ಕೇಮಾರು: ಶಾಲಾ ವಾರ್ಷಿಕೋತ್ಸವ ಸಮಾರಂಭ

Date:

ಮೂಡುಬಿದಿರೆ : ಕೇಮಾರು ದ.ಕ.ಜಿ.ಪಂ‌‌ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ವಿಜೃಂಭಣೆಯಿಂದ ನಡೆಯಿತು.

ಸಂಜೆ ನಡೆದ ಸಭಾ ಕಾಯ೯ಕ್ರಮದಲ್ಲಿ ಶ್ರೀ ಕ್ಷೇತ್ರ‌ ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿ ಪ್ರಸಕ್ತ ವಿದ್ಯಮಾನಗಳಲ್ಲಿ ಇಂಗ್ಲೀಷ್ ಭಾಷೆ ಅಗತ್ಯವಿದೆ. ತುಳುನಾಡಿನ ಸಂಸ್ಕೃತಿ ನಮ್ಮದಾಗಬೇಕು ಇಂಗ್ಲೀಷ್ ಸಂಸ್ಕೃತಿಯಲ್ಲ ಎಂದರು. ನಮ್ಮೂರಿನ ಶಾಲೆ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಉನ್ನತಿಕರಿಸಬೇಕು ಎಂಬುದು ಊರವರ ಕನಸು. ಕನಸು ನನಸಾಗಿಸುವುವಲ್ಲಿ ಈಗಾಗಲೇ ನನ್ನ ಜೊತೆಗೆ ಯುವ ಉತ್ಸಾಹಿ ಬಳಗವು ನಿರಂತರ ಪ್ರಯತ್ನದಲ್ಲಿದೆ. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಊರಿನ ಮಕ್ಕಳನ್ನು ಸೇರಿಸಿ ವಿದ್ಯಾ ದೇಗುಲವನ್ನು ಉಳಿಸುವ ಅನಿರ್ವಾಯತೆ ಇದೆ ಎಂದರು.

ಕೆ.ಎಂ.ಎಫ್ ನಿರ್ದೇಶಕ ಕೆ.ಪಿ‌ ಸುಚರಿತ ಶೆಟ್ಟಿ ದೀಪ ಬೆಳಗಿಸುವ ಮ‌ೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಪಾಲಡ್ಕ ಗ್ರಾ.ಪಂ‌ ಅಧ್ಯಕ್ಷೆ ಅಮಿತಾ ಎಸ್‌.ನಾಯ್ಕ್ ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ.ಕೆ ಶಾಲಾ ವರದಿ ವಾಚಿಸಿದರು.

ಕೇಮಾರು ಶಾಲೆಯಲ್ಲಿ ಸುಮಾರು12 ವರ್ಷಗಳ‌ ಕಾಲ ಸಹಶಿಕ್ಷಕರಾಗಿ ಸೇವೆ ಸಲ್ಲಿಸಿದ ಯಶಸ್ವಿನಿ ಹಾಗೂ ಶಾಲಾ ಹಿತೈಷಿಗಳು 2025ರ ರಚನಾ ಕೃಷಿಕ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತ ಡಾ.ಗಾಡ್ವೀನ್ ರೋಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು.

ಸಾಮಾಜಿಕ ಚಿಂತಕರು ಹಾಗೂ ಖ್ಯಾತ ವಾಗ್ಮಿ ಹರ್ಷವರ್ಧನ ನಿಟ್ಟೆ ದಿಕ್ಸೂಚಿ ಭಾಷಣದಗೈದು ಸರಕಾರಿ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮೆಲ್ಲರ ಕರ್ತವ್ಯ ಹಾಗೂ ಅನಿರ್ವಾಯತೆ ಬಗ್ಗೆ ವಿವರಿಸಿದರು.

ಶಾಲೆಯ ಹಳೆವಿದ್ಯಾರ್ಥಿ ಹಾಗೂ ಮಂಗಳೂರು ‌ಕಮೀಷನರ್ ಕಚೇರಿಯ ಎಎಸ್ಐ ಸುರೇಶ್ ಕೇಮಾರು, ಕೆ.ಅಮರನಾಥ ಶೆಟ್ಟಿ ಚಾರಿಟೆಬಲ್ ಟ್ರಸ್ಟಿನ ಅಧ್ಯಕ್ಷೆ ಡಾ. ಅಮರಶ್ರೀ, ಮೂಡುಬಿದಿರೆ ರೋಟರಿ ಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ, ಪಾಲಡ್ಕ ಗ್ರಾ.ಪಂ ಸದಸ್ಯ ಸುಖೇಶ್ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವನಾಥ ಆಚಾರ್ಯ, ಉಪಸ್ಥಿತರಿದ್ದರು. ಸಹಶಿಕ್ಷಕಿ ಜೆಸಿಂತಾ ಫೆರ್ನಾಂಡೀಸ್ ಧನ್ಯವಾದವಿತ್ತರು. ಸುಕೇಶ್ ಕೋಟ್ಯಾನ್ ಕಾಂತಾವರ ಮತ್ತು ಸುಧಾಕರ್ ಕೇಮಾರು ಕಾರ್ಯಕ್ರಮ ನಿರೂಪಿಸಿದರು

ಅಂಗನವಾಡಿ, ಶಾಲೆಯ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ಶಾಲಾ ಮಕ್ಕಳಿಂದ “ಭಕ್ತ ಮಾರ್ಕಂಡೇಯ” ಪೌರಾಣಿಕ ನಾಟಕ ಹಾಗೂ ಸಂಭ್ರಮ ಕಲಾವಿದರು ಕಲ್ಲಮುಂಡ್ಕೂರು ಇವರಿಂದ “ಗೊಬ್ಬು ಗೊಬ್ಬಾವುನಾಯೆ” ತುಳು ನಾಟಕ ಪ್ರದರ್ಶನಗೊಂಡ. ಬೆಳಿಗ್ಗೆ ಹೊಸಬೆಳಕು ಸಮಾಜ ಸೇವಾ ಬಳಗದ ಸ್ಥಾಪಕಾಧ್ಯಕ್ಷ ಮಹೇಶ್ ಜೆ.ಕೋಟ್ಯಾನ್ ಧ್ವಜಾರೋಹಣ ಗೈದರು.

ಎಸ್.ಡಿ.ಎಂ‌.ಸಿ ಅಧ್ಯಕ್ಷೆ ರೇಣುಕಾ ಅಮೀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡುಬಿದಿರೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ ಸಾಲ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವೃತ್ತಿ ಜೀವನದಲ್ಲಿ ಶಿಕ್ಷಕರಾಗಿ ಊರ ನಾಗರಿಕರ ಒಡನಾಟದಿಂದ ಶಾಲೆ ಪ್ರಗತಿಗಳ ಬಗ್ಗೆ ತಮ್ಮ ಜೀವನದ ಅನುಭವವನ್ನು ಮೆಲುಕು ಹಾಕಿದರು.

ಶಾಲಾ ಹಿತೈಷಿ ಕೆ.ಅರವಿಂದ ಭಟ್ ಕಡಲಕೆರೆ ಶಾಲಾ ವಿಶ್ರಾಂತ ಶಿಕ್ಷಕ ಬಿ ಜಯರಾಮ್ ರಾವ್, ಯುವ ಉತ್ಸಾಹಿ ಬಳಗದ ಅಧ್ಯಕ್ಷ ಚಂದ್ರಹಾಸ ಜೈನ್, ಕೇಮಾರು ಹಾಲು ಉ.ಸಂಘದ ಅಧ್ಯಕ್ಷೆ ನೀರಜಾಕ್ಷಿ ಶೆಟ್ಟಿ, ಶ್ರೀ ಕ್ಷೇತ್ರ‌ ಗ್ರಾಮಾಭಿವೃದ್ದಿ ಯೋಜನೆ ಅಲಂಗಾರು ವಲಯ ಮೇಲ್ವಿಚಾರಕರಾದ ಚಂದ್ರಹಾಸ ಶೆಟ್ಟಿ , ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಅಮನಬೆಟ್ಟುವಿನಲ್ಲಿ ಉಚಿತ ಆರೋಗ್ಯ ಮತ್ತು ನೇತ್ರಾ ಚಿಕಿತ್ಸಾ ಶಿಬಿರ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮೂಡುಬಿದಿರೆ...

ಅಣಬೆ ಕೃಷಿ ಮತ್ತು ಸಾಬೂನು ತಯಾರಿಕೆಯ ಬಗ್ಗೆ ಮಾಹಿತಿ

ಮೂಡುಬಿದಿರೆ: ರೈತ ದಿನಾಚರಣೆ ಅಂಗವಾಗಿ ತೆಂಕ ಮಿಜಾರ್ ಗ್ರಾಮ ಪಂಚಾಯತ್ ಹಾಗೂ...

ಶಾಲಾಡಳಿತವು ಶಿಕ್ಷಣದೊಂದಿಗೆ ಕೈ ಜೋಡಿಸಿದಾಗ ಯಶಸ್ಸು ಸಾಧ್ಯ: ಶಶಿಧರ್ ಡಿ. ಡಿ. ಪಿ. ಐ.

ಉಳ್ಳಾಲ: ಸರಕಾರವು ಇಂದು ಸರಕಾರಿ ಶಾಲೆಗಳ ಎಲ್ಲಾ ವ್ಯವಸ್ಥೆಗಳೊಂದಿಗೆ ಉತ್ತಮವಾದ ಬೆಳವಣಿಗೆಗೆ...

ಬ್ರೇಕಿಂಗ್ ನ್ಯೂಸ್: ಬೆಳ್ತಂಗಡಿ ಪತಿ ಹತ್ಯೆ ಪ್ರಕರಣ – ಕೊಲೆ ಸಾಬೀತಾದರೂ ಪತ್ನಿಗೆ ಶಿಕ್ಷೆ ಇಲ್ಲ: ಕೋರ್ಟ್ ತೀರ್ಪು

ಕೋರ್ಟ್ ತೀರ್ಪಿನ ಪೂರ್ಣ ವಿವರ ಇಲ್ಲಿದೆ ಮಂಗಳೂರು: ಬೆಳ್ತಂಗಡಿ ತಾಲೂಕಿನ ನಾವೂರು...