಧಿ ಧ್ವನಿಯನ್ನು ನಿಶ್ಶಬ್ದಗೊಳಿಸಲು ಪ್ರಯತ್ನಿಸುವ ಕ್ರಮವಾಗಿದೆ.
ಅವರು ಸಾರ್ವಜನಿಕ ಹಿತದೃಷ್ಟಿಯಿಂದ, ಜನತೆ ಪರವಾಗಿ, ಸರ್ಕಾರದ ವಿರುದ್ಧ ಪ್ರಶ್ನೆ ಎತ್ತಿರುವುದೇ ಈ ಕ್ರಮಕ್ಕೆ ನಿಜವಾದ ಕಾರಣ ಎಂದು ನಾವು ನಂಬುತ್ತೇವೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ವಿರುದ್ಧ ಮಾತನಾಡುವುದು ಅಪರಾಧವಲ್ಲ. ಅಧಿಕಾರ ದುರುಪಯೋಗ ಮಾಡಿ ನಾಗರಿಕರ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ನಾವು ಖಂಡಿಸುತ್ತೇವೆ.
ಪೊಲೀಸ್ ನೋಟಿಸ್ ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಹಾಗೂ ಪೊಲೀಸರು ಈ ರೀತಿಯ ಬೆದರಿಕೆಯ ತಂತ್ರವನ್ನು ನಿಲ್ಲಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಮತ್ತು ನಾವು ಅಶ್ರಫ್ ಕಲ್ಲೇಗ ರವರೊಂದಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


