ಮೂಡುಬಿದಿರೆ: ಹಿರಿಯ ಉದ್ಯಮಿ, ಪಂಚಾಯತ್ ಬೋರ್ಡ್ ಮಾಜಿ ಸದಸ್ಯ, ಸಾಮಾಜಿಕ ಪ್ರಮುಖ ಜಿ. ಮೋಹನ ಶೆಣೈ ( 88ವ) ಬೆಂಗಳೂರಿನ ವಾತ್ಸಲ್ಯ ನಿವಾಸದಲ್ಲಿ ಸೋಮವಾರ ನಿಧನ ಹೊಂದಿದರು.

ಅವರು ಪತ್ನಿ, ಆರು ಮಂದಿ ಪುತ್ರರನ್ನು ಅಗಲಿದ್ದಾರೆ.ವರ್ತಕರಾಗಿ, ಉದ್ಯಮಿಯಾಗಿ ಮೂಡುಬಿದಿರೆಯಲ್ಲಿ ಸಾಮಾಜಿಕ ರಂಗದಲ್ಲಿಯೂ ಶೆಣೈಯವರು ಗುರುತಿಸಿಕೊಂಡಿದ್ದರು. ಜಿ. ವಾಸುದೇವ ಪೈ ಅವರಂತಹ ಸಾಮಾಜಿಕ ಧುರೀಣರ ನಿಕಟವರ್ತಿಯಾಗಿ ಸಮಾಜ ಮಂದಿರ ಸಭಾ,ಜಿ.ವಿ.ಪೈ ಮೆಮೋರಿಯಲ್ ಟ್ರಸ್ಟ್ , ರೋಟರಿ ಎಜುಕೇಶನ್ ಸೊಸೈಟಿಯ ಸ್ಥಾಪಕ ಸದಸ್ಯರಾಗಿ, ಬಾಬುರಾಜೇಂದ್ರ ಪ್ರೌಢ ಶಾಲಾ ಟ್ರಸ್ಟ್ ಸದಸ್ಯರಾಗಿ, ಐದು ದಶಕಗಳ ಕಾಲ ಮೂಡುಬಿದಿರೆ ರೋಟರಿ ಕ್ಲಬ್ ಮೂಲಕವೂ ಸಾಮಾಜಿಕ ಸೇವಾ ರಂಗದಲ್ಲಿ, ರಾಜಕೀಯ ರಂಗದಲ್ಲಿಯೂ ಅವರು ಸಕ್ರಿಯರಾಗಿದ್ದರು.


