ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಶೋಡಶಿ ಫೌಂಡೇಶನ್

Date:

ಎರಡು ದಿನ ನಿರಂತರ‌ 40 ಗಂಟೆಗಳ ಕಾಲ ಹಾಡುವ ಮೂಲಕ ತಂಡ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ

ಮಂಗಳೂರು: ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೋಲ್ಡರ್, ಜೀ ಕನ್ನಡದ ಸಾ ರೆ ಗ ಮಾ ಖ್ಯಾತಿಯ ಯಶವಂತ್ ಎಂ.ಜಿ. ಮಾರ್ಗದರ್ಶನದಲ್ಲಿ ಶೋಡಶಿ ಫೌಂಡೇಶನ್ ವತಿಯಿಂದ, ಭಾರತೀಯ ಸಿನೀ ಸಂಗೀತ ಲೋಕದ ಅಮರ ಗಾಯಕ ಕಿಶೋರ್ ಕುಮಾರ್ ಅವರಿಗೆ ಗೌರವವಾಗಿ ಮಂಗಳೂರು ಪುರಭವನದಲ್ಲಿ “ಗಾತಾ ರಹೇ ಮೇರಾ ದಿಲ್ ” ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯಿತು.

ನವೆಂಬರ್ 18ರಂದು ಬೆಳಿಗ್ಗೆ 2.00 ಗಂಟೆಗೆ – ಪ್ರಾರಂಭಗೊಂಡ ಈ ಹಾಡುಗಳ ಸರಣಿ, 19ರಂದು ಸಂಜೆ 6.00 ಗಂಟೆಗೆ ಸಮಾಪ್ತಿಗೊಂಡಿತು. ಮಹಾ ಸಂಗೀತ ಸಂಭ್ರಮದಲ್ಲಿ ನೂರಕ್ಕೂ ಹೆಚ್ಚು ಹಾಡುಗಾರರು ಪಾಲ್ಗೊಂಡಿದ್ದರು. ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಕಿಶೋರ್ ಕುಮಾರ್ ಅವರ ಪ್ರಮುಖ ಗೀತೆಗಳೊಂದಿಗೆ 40 ಗಂಟೆಗಳ ನಿರಂತರ ಗಾಯನ ಪ್ರದರ್ಶನ ನಡೆಯಿತು.

ಈ ಕಾರ್ಯಕ್ರಮವನ್ನು ಕರ್ನಾಟಕದ ಪ್ರಖ್ಯಾತ ಹಾಗೂ ಗೌರವಾನ್ವಿತ ಗಾಯಕರಿಂದ ನಡೆಸಲಾಗಿದ್ದು, ಸಂಗೀತಾಭಿಮಾನಿಗಳಿಗೆ ಸಾಂಸ್ಕೃತಿಕ ಹಬ್ಬದಂತೆಯೇ ಸಂಭ್ರಮ ನೀಡಿತು. ದಾಖಲೆ ಪೂರೈಸಿದ ಶೋಡಶಿ ಫೌಂಡೇಶನ್ ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಮನೀಷ್ ಬಿಷ್ಣೋಯ್, ಶಾಸಕ ವೇದವ್ಯಾಸ ಕಾಮತ್ ಪ್ರಮಾಣ ಪತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ‌ ವೇದವ್ಯಾಸ ಕಾಮತ್ ಈ ರೀತಿಯ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ದೇವಸ್ಥಾನಗಳಲ್ಲಿ ನಿರಂತರ ಭಜನೆ ಕೂಡಾ ನಡೆಯುತ್ತದೆ. ಆದರೆ ಆಧ್ಯಾತ್ಮಿಕ ಕಾರಣಕ್ಕಾಗಿ ಅದನ್ನು ದಾಖಲೆಗೆ ಬಳಸುವುದಿಲ್ಲ. ಇಂತಹ ಸಾಧನೆಗಳು ಮತ್ತಷ್ಟು ನಡೆಯಬೇಕು. ಇಂತಹ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಶಿವರಾಮ್ ಕೆ.ಭಂಡಾರಿ, ಅತ್ಯಂತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು. ತಮ್ಮ ಕಸುಬನ್ನು ಪರಿಶ್ರಮ ಮತ್ತು ಪ್ರೀತಿಯಿಂದ ಕೆಲಸ ಮಾಡಿದರೆ ಉನ್ನತ ಸ್ಥಿತಿಗೆ ಏರಬಹುದು ಎಂದರು. ಮಣಿಕಾಂತ ಕದ್ರಿ ಮಾತನಾಡಿ, ಈ ರೀತಿಯ ಕಾರ್ಯಕ್ರಮ ಮಾಡಿರುವುದಕ್ಕೆ ಹೆಮ್ಮೆ ಇದೆ. ಇನ್ನಷ್ಟು ಕಾರ್ಯಕ್ರಮ ಗಳು ನಡೆಯಲಿದೆ, ಎಸ್ಪಿಬಿ, ರಾಜ್‌ಕುಮಾರ್ ಅವರ ಹಾಡುಗಳೂ ಇರಲಿ ಎಂದರು.

