ಮೂಡುಬಿದಿರೆ: ಕ್ರೈನ್ ವೊಂದು ಕಾರೊಂದಕ್ಕೆ ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಪರಿಣಾಮವಾಗಿ ಮನೆ ಹಾನಿಗೊಂಡ ಘಟನೆ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊರಂತಬೆಟ್ಟು ಬಳಿ ಶುಕ್ರವಾರ ನಡೆದಿದೆ. ಮೂಲ್ಕಿ- ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಕಲ್ಲಮುಂಡ್ಕೂರಿನ ಮೊರಂತಬೆಟ್ಡುವಿನ ತಿರುವಿನಲ್ಲಿ ಅತೀ ವೇಗದಲ್ಲಿ ಸಂಚರಿಸುತ್ತಿದ್ದ ಕ್ರೈನ್ ಕಂಟ್ರೋಲ್ ತಪ್ಪಿ ಫೆಲಿಕ್ಸ್ ರೊಡ್ರಿಗಸ್ ಎಂಬವರ ಮನೆ ಮೇಲೆ ಬಿದ್ದಿದ್ದು ಮನೆ ಮಂದಿ ಸಂದ್ಯಾವಂದನೆ ಮುಗಿಸಿ ಮನೆಯ ಇನ್ನೊಂದು ಕೋಣೆಯಲ್ಲಿದ್ದರಿಂದ ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ.

ಕ್ರೈನ್ ಬೀಳುವ ಸಂದರ್ಭದಲ್ಲಿ ಅದರ ಭಾಗದ ತುಂಡೊಂದು ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಬೀಳುವ ಹಂತದಲ್ಲೂ, ಕಾರಿನಲ್ಲಿರುವವರು ಕೂಡ ಪವಾಡ ಸದೃಸ್ಯವಾಗಿ ಪಾರಾಗಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




