ಮೂಡುಬಿದಿರೆ : ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್ ಅವರಿಗೆ ರಾಜ್ಯದ ಪ್ರತಿಷ್ಠಿತ ಸಹಕಾರಿ ರತ್ನ ಪ್ರಶಸ್ತಿ ದೊರೆತಿದೆ.

ಜಿಲ್ಲೆಯ ಹಲವಾರು ಸಹಕಾರಿ ಸಂಘಗಳಲ್ಲಿ ನಿರ್ದೇಶಕರಾಗಿ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರವನ್ನು ಮುನ್ನಡೆಸಿದ ಕೋಟ್ಯಾನ್ ಅವರು ಸಹಕಾರಿ ಕ್ಷೇತ್ರ ಮಾತ್ರ ಅಲ್ಲದೆ ಕಂಬಳ, ಕೃಷಿ, ಹೋಟೆಲ್ ಉದ್ಯಮ ಕ್ಷೇತ್ರದಲ್ಲೂ ಸಾಧನೆಗೈದಿದ್ದಾರೆ.
ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಹಲವಾರು ಉಪಸಮಿತಿ ಅಧ್ಯಕ್ಷರಾಗಿ ಬ್ಯಾಂಕ್ ಪ್ರಗತಿಗೆ ಶ್ರಮಿಸಿದವರಲ್ಲಿ ಒಬ್ಬರು. ಬೆಳುವಾಯಿ ಸೊಸೈಟಿ ಅಧ್ಯಕ್ಷರಾಗಿ ಚುಕ್ಕಾಣಿ ಪಡೆದ ನಂತರ ಸೊಸೈಟಿ ವೇಗವಾಗಿ ಬೆಳವಣಿಗೆ ಪಡೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.


