ಕೈಕಂಬ ತಡೆಗೋಡೆ ಸಮಸ್ಯೆ: ಶೀಘ್ರವೇ ಸಮಸ್ಯೆ ಬಗೆಹರಿಸುವ ಭರವಸೆ

Date:

ಕೈಕಂಬ: ಕೈಕಂಬ ನಾಗರಿಕ ಹೋರಾಟ ಸಮಿತಿ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿಯನ್ನು ಭೇಟಿಯಾಗಿ, ಕೈಕಂಬದ ತಡೆಗೋಡೆ ಸಮಸ್ಯೆ ಸೇರಿದಂತೆ ಎಲ್ಲಾ ಸಂಬಂಧಿತ ಹೋರಾಟ ವಿಷಯಗಳನ್ನು ಚರ್ಚೆ ಮಾಡಿತು.


ಸಭೆಯಲ್ಲಿ, ಶಾಸಕರು ನಾಗರಿಕರ ಮನವಿಯನ್ನು ