vltvkannada.com ಉಳ್ಳಾಲ :ಬಡ ವರ್ಗ ಹಾಗೂ ವಾಹನ ಚಾಲಕರ ಕಷ್ಟಗಳನ್ನು ಮನಗಂಡು 1975ರಲ್ಲಿ ಫಾದರ್ ಫ್ರೆಡ್ ವಿ. ಪಿರೇರಾ ಅವರ ಮುಂದಾಳತ್ವದಲ್ಲಿ ಆರಂಭಗೊAಡ ಮ್ಯಾಕೋ ಸಹಕಾರಿ ಸಂಘವು ಯಶಸ್ವಿಯಾಗಿ ತನ್ನ ಸುವರ್ಣ ಮಹೋತ್ಸವ ವರ್ಷವನ್ನು ಪೂರೈಸಿದೆ. ಮಂಗಳೂರಿನ ಮೊದಲ ಸಹಕಾರಿ ಸಂಘ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಮ್ಯಾಕೋ, ಕಳೆದ ಐದು ದಶಕಗಳಿಂದ ಸಮಾಜದ ಬಡ ವರ್ಗದವರಿಗೆ ಆರ್ಥಿಕ ಬಲವಾಗಿ ಪರಿಣಮಿಸಿದೆ. ಇದೀಗ ಉಳ್ಳಾಲದ ಹೃದಯಭಾಗ ತೊಕ್ಕೊಟ್ಟುವಿನಲ್ಲಿ ಕರ‍್ಯಾರಂಭಿಸುವ ಮೂಲಕ ಈ ಭಾಗದ ರಿಕ್ಷಾ ಚಾಲಕರು ಹಾಗೂ ಬಡ ವರ್ಗದವರಿಗೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಕರ್ನಾಟಕ ವಿಧಾನಪರಿಷತ್ ಸದಸ್ಯರು ಹಾಗೂ ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ಅಧ್ಯಕ್ಷ ಐವನ್ ಡಿಸೋಜ ಅಭಿಪ್ರಾಯಪಟ್ಟರು.
ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ನಿಯಮಿತ ಇದರ ತೊಕ್ಕೊಟ್ಟು ಪೆರ್ಮನ್ನೂರು ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ವಾಹನ ಚಾಲಕರಿಗೆ ಆರ್ಥಿಕ ನೆರವು ಹಾಗೂ ಭದ್ರತೆ ನೀಡುವ ಉದ್ದೇಶದಿಂದ ಹುಟ್ಟಿಕೊಂಡ ಈ ಸಂಘ ಇಂದು ಸಾವಿರಾರು ಸದಸ್ಯರ ನಂಬಿಕೆ ಗಳಿಸಿದೆ. ನಂಬಿಕೆ-ವಿಶ್ವಾಸಕ್ಕೆ ಇನ್ನೊಂದು ಹೆಸರೇ ಮ್ಯಾಕೋ ಸೊಸೈಟಿ ಎಂದು ಜನಮನದಲ್ಲಿ ಗುರುತು ಮೂಡಿಸಿಕೊಂಡಿದೆ. ಹಲವಾರು ವರ್ಷಗಳಿಂದ ಬಲ್ಮಠದಲ್ಲಿರುವ ಮ್ಯಾಕೋ ಪೆಟ್ರೋಲ್ ಪಂಪ್ ಸಹ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ದಿನನಿತ್ಯ ವಾಹನ ಚಾಲಕರಿಗೆ ಸೇವೆ ನೀಡುತ್ತಿದೆ. ಕೇವಲ ಇಂಧನ ಕೇಂದ್ರವಲ್ಲದೆ, ಒಂದು ನಂಬಿಕೆಯ ಕೇಂದ್ರವಾಗಿ ಈ ಪಂಪ್ ಪ್ರಸಿದ್ಧಿಯಾಗಿದೆ. ಸಮಾಜಮುಖಿ ಚಟುವಟಿಕೆ, ಪಾರದರ್ಶಕ ನಿರ್ವಹಣೆ ಹಾಗೂ ಸದಸ್ಯರ ಸಹಕಾರದ ಬೆಂಬಲದಿAದ ಮ್ಯಾಕೋ ತನ್ನ 50 ವರ್ಷದ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದರು.

ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್ ನ ಧರ್ಮಗುರುಗಳಾದ ವಂ| ಫಾ| ಸಿಪ್ರಿಯನ್ ಪಿಂಟೋ ಆಶೀರ್ವಚನ ನೆರವೇರಿಸಿ, ಸಮಾಜಮುಖಿ ಚಟುವಟಿಕೆ, ಪಾರದರ್ಶಕ ನಿರ್ವಹಣೆ ಹಾಗೂ ಸದಸ್ಯರ ಸಹಕಾರದ ಬೆಂಬಲದಿAದ ಮ್ಯಾಕೋ ತನ್ನ 50 ವರ್ಷದ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸುವರ್ಣಮಹೋತ್ಸವದ ಸಂದರ್ಭದಲ್ಲಿ ಸಂಸ್ಥಾಪಕರನ್ನು, ಹಳೆಯ ನಾಯಕರನ್ನು ಹಾಗೂ ಸದಸ್ಯರನ್ನು ಸ್ಮರಿಸಿಕೊಂಡು ಭವಿಷ್ಯದಲ್ಲಿ ಬ್ಯಾಂಕ್ ಇನ್ನಷ್ಟು ವಿಸ್ತೃತ ಶಾಖೆಗಳನ್ನು ಸ್ಥಾಪಿಸಿ ಜನರಿಗೆ ಸಹಕಾರವನ್ನು ಮುಂದುವರಿಸಲಿ ಎಂದು ಶುಭಹಾರೈಸಿದರು.
ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರ ಉಳ್ಳಾಲದ ಪ್ರಧಾನ ಅರ್ಚಕರಾದ ಮಂಜಪ್ಪ ಕಾರ್ನವರ್ ಮಾತನಾಡಿ, ತೊಕ್ಕೊಟ್ಟು ಭಾಗದಲ್ಲಿ ಮ್ಯಾಕೋ ಬ್ಯಾಂಕ್ ಆರಂಭಗೊAಡಿರುವುದು ಎಲ್ಲಾ ಚಾಲಕ ವರ್ಗಕ್ಕೆ ಉತ್ತಮವಾಗಿದೆ. ಎಲ್ಲರೂ ಬ್ಯಾಂಕ್ ನ ಜೊತೆಗೆ ಕೈಜೋಡಿಸುತ್ತಾ ತಮ್ಮ ಅಭಿವೃದ್ಧಿಯ ಜೊತೆಗೆ ಬ್ಯಾಂಕ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಿರಿ ಎಂದರು.

ತೊಕ್ಕೊಟ್ಟು ಒಳಪೇಟೆಯ ಶ್ರೀ ವಿಠೋಭ ರುಕ್ಮಾಯಿ ಮಂದಿರ ಇದರ ಅಧ್ಯಕ್ಷರಾದ ಸಚ್ಚಿಂದ್ರ ಸಾಲಿಯಾನ್ , ಸಹಕಾರಿ ಸಂಘದ ಉಪಾಧ್ಯಕ್ಷರಾದ ಸಿರಿಲ್ ಡಿಸೋಜ, ಕರ‍್ಯದರ್ಶಿ ಪ್ರಮೋದ್ ವಾಸ್, ಸಮಾಜಸೇವಕ ಸಿರಿಲ್ ರಾಬರ್ಟ್ ಡಿಸೋಜ, ನಿರ್ದೇಶಕರುಗಳಾದ ಪಿ.ಪಿ.ವರ್ಗೀಸ್, ಅನಿಲ್ ಡಿಸೋಜ, ವಸಂತ ಶೆಟ್ಟಿ, ರಾಜೇಶ್, ಭಾಸ್ಕರ್ ರಾವ್, ಚಂದ್ರಶೇಖರ್ ಎಂ., ಓಲ್ವಿನ್ ಗೋ.ಪಿಂಟೋ, ಚಂದ್ರಶೇಖರ್ ಕೆ., ವಿದ್ಯಾ ವಿನಯ ತೋರಸ್, ಬಬಿತ ಡಿಸೋಜ, ಜೇಮ್ಸ್ ಜೆ. ಮಾಡ್ತಾ, ಎಡ್ವರ್ಡ್ ಆಲ್ವಿನ್ ಫೆರ್ನಾಂಡಿಸ್, ಶೌವಾದ್ ಎಂ., ವಿಶ್ವನಾಥ, ಜಮಾಲುದ್ದೀನ್ ಕದಿಕೆ ಉಪಸ್ಥಿತರಿದ್ದರು.
ನಿರ್ದೇಶಕ ವಸಂತ್ ಶೆಟ್ಟಿ ನಿರೂಪಿಸಿದರು. ಕರ‍್ಯದರ್ಶಿ ಪ್ರಮೋದ್ ವಾಝ್ ವಂದಿಸಿದರು.