ಪಡುಮಾನಾ೯ಡು ಗ್ರಾ.ಪಂ ಮಾಜಿ ಅಧ್ಯಕ್ಷ ದಿ. ಶ್ರೀನಾಥ್ ಸುವಣ೯ ಶ್ರದ್ಧಾಂಜಲಿ ಸಭೆ

Date:

ಮೂಡುಬಿದಿರೆ : ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕ ದಿ. ಶ್ರೀನಾಥ ಸುವರ್ಣರ ಶ್ರದ್ಧಾಂಜಲಿ ಸಭೆಯು ಬೆಳುವಾಯಿ ಕಂಡಿಗ ಗ್ರೀನ್ ನಲ್ಲಿ ಬುಧವಾರ ನಡೆಯಿತು.

ಶಾಸಕ ಉಮಾನಾಥ ಕೋಟ್ಯಾನ್ ಅವರು ಶ್ರದ್ಧಾಂಜಲಿ ಅಪಿ೯ಸಿ ಮಾತನಾಡಿ ಬದುಕಿದಾಗ ಸಮಾಜಕ್ಕೆ ನಾವು ಏನು ಮಾಡಿದ್ದೇವೆ ಎನ್ನುವುದೇ ನಮ್ಮ ಜೀವನದ ಅಂತ್ಯದವರೆಗೆ ಉಳಿಯುತ್ತದೆ. ಪಡುಮಾರ್ನಾಡು ಗ್ರಾಮ ಪಂಚಾಯತ್ ನಲ್ಲಿ ರಸ್ತೆಯೊಂದಕ್ಕೆ ಶ್ರೀನಾಥ್ ಹೆಸರು ನಾಮಕರಣಗೊಳಿಸುವಂತೆ ಸಲಹೆಯಿತ್ತರು.

ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ನಾರಾಯಣ ಪಿ. ಎಂ, ಬಿಜೆಪಿ ಮುಖಂಡ ಕೆ. ಪಿ ಜಗದೀಶ್ ಅಧಿಕಾರಿ, ಎಸ್ ಕೆ ಎಫ್ ಎಲಿಕ್ಷರ್ ಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್, ನಿವೃತ ಸಹಾಯಕ ಆಯುಕ್ತ ಅಚ್ಚುತ, ಬಿಜೆಪಿ ಮುಖಂಡ ರಂಜಿತ್ ಪೂಜಾರಿ, ರಾಜೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಬೆಳುವಾಯಿ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್ ಸೇರಿದಂತೆ ಹಿತೈಷಿಗಳು ಗಣ್ಯರು ಭಾಗವಹಿಸಿದ್ದರು.

ಭಾಸ್ಕರ್ ಆಚಾರ್ಯ ನಿರೂಪಿಸಿದರು. ಮೃತರ ಮಾತೃಶ್ರೀ ಸುಮತಿ ಸುವರ್ಣ, ಪತ್ನಿ ಸಹೋದರರು ಹಾಗೂ ಕುಟುಂಬಿಕರು ಈ ಸಂದಭ೯ದಲ್ಲಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೂ.28: ಮೂಡಬಿದಿರೆಯಲ್ಲಿ ಇನ್ನರ್ ವ್ಹೀಲ್ ಜಿಲ್ಲಾ 318ರ 57ನೇ ಜಿಲ್ಲಾ ಅಸೆಂಬ್ಲಿ ‘ರೋಶ್ನಿ’ ಕಾಯ೯ಕ್ರಮ

ಮೂಡಬಿದಿರೆ: ಇನ್ನರ್ ವ್ಹೀಲ್ ಜಿಲ್ಲಾ 318ರ 57ನೇ ಜಿಲ್ಲಾ ಅಸೆಂಬ್ಲಿ ‘ರೋಶ್ನಿ’...

ಕಲ್ಲಡ್ಕ: ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಗೆ ಸಂಚಾರಿ ಪೊಲೀಸರಿಂದ ಬ್ರೇಕ್

ಬಂಟ್ವಾಳ: ಕಲ್ಲಡ್ಕ ಪೇಟೆಯ ಸರ್ವಿಸ್ ರಸ್ತೆಯ ಎರಡೂ ಬದಿಗಳಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್...

ಕಣಚೂರು ಪಬ್ಲಿಕ್ ಸ್ಕೂಲಿನಲ್ಲಿ ವಿದ್ಯಾರ್ಥಿ ನಾಯಕತ್ವ ಪದಗ್ರಹಣ ಸಮಾರಂಭ ಹಾಗೂ 2025–26ನೇ ಸಾಲಿನ CBSE -10ನೇ ತರಗತಿ ಸಾಧಕರ ಸನ್ಮಾನ

ಉಳ್ಳಾಲ: ಕಣಚೂರು ಪಬ್ಲಿಕ್ ಸ್ಕೂಲ್, ದೇರಳಕಟ್ಟೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ...