ಕಾಸರಗೋಡು: ಮೇರು ಕವಯತ್ರಿ, ಸಂಘಟಕಿ, ಸಮಾಜ ಸೇವಕಿ ಸಿಹಾನ ಬಿ. ಎಂ. ಇವರು ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.ಗೆ ಆಯ್ಕೆಯಾಗಿದ್ದಾರೆ.

ಕವಯತ್ರಿ, ಲೇಖಕಿ, ಸಂಘಟಕಿ ಸಿಹಾನ ಬಿ. ಎಂ, ತನ್ನ ಪ್ರಥಮ ಕವನ ಸಂಕಲನ “ಶ್ವೇತ ಪಾರಿವಾಳ “ಕ್ಕೆ ಕನ್ನಡ ಭವನದಿಂದ “ಕಾವ್ಯ ಪ್ರಶಸ್ತಿ “ ಗಿಟ್ಟಿಸಿಕೊಂಡ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026” ಇದೇ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ


