ಮಂಗಳೂರು, ಆ.14: ಸಸಿ ಪ್ರಕಾಶನ ಪ್ರಕಟಿಸಿದ, ಮುನವ್ವರ್ ಜೋಗಿಬೆಟ್ಟು ಬರೆದ : “ಟಚ್ ಮೀ ನಾಟ್” ಕಥಾ ಸಂಕಲನವು ಆ.17ರಂದು ಸಂಜೆ 4:30ಕ್ಕೆ ನಗರದ ಸಂತ ಅಲೋಶಿಯಸ್ ಡೀಮ್ಡ್ ವಿವಿಯ ರಾಬ ರ್ಟ್ ಸಿಕ್ವೇರ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ.
ಅಲೋಶಿಯಸ್ ವಿವಿಯ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ, ಕನ್ನ ವಿಭಾಗ, ರಂಗ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ಕಥೆಗಾರ್ತಿ ಸುಧಾ ಅಡುಕಳ, ವಿಮರ್ಶಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
