ಶ್ರೀರಂಗಪಟ್ಟಣದಲ್ಲಿ “ಹನುಮ ಮಾಲೆ” ಯಾತ್ರೆಗೂ ಮುನ್ನ ಡಿಐಜಿಪಿಗೆ ಸೆಕ್ಷನ್ 144 ನಿಷೇಧಾಜ್ನೆ ಜಾರಿಗೊಳಿಸಲು ಎಸ್ಡಿಪಿಐ ಮನವಿ

Date:

ಮೈಸೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೈಸೂರು ನಿಯೋಗದಿಂದ ಡಾಕ್ಟರ್ ಬೋರಲಿಂಗಯ್ಯ ಪೊಲೀಸ್ ಉಪ ಮಹಾನಿರೀಕ್ಷಕರು ದಕ್ಷಿಣ ವಲಯ DIGP ರವರನ್ನು ಭೇಟಿ ಮಾಡಿ ದಿನಾಂಕ 03/12/25 ರಂದು “ಹಿಂದೂ ಜಾಗರಣ ವೇದಿಕೆ” ವತಿಯಿಂದ ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ “ಹನುಮ ಮಾಲೆ ಸಂಕೀರ್ತನಾ ಯಾತ್ರೆ” ಸಮಾವೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದ್ಯಾಂತ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿ, ಮದ್ಯಪಾನ ನಿಷೇಧಿಸಿ, ಪಟ್ಟಣದ ಸುತ್ತಮುತ್ತ ಚೌಕಿಗಳನ್ನು ನಿರ್ಮಿಸಿ ಬರುವಂತಹ ವಾಹನಗಳನ್ನು ತಪಾಸಣೆ ಮಾಡಬೇಕು ಹಾಗೂ ಮಸೀದಿಯಿಂದ 300 ಮೀಟರ್ ದೂರದಲ್ಲಿ ನಿಷೇಧಿತ ವಲಯ ಘೋಷಿಸಬೇಕು ಎಂದು DIGP ರವರಲ್ಲಿ ಮನವಿಯನ್ನು ಸಲ್ಲಿಸಲಾಯಿತು.

ವಿಷಯಕ್ಕೆ ಸ್ಪಂದಿಸಿದ DIGP ರವರು ಮುಂಜಾಗ್ರತ ಕ್ರಮವಾಗಿ ಕಟ್ಟುನಿಟ್ಟಿನ ಬಿಗಿ ಬಂದೋಬಸ್ತ್ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದರು. ನಿಯೋಗದಲ್ಲಿ SDPI ಜಿಲ್ಲಾಧ್ಯಕ್ಷರಾದ ರಫತ್ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮೊಹಮ್ಮದ್ ಫಿರ್ದೋಸ್ , ಜಿಲ್ಲಾ ಕಾರ್ಯದರ್ಶಿಗಳಾದ ಫರ್ದೀನ್ ಅಹಮದ್, ಹಾಗೂ ಜವಾದ್ ಮೊಹಮ್ಮದ್, ಹಾಗೂ ವಾರ್ಡ್ 13 ರ ಅಧ್ಯಕ್ಷ ವಸಿಂ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...