ಭರತ್ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ, ಯಶ್ವಂತ್ ಎಂ.ಜಿ, ಮನೀಷ್ ಬಿಷ್ಣೋಯ್, ಲಂಚುಲಾಲ್, ಮಣಿಕಾಂತ ಕದ್ರಿ, ರಮೇಶ್ ಚಂದ್ರ,
ಶ್ರೀಕಾಂತ ಕಾಮತ್, ವೇಣುಗೋಪಾಲ್ ಪುತ್ತೂರು, ರಂಜನ್ ದಾಸ್ ಕರಂಗಲ್ಪಾಡಿ, ವಿಶ್ವಾಸ್ ಗುರುಪುರ, ಸತೀಶ್ ಇರಾ ಅವರನ್ನು ಸನ್ಮಾನಿಸಲಾಯಿತು.

ವೇದಿಯಲ್ಲಿ ಡಾ. ಮನೀಷ್ ಬಿಷ್ಣೋಯ್, ಡಾ. ಶಿವರಾಮ್ ಕೆ. ಭಂಡಾರಿ ರಮೇಶ್ ಚಂದ್ರ, ರಮೇಶ್. ಕೆ . ಪಾಟೀಲ್, ಅನಿಲ್ ಶೆಟ್ಟಿ ಸೂರಿಂಜೆ, ಮನೋಹರ್ ಶೆಟ್ಟಿ, ಗೋಪಾಲ ಕೃಷ್ಣ, ಭರತ್ ಕಾಮತ್ಮಂ ಜುನಾಥ್ ಕುಡುವ, ಮಣಿಕಾಂತ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೂ.28: ಮೂಡಬಿದಿರೆಯಲ್ಲಿ ಇನ್ನರ್ ವ್ಹೀಲ್ ಜಿಲ್ಲಾ 318ರ 57ನೇ ಜಿಲ್ಲಾ ಅಸೆಂಬ್ಲಿ ‘ರೋಶ್ನಿ’ ಕಾಯ೯ಕ್ರಮ

ಮೂಡಬಿದಿರೆ: ಇನ್ನರ್ ವ್ಹೀಲ್ ಜಿಲ್ಲಾ 318ರ 57ನೇ ಜಿಲ್ಲಾ ಅಸೆಂಬ್ಲಿ ‘ರೋಶ್ನಿ’...

ಕಲ್ಲಡ್ಕ: ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಗೆ ಸಂಚಾರಿ ಪೊಲೀಸರಿಂದ ಬ್ರೇಕ್

ಬಂಟ್ವಾಳ: ಕಲ್ಲಡ್ಕ ಪೇಟೆಯ ಸರ್ವಿಸ್ ರಸ್ತೆಯ ಎರಡೂ ಬದಿಗಳಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್...

ಕಣಚೂರು ಪಬ್ಲಿಕ್ ಸ್ಕೂಲಿನಲ್ಲಿ ವಿದ್ಯಾರ್ಥಿ ನಾಯಕತ್ವ ಪದಗ್ರಹಣ ಸಮಾರಂಭ ಹಾಗೂ 2025–26ನೇ ಸಾಲಿನ CBSE -10ನೇ ತರಗತಿ ಸಾಧಕರ ಸನ್ಮಾನ

ಉಳ್ಳಾಲ: ಕಣಚೂರು ಪಬ್ಲಿಕ್ ಸ್ಕೂಲ್, ದೇರಳಕಟ್ಟೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ...