vltvkannada.com ದೇರಳಕಟ್ಟೆ:ದಂತವೈದ್ಯಕೀಯ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ಹೊಸ ಆವಿಷ್ಕಾರದೊಂದಿಗೆ ಬದಲಾವಣೆ ಯನ್ನು ಕಾಣುತ್ತಿದ್ದು, ನೂತನ ತಂತ್ರಜ್ಞಾನವು ಲ್ಯಾಬೊರೇಟರಿ, ಆಸ್ಪತ್ರೆಗಳಲ್ಲೂ ಶೀಘ್ರವಾಗಿ ಪ್ರವೇಶಿಸಿದೆ. ದಂತ ವೈದ್ಯಕೀಯ ಕ್ಲಿನಿಕ್ಗಳನ್ನು ದಂತ ವೈದ್ಯಕೀಯ ಆಸ್ಪತ್ರೆಗಳನ್ನಾಗಿ ಬದಲಾಯಿಸಲಾಗುತ್ತಿದ್ದು, ರೋಗಿಗಳನ್ನು ಆಕರ್ಷಿಸುವಲ್ಲಿ ತಂತ್ರಜ್ಞಾನದೊಂದಿಗೆ ಅನುಭವ, ಸಂಶೋಧನೆ,ಅಧ್ಯಯನದೊಂದಿಗೆ ವೈದ್ಯರೂ ಬದಲಾಗಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಮ್.ಸಿ ಸುಧಾಕರ್ ಅಭಿಪ್ರಾಯಪಟ್ಟರು.

ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾಗಿರುವ ದೇರಳಕಟ್ಟೆಯ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ನ 40 ವರ್ಷಗಳ ಶ್ರೇಷ್ಠತೆ ಸಂಭ್ರಮದ ಅಂಗವಾಗಿ ಅವಿಷ್ಕಾರ್ ಸಭಾಂಗಣದಲ್ಲಿ ಶನಿವಾರದಂದು ನಡೆದ ಹಳೆಯ ವಿದ್ಯಾರ್ಥಿಗಳ ಸಮಾವೇಶ ಮತ್ತು ಹನ್ನೊಂದನೇ ವರ್ಷದ ಪ್ರೊ.ಡಾ.ಎನ್.ಶ್ರೀಧರ್ ಶೆಟ್ಟಿ ದತ್ತಿ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿಟ್ಟೆ ಸಮೂಹ ಸಂಸ್ಥೆ ಗಳು ಕೆ. ಎಸ್ಎಸ್ ಹೆಗ್ಡೆ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಹಾಗೂ ಏ. ಬಿ ಶೆಟ್ಟಿ ದಂತವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳು ಅಪ್ರತಿಮ ಬೆಳವಣಿಗೆಗೆ ಸಾಕ್ಷಿಯಾಗಿದೆ. ಆರಂಭದಲ್ಲಿ ಸಣ್ಣ ಕಟ್ಟಡಗಳಿಂದ ಆರಂಭವಾದ ಈ ಮಹಾ ಸಂಸ್ಥೆ, ಇಂದು ಅನೇಕ ಸಾಧನೆಗಳೊಂದಿಗೆ ಮುನ್ನಡೆಯುತ್ತಿದೆ. ನಾವು ವಿದ್ಯಾರ್ಥಿಗಳಾಗಿದ್ದ ಆ ಕಾಲದಲ್ಲಿ ರಸ್ತೆ, ಮೂಲಸೌಕರ್ಯಗಳ ಕೊರತೆ ಇದ್ದಿತ್ತು ಆದರೆ ಇಂದು ವಿನಯ ಹೆಗ್ಡೆಯವರ ನಾಯಕತ್ವದ ಹಾಗು ಮಾರ್ಗದರ್ಶನದಲ್ಲಿ ನಿಟ್ಟೆ ಅಸಾಮಾನ್ಯ ಬೆಳವಣಿಗೆಯನ್ನು ಕಂಡಿದೆ ಎಂದು ಸಂಸ್ಥೆಯ 40 ವರ್ಷದ ಪಯಣವನ್ನು ಸ್ಮರಿಸಿದರು.
“ಇಂದು ನಾನು ವೈದ್ಯನಾಗಿ ನನ್ನ ಗುರುಗಳ ಮುಂದೆ ನಿಲ್ಲುವ ಭಾಗ್ಯ ಪಡೆದಿರುವುದು, ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುವಂತೆ ನನಗೆ ಸಿಕ್ಕ ಗೌರವದ ಕ್ಷಣವಾಗಿದೆ. ನನ್ನ ಬದುಕಿಗೆ ಬಲ ತುಂಬಿದವರು ನನಗೆ ಗುರುಗಳಾದ ಎ.ಬಿ. ಶೆಟ್ಟಿ ಯ ಡಾ. ಶಶಿಧರ್ ಶೆಟ್ಟಿ ಅವರ ಬೋಧನೆ ನನ್ನ ಆತ್ಮವಿಶ್ವಾಸಕ್ಕೆ ದೊಡ್ಡ ಆಧಾರವಾಗಿದೆ,” ಎಂದು ಹೇಳಿದರು.
