ಮಂಗಳೂರು: ದ.ಕ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ನಗರದ ವಿ.ಟಿ ರಸ್ತೆಯ ಚೇತನಬಾಲವಿಕಾಸ ಕೇಂದ್ರದಲ್ಲಿ ಸ್ವಾತಂತ್ರಯೋತ್ಸವ ಆಚರಿಸಲಾಯಿತು.

ಬಿಜೆಪಿ ಪ್ರಭಾರಿ ಸಂಜಯ್ ಪ್ರಭು ಧ್ವಜಾರೋಹಣಗೈದರು. ಸಂಸದ ಬ್ರಿಜೇಶ್ ಚೌಟ ಅವರು ಕೇಂದ್ರದ ವಿಧ್ಯಾರ್ಥಿಗಳಿಗೆ ಹಣ್ಣುಹಂಪಲು ವಿತರಿಸಿದರು.
ಬಳಿಕ ಮಾತನಾಡಿದ ಅವರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾವು ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದು ನೋಡಿ ನನಗೆ ತುಂಬಾ ಸಂತೋಷವಾಗಿದೆ.
ದೇಶದ 450ಕೋಟಿ ಜನರು ಒಂದಾಗಿ ಒಟ್ಟಾಗಿ ಸಂಕಲ್ಪ ಮಾಡಬೇಕು ಎಂಬುದು ನಮ್ಮ ಪ್ರಧಾನ ಮಂತ್ರಿ ಕನಸಾಗಿದೆ. 2047ರಲ್ಲಿ ವಿಕಸಿತ ಭಾರತವನ್ನು ನಿರ್ಮಾಣ
ಮಾಡಲು ಎಲ್ಲರೂ ಶಕ್ತಿ ತುಂಬಬೇಕು ಎಂದು ಹೇಳಿದರು.

ದ.ಕ ಹಿಂದುಳಿದ ವರ್ಗಗಳ ಕಲ್ಯಾಣ ಇಖಾಖೆ ಜಿಲ್ಲಾಧಿಕಾರಿ ಬಿಂದಿಯಾ ಎನ್. ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ದ.ಕ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರ.ಕಾರ್ಯದರ್ಶಿ ಡಾ.ಎ.ಕೆ.ಜಮಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ದ.ಕ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಟಿ.ಎ.ಶಾನವಾಜ್,
ಸೇವಾ ಭಾರತಿಯ ಗೌರವ ಕಾರ್ಯದರ್ಶಿ ಎಚ್.ನಾಗರಾಜ್ ಭಟ್, ಶಾಲಾ ಮುಖ್ಯೋಪಾಧ್ಯಾಯಿನಿ ಸುಪ್ರಿತಾ,
ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜೆಸ್ಸೆಲ್ ಡಿ.ಸೋಜ , ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಿರಾಜ್ ಮುಡಿಪು, ಜಿಲ್ಲಾ ಉಪಾಧ್ಯಕ್ಷ ರಾದ ಅಸ್ಗರ್ ಮುಡಿಪು, ಸಿದ್ದೀಕ್ ತಲಪಾಡಿ,ಸಲೀಂ ಬೆಂಗ್ರೆ ಪ್ರ.ಕಾರ್ಯದರ್ಶಿ ಹರ್ಷದ್ ಪೊಪಿ, ಮುಖಂಡರಾದ ಎ.ಆರ್ ಬೋಳಾರ್, ವಿನ್ಸೆಂಟ್ ಉದಯ ಡಿಸೊಜಾ, ರಹ್ಮಾತಾಲಿ ಕಿನ್ಯ, ಮುಂತಾದವರು ಉಪಸ್ಥಿರರಿದ್ದರು