
ಮಂಗಳೂರು: ಕಣ್ಣೂರು ಯೂನಿವರ್ಸಿಟಿ ಟೀಚರ್ ಎಜುಕೇಶನ್ ಸೆಂಟರ್ ಕಾಸರಗೋಡಿನ ಸಹಪ್ರಾಧ್ಯಾಪಕಿಯಾದ ರೇಷ್ಮಾ ಎಂ. ವೈ ಸಲ್ಲಿಸಿದ “ಸ್ಟಡಿ ಆಫ್ ನೇಚರ್ ಅಂಡ್ ಸ್ಟ್ರಕ್ಚರ್ ಆಫ್ ಕರ್ನಾಟಕ ಹೈಸ್ಕೂಲ್ ಸೋಶಿಯಲ್ ಸೈನ್ಸ್ ಟೆಕ್ಸ್ಟ್ ಬುಕ್ ಪೋಸ್ಟ್ ಯುನಿಫಿಕೇಷನ್ ಪಿರೇಡ್ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿ ನೀಡಿದೆ. ಇವರು ಬೆಸೆಂಟ್ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಸತೀಶ್ ಕುಮಾರ್ ಶೆಟ್ಟಿ ಪಿ. ರವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದಾರೆ. ಇವರು ಮೂಲತಃ ಮಂಗಳೂರಿನವರಾಗಿದ್ದು,ಶ್ರೀಮತಿ ಯಶೋಧ ಎಂ. ಮತ್ತು ಮೋಹನ್ ಸಿ.ಕೆ ನಿವೃತ್ತ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಇವರ ಪುತ್ರಿ ಮತ್ತು ಆನಂದಾಶ್ರಮ ಪ್ರೌಢಶಾಲೆ ಸೋಮೇಶ್ವರದ ವಿಜ್ಞಾನ ಶಿಕ್ಷಕ ಹಾಗೂ ಕುಂಪಲ ನಿವಾಸಿಯಾದ ಪ್ರದೀಪ್ ಕುಮಾರ್ ಬೇಕಲ್ ರವರ ಪತ್ನಿಯಾಗಿರುತ್ತಾರೆ.