ಡಾ. ಶ್ರೀಧರ ಶೆಟ್ಟಿ ಅವರದ್ದು ಭಯವಿಲ್ಲದ ವ್ಯಕ್ತಿತ್ವ , “ವೈದ್ಯಕೀಯ ಶಿಬಿರಗಳನ್ನು ಪ್ರಾರಂಭಿಸಿದವರು, ಕ್ಲಿನಿಕಲ್ ಸಿಸ್ಟಮ್ ಅನ್ನು ಕಾಲೇಜಿನಲ್ಲಿ ಪರಿಚಯಿಸಿದರು. ನಮ್ಮಲ್ಲೇ ತಂಡವಾಗಿ ಹಲವು ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಶಿಬಿರಗ್ಗಳನ್ನು ಮಾಡಿ ಆ ಮೂಲಕ ಜನರ ಮನೆಬಾಗಿಲಿಗೆ ವೈದ್ಯಕೀಯ ಸೇವೆಯನ್ನು ಒದಗಿಸುವಂತೆ ಮಾಡಲಾಗಿತ್ತು ,” ಎಂದು ನೆನಪಿಸಿದರು.

ದಂತ ವೈದ್ಯಕೀಯ ಕಾಲೇಜಿನ ವಿಶ್ರಾಂತ ಡೀನ್ ಡಾ.ಎನ್ ಶ್ರೀಧರ್ ಶೆಟ್ಟಿ ಮಾತನಾಡಿ ನಮ್ಮ ಸಂಸ್ಥೆ ಇಂದು ದೇಶದ ಅತ್ಯಂತ ಸ್ಮರಣೀಯ ಮತ್ತು ಪರಿಣಾಮಕಾರಿ ಸಂಸ್ಥೆಗಳಲ್ಲಿ ಒಂದಾಗಿ ಇದು ಗುರುತಿಸಿಕೊಂಡಿದೆ.
ಕೇವಲ ಕಟ್ಟಡ ಸೌಕರ್ಯ ಮಾತ್ರವಲ್ಲದೆ ಎಲ್ಲಾ ರೀತಿಯ ಆಧುನಿಕ ಸಾಧನಗಳು ಮತ್ತು ತಂತ್ರಜ್ಞಾನಗಳೊಂದಿಗೆ ಬೆಳೆಯುತ್ತಿದೆ. ಈ ಸಂಸ್ಥೆಯಿಂದ ಅನೇಕ ವಿನಯಶೀಲ ಹಾಗೂ ಮಾನವೀಯ ವೃತ್ತಿಪರರು ವೈದ್ಯರು ರಾಷ್ಟ್ರ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳು ವಿಶ್ವದಾದ್ಯಂತ ನಮ್ಮ ಕಾಲೇಜಿನ ಹೆಸರನ್ನು ಪ್ರತಿನಿಧಿಸುತ್ತಿದ್ದಾರೆ ಅನ್ನೋದು ಹೆಮ್ಮೆಯ ವಿಚಾರವಾಗಿದೆ ಎಂದರು.
ನಿಟ್ಟೆ ವಿವಿ ಸಹಕುಲಾಧಿಪತಿಗಳಾದ ಡಾ.ಎಂ.ಶಾಂತರಾಮ ಶೆಟ್ಟಿ., ನಿಟ್ಟೆ ವಿವಿ ಆಡಳಿತ ವಿಭಾಗದ ವಿಶಾಲ್ ಹೆಗ್ಡೆ, ಕುಲಪತಿ ಡಾ.ಎಂ.ಎಸ್ ಮೂಡಿತ್ತಾಯ, ಕುಲ ಸಚಿವ ಡಾ.ಹರ್ಷ ಹಾಲಹಳ್ಳಿ,,ಉಪ ಪ್ರಾಂಶುಪಾಲ ಡಾ.ಎಮ್.ಎಸ್ ರವಿ, ದತ್ತಿ ಉಪನ್ಯಾಸ ಸಂಯೋಜಕರಾದ ಪ್ರೊ.ಡಾ.ರಾಹುಲ್ ಭಂಡಾರಿ ,
ಕಾರ್ಯಕ್ರಮ ಆಯೋಜನಾ ಕಾರ್ಯದರ್ಶಿ ಪ್ರೊ.ಡಾ.ಶಿಶಿರ್ ಶೆಟ್ಟಿ ಉಪಸ್ಥಿರಿದ್ದರು
ಸಮ್ಮೇಳನ ಆಯೋಜನಾ ಅಧ್ಯಕ್ಷೆ ಹಾಗೂ ಡೀನ್ ಪ್ರೊ.ಮಿತ್ರಾ ಎನ್. ಹೆಗ್ಡೆ ಸ್ವಾಗತಿಸಿದರು.
ಡಾ. ಅಮರಶ್ರೀ ಶೆಟ್ಟಿ ಸ್ವಾಗತಿಸಿದರು. ಸಹ ಸಂಘಟನಾ ಕಾರ್ಯದರ್ಶಿ ಡಾ.ಪ್ರತೀಶ್ ಶೆಟ್ಟಿ ವಂದಿಸಿದರು