ಉಪ್ಪಿನಂಗಡಿ: ಮಾಣಿ ಸಮೀಪದ ಪೇರಮೊಗರು ಜುಮ್ಮಾ ಮಸೀದಿ ಮುದರ್ರಿಸ್ ಮುಹಮ್ಮದ್ ಫಾಳಿಲಿ ಅಲ್ ಕಾಮಿಲಿ ಅಲ್ ಫುರ್ಖಾನಿ ಅಲ್ ಅರ್ಷದಿಯವರು ಹೃದಯಾಘಾತದಿಂದ ನಿಧನರಾದರು.

ಕೊಡಗಿನ ಕೂಡ್ಲಿಪೇಟೆ ಸಮೀಪದ ಬೇಡಗೊಟ್ಟ ನಿವಾಸಿಯಾದ ಉಸ್ತಾದ್ ಮದ್ಯಾಹ್ನ ಲುಹರ್ ನಮಾಝಿನ ನಂತರ ಎದೆನೋವು ಕಾಣಿಸಿಕೊಂಡಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದರು.


