ನ್ಯೂ ವೈಬ್ರೆಂಟ್ ಪ. ಪೂ. ಕಾಲೇಜಿನಲ್ಲಿ ವಿಶ್ವ ಧ್ಯಾನ ದಿನಾಚರಣೆ

Date:

ಮೂಡಬಿದಿರೆ: ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜು, ಕಲ್ಲಬೆಟ್ಟು ಮೂಡುಬಿದಿರೆ ಇಲ್ಲಿ ಭಾನುವಾರ ವಿಶ್ವ ಧ್ಯಾನ ದಿನಾಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಸಂಸ್ಥೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಸುಮಾರು ಅರ್ಧ ಗಂಟೆಗಳ ಕಾಲ ಧ್ಯಾನವನ್ನು ವಿದ್ಯಾರ್ಥಿಗಳು ಅನುಸರಿಸಿದರು.

ಡಾ. ವೃಂದಾ ಬೆಡೇಕರ್ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನವೆಂದರೆ ಮನಸ್ಸನ್ನು ಶಾಂತಗೊಳಿಸಿ, ಏಕಾಗ್ರತೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಆಂತರಿಕ ಶಾಂತಿ, ಆತ್ಮಸ್ಥೈರ್ಯ ಮತ್ತು ಮಾನಸಿಕ ಸಮತೋಲನವನ್ನು ಪಡೆಯಲು ಸಹಾಯಕ ವಾಗುತ್ತದೆ. ಧ್ಯಾನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಧ್ಯಾನದ ಮಹತ್ವವನ್ನು ತಿಳಿ ಹೇಳಲಾಯಿತು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಟ್ರಸ್ಟಿಗಳಾದ ಮಹಮ್ಮದ್ ಭಾಷಾ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೇಕರ್,ಸುಭಾಶ್ ಝಾ,ಡಾ. ಎಸ್ ಎನ್ ವೆಂಕಟೇಶ್ ನಾಯಕ್, ಡಾ. ಶರತ್ ಗೋರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದೇರಳಕಟ್ಟೆಯಲ್ಲಿ ತಂಬಾಕು ಮುಕ್ತ ದಿನಾಚರಣೆ

ದೇರಳಕಟ್ಟೆ: ಮಂಗಳೂರು ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ತಂಬಾಕು...

ಯುವ ನ್ಯಾಯವಾದಿಯ ಮೇಲೆ ಹಲ್ಲೆ: ಮೂವರ ವಿರುದ್ಧ ವಿವಿಧ ಗಂಭೀರ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲು

ಕಬಕ, ಜೂನ್ 14: ಯುವ ನ್ಯಾಯವಾದಿಯೊಬ್ಬರ ಮೇಲೆ ಹಲ್ಲೆ ನಡೆಸಿ ...

ರವಿ ನಾಯ್ಕಾಪು ಅವರಿಗೆ ನಿರೂಪಣಾ ಕೌಸ್ತುಭ ಪ್ರಶಸ್ತಿ: 28 ಕ್ಕೆ ಮುಂಬಯಿಯಲ್ಲಿ ಪ್ರದಾನ

ಕಾಸರಗೋಡು: ನಿರೂಪಕ, ಸಂಘಟಕ, ಲೇಖಕ ರವಿ ನಾಯ್ಕಾಪು ಅವರಿಗೆ 'ನಿರೂಪಣಾ ಕೌಸ್ತುಭ'...

ದಾವಣಗೆರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ವಿಮೆನ್ ಇಂಡಿಯಾ ಮೂವ್ಮೆಂಟ್ ಖಂಡನೆ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ...