ಉಳ್ಳಾಲಾ-10: ವಿದ್ಯಾರ್ಥಿಗಳು ನಿಮ್ಮ ಮುಂದಿನ ಉನ್ನತ ಶಿಕ್ಷಣಕ್ಕೆ ಯಾವುದೇ ಸಹಕಾರ ಬೇಕಾದರೂ ನನ್ನನ್ನ ಸಂಪರ್ಕಿಸಿ.ಅದರಲ್ಲೂ ಹೆಣ್ಮಕ್ಕಳು ಯಾವುದೇ ಕಾರಣಕ್ಕೂ ಉನ್ನತ ಶಿಕ್ಷಣದಿಂದ ವಿಮುಖರಾಗಬಾರದು.ನಿಮ್ಮ ಶಿಕ್ಷಣಕ್ಕೆ ಬೇಕಾದ ಅವಶ್ಯ ಮಾಹಿತಿ,ಮಾರ್ಗದರ್ಶನ,ಸಹಕಾರವನ್ನ ಯು.ಟಿ.ಫರೀದ್ ಫೌಂಡೇಷನ್ ಮೂಲಕ ನೀಡುವುದಾಗಿ ಕರ್ನಾಟಕ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷರಾದ ಯು.ಟಿ.ಇಫ್ತಿಕಾರ್ ಅಲಿ ಹೇಳಿದರು.
ಉಳ್ಳಾಲ ವಿಧಾನಸಭಾ ಕ್ಷೇತ್ರದ ಎನ್ಎಸ್ ಯುಐ ವತಿಯಿಂದ ಎನ್ಎಸ್ ಯುಐ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಓಂಶ್ರೀ ಅವರ ಸ್ಮರಣಾರ್ಥವಾಗಿ
ಕಲ್ಲಾಪುವಿನ ಖಾಸಗಿ ಸಭಾಂಗಣದಲ್ಲಿ ಶನಿವಾರದಂದು ನಡೆದ “ಒಂಶ್ರೀ ಪ್ರಶಸ್ತಿ”ಪ್ರಧಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಎನ್ಎಸ್ ಯುಐ ನ ಜಿಲ್ಲಾ ನಾಯಕರಾಗಿ ಕ್ರಿಯಾಶೀಲರಾಗಿದ್ದ ಓಂಶ್ರೀ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಸಂಘಟನೆಗೆ ತುಂಬಲಾರದ ನಷ್ಟವಾಗಿದೆ.ಓಂಶ್ರೀ ಅವರ ಸ್ಮರಣಾರ್ಥವಾಗಿ ಎಸ್ಸೆಸೆಲ್ಸಿ,ಪಿಯುಸಿ ಮತ್ತು ಬೋರ್ಡ್ ಪರೀಕ್ಷೆಗಳಲ್ಲಿ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿರುವುದು ಅರ್ಥಪೂರ್ಣ ಕಾರ್ಯಕ್ರಮವಾಗಿದೆಯೆಂದರು.
