ದೇರಳಕಟ್ಟೆ: ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನಸ್ ಮತ್ತು ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತಿರಂಗ ರನ್-2025 ಕಾರ್ಯಕ್ರಮ ಕಣಚೂರು ಮುಖ್ಯದ್ವಾರದ ಬಳಿ ನಡೆಯಿತು.

ಕಣಚೂರು ಸಮೂಯ ಸಂಸ್ಥೆಗಳ ಅಧ್ಯಕ್ಷ ಡಾ.ಹಾಜಿ ಯು.ಕೆ ಮೋನು ತಿರಂಗ ರನ್-2025 ಕಾರ್ಯಕ್ರಮ ಕ್ಕೆ ಚಾಲನೆ ನೀಡದರು.
ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಜೊತೆಗೆ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ ಹೋರಾಟಗಾರನ್ನು ಸ್ಮರಣೆ ಮಾಡುವ ಕಾರ್ಯವಾಗಬೇಕು ಎಂದು ಹೇಳಿದರು.

ಕಣಚೂರು ಇಸ್ಲಾಮಿಕ್ ಟ್ರಸ್ಟ್ ನ ಟ್ರಸ್ಟಿ ಉಮಯ ಬಾನು, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನಸ್ ಪ್ರಾಂಶುಪಾಲ ಪ್ರೋ. ಯು.ಟಿ ಇಕ್ಬಾಲ್ ಅಹ್ಮದ್, ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಾಹಿದಾ ಬಿ.ಎಂ, ಕಣಚೂರು ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕಿ ಕರೆನ್ ಟ್ರೆಸಿಲ್ಲ ಡಿಸೋಜಾ, ಕಣಚೂರು ಫ್ರೀ ಸ್ಕೂಲ್ ಮುಖ್ಯ ಶಿಕ್ಷಕಿ ಲಿನೆಟ್ ಡಿಸೋಜಾ, ಕಚೇರಿ ಮ್ಯಾನೇಜರ್ ಇರ್ಫಾನ್ ಉಪಸ್ಥಿತರಿದ್ದರು.