
ತುಳುನಾಡಿನಲ್ಲಿ ಬಹಳಷ್ಟು ಆಚರಣೆಗಳು ಕೆಲವು ದಶಕಗಳ ಹಿಂದೆ ಅವಿಭಕ್ತ ಕುಟುಂಬದ ಮನೆಯಲ್ಲಿ ನಡೆಯುತ್ತಿತ್ತು. ಪ್ರಸ್ತುತ ಸಂಘ ಸಂಸ್ಥೆಗಳು ಆಯೋಜಿಸುತ್ತಿದೆ. ನಮ್ಮ ಸಂಸ್ಕಾರ ಸಂಸ್ಕೃತಿ ಉಳಿಸುವುದು ಹಾಗೂ ನಮಗೆ ಜನ್ಮವೆತ್ತ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ನಮ್ಮ ಜವಾಬ್ದಾರಿ ಎಂಬುದನ್ನು ಮಕ್ಕಳು ಮರೆಯಬಾರದು ಎಂದು ರಾಜ್ಯ ಹಿಂದುಳಿದ ಆಯೋಗದ ಮಾಜಿ ನಿರ್ದೇಶಕ ಕೆ. ಟಿ. ಸುವರ್ಣ ಹೇಳಿದರು.
ನೆತ್ತಿಲಪದವು ಶ್ರೀ ಕೃಷ್ಣ ಮಂದಿರದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ನಡೆದ 54ನೇ ವರ್ಷದ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.


ಧಾರ್ಮಿಕ ಉಪನ್ಯಾಸಗೈದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ಮಾತನಾಡಿ ಪ್ರಪಂಚ ಸಂಸ್ಕಾರ ತಿಳಿಯೋದಕ್ಕೂ ಮುಂಚೆ ಭಾರತ ಆಯುರ್ವೇದ ಕುರಿತು ತಿಳಿಸಿತ್ತು, ಸರಿಯಾಗಿ ಮಾತನಾಡುವುದಕ್ಕೆ ಸಂವಹನ ಸೃಷ್ಟಿ ಪೂರ್ವದಲ್ಲಿ ವೇದ ಉಪನಿಷತ್ ಬೋಢಿಸಿತ್ತು ಎಂದರು.
ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಠಾರ್ ಕ್ಷೇತ್ರದ ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಳ್ಳಪ್ಪಾಡ ಉದ್ಘಾಟಿಸಿದರು.
ಮಂಗಳೂರು ತಾಲೂಕು ಭೂ-ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಸೀತಾರಾಮ ಶೆಟ್ಟಿ, ನೆತ್ತಿಲಬಾಳಿಕೆ, ನರಿಂಗಾನದ ಯೆನೆಪೋಯ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮುಖ್ಯ ವೈದ್ಯಕೀಯ ಅಧೀಕ್ಷಕ
ಡಾ. ಸುಭಾಷ್ ರೈ, ಜಿಲ್ಲಾ ಬಿ. ಜೆ. ಪಿ. ಮುಖಂಡ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, , ನರಿಂಗಾನ ಗ್ರಾಮ ಪಂಚಾಯಿತಿ
ಕಾರ್ಯದರ್ಶಿ ನಳಿನಿ ಎ. ಕೆ.,
ಪುಣೆ ಉದ್ಯಮಿ ಜಯಪ್ರಕಾಶ್ ಶೆಟ್ಟಿ ಭಂಡಾರಮನೆ, ಪದಶ್ರೀ ಎಂಟರ್‌ಪ್ರೈಸಸ್ ಮಾಲೀಕ ಪ್ರಭಾಕರ ಶೆಟ್ಟಿ ಸಂಕೋಳಿಗೆ, ಪಾವೂರು ಪೊಯ್ಯ ಶ್ರೀ ಚಾಮುಂಡೇಶ್ವರೀ ಆಡಳಿತ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಕೆದುಂಬಾಡಿ ಉಪಸ್ಥಿತರಿದ್ದರು.
ಓಕುಳಿ ಕಂಬ ಕಟ್ಟಿ ಸಹಕರಿಸಿದ ಸಂಘ ಸಂಸ್ಥೆಗಳು ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ 97ಶೇ. ಅಂಕ ಗಳಿಸಿದ ಶ್ರದ್ಧಾ ನಿತ್ಯಾನಂದ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಶೋಭಾಯಾತ್ರೆಯಲ್ಲಿ ಬೆರಿಪದವು ಶ್ರೀ ಮುಕಾಂಬಿಕಾ ಮುಖ್ಯಪ್ರಾಣ ವ್ಯಾಯಾಮಶಾಲೆ ಸದಸ್ಯರಿಂದ ಉಸ್ತಾದ್ ಶ್ರೇಷ್ಠ ಮಾಧವ ಶೆಟ್ಟಿ ಬಡಾಜೆ ಮಾರ್ಗದರ್ಶನದಲ್ಲಿ “ತಾಲೀಮು ಪ್ರದರ್ಶನ” ನಡೆಯಿತು.
ಮಂದಿರದ ಅಧ್ಯಕ್ಷ ಪ್ರೇಮಾನಂದ ರೈ ನೆತ್ತಿಲಕೋಡಿ ಸ್ವಾಗತಿಸಿದರು. ಪ್ರಮೀಳಾ ಶೆಟ್ಟಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಯತಿರಾಜ್ ಶೆಟ್ಟಿ ಬಹುಮಾನ ವಿಜೇತರ ಹೆಸರು ವಾಚಿಸಿ ವಂದಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.