ಎನ್ಎಸ್ ಯುಐನ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಮಾತನಾಡಿ ನಮ್ಮನ್ನ ಅಗಲಿದ ಓಂಶ್ರೀ ಅವರು ಎನ್ಎಸ್ ಯುಐ ವಿದ್ಯಾರ್ಥಿ ಸಂಘಟನೆಗಾಗಿ ಹೆಚ್ಚಿನ ಸಮಯ ವ್ಯಯಿಸುತ್ತಿದ್ದರು.ಅವರು ಸಂಘಟನೆಗೆ ನೀಡಿದ್ದ ಆತ್ಮಸ್ಥೈರ್ಯವನ್ನ ನಾವು ಎಂದಿಗೂ ಮರೆಯುವಂತಿಲ್ಲ.ಜಿಲ್ಲೆಯ ಪ್ರತೀ ವಿದಾನಸಭಾ ಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನ ಗುರುತಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನ ಎನ್ಎಸ್ ಯುಐ ಮುಖಾಂತರ ನಡೆಸುತ್ತಾ ಬಂದಿದ್ದೇವೆ.ನಮ್ಮ ಸಂಘಟನೆಯಲ್ಲಿ ಜಾತಿ,ಮತ ಭೇದ ಮಾಡದೆ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ.ಸಚಿವರಾಗಿ,ಇದೀಗ ವಿದಾನಸಭೆಯ ಸ್ಪೀಕರ್ ಆಗಿ ಯಶಸ್ಸುಗಳಿಸಿರುವ ಯು.ಟಿ.ಖಾದರ್ ಅವರು ಕೂಡಾ ಎನ್ಎಸ್ ಯುಐ ಸಂಘಟನೆಯಲ್ಲೇ ಗುರುತಿಸಿಕೊಂಡವರಾಗಿದ್ದಾರೆ.ಹಾಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎನ್ಎಸ್ ಯುಐ ಸಂಘಟನೆಗೆ ಸೇರುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಉಳ್ಳಾಲ ತಾಲೂಕಿನಲ್ಲಿ 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸಾಧಕರಿಗೆ ಪ್ರಶಸ್ತಿಗಳೊಂದಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು .
ವೇದಿಕೆಯಲ್ಲಿ ಗ್ಯಾರಂಟಿ ಯೋಜನೆಯ ಯುವನಿಧಿ ನೋಂದಣಿ ಪ್ರಕ್ರಿಯೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
7 ದಿನಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೊನಾ ಪಿರೇರಾ ಅವರನ್ನ ಸನ್ಮಾನಿಸಲಾಯಿತು.
ಎನ್ಎಸ್ ಯುಐ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಬೋಳಿಯಾರ್,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ,ಪ್ರಮುಖರಾದ ಜಾಕಿರ್ ಹುಸೈನ್,ಸಫ್ವಾನ್ ಕುದ್ರೋಳಿ,ಸತೀಶ್ ಪೂಜಾರಿ,ಪ್ರತಿಭಾ ಪೂಜಾರಿ,ಅಚ್ಯುತ ಗಟ್ಟಿ,ಮನ್ಸೂರ್ ಮಂಚಿಲ,ಎನ್ಎಸ್ ಯುಐ ಉಳ್ಳಾಲ ಘಟಕದ ಅಧ್ಯಕ್ಷ ಶಾಹಿಲ್ ಮಂಚಿಲ,ಪ್ರಧಾನ ಕಾರ್ಯದರ್ಶಿ ಯು.ಟಿ ಫರೀದ್ ಇಫ್ತಿಕಾರ್,ಪ್ರಮುಖರಾದ ಮಿಹಾನ್ ಹುಸೈನ್,ನವನೀತ್ ಉಳ್ಳಾಲ್,ಅಶ್ವಿನ್ ಜೋಶ್ ವಾ ಡಿ’ಸೋಜ, ಎನ್ಎಸ್ ಯುಐ ಜಾಲತಾಣದ ಫಾಝಿಲ್ ಕೊಣಾಜೆ,ಭಾಸ್ಕರ್ ಮೊಯ್ಲಿ ಮೊದಲಾದವರು ಉಪಸ್ಥಿತರಿದ್ದರು.
ಮಾಜಿ ತಾ.ಪಂ. ಸದಸ್ಯ ಮುಸ್ತಫಾ ಮಲಾರ್ ಕಾರ್ಯಕ್ರಮ ನಿರೂಪಿಸಿದರು.
ಎನ್ಎಸ್ ಯುಐ ನಾಯಕನ ಸ್ಮರಣಾರ್ಥ “ಓಂಶ್ರೀ ಪ್ರಶಸ್ತಿ”ಪ್ರಧಾನ,ಸನ್ಮಾನ ಕಾರ್ಯಕ್ರಮ.
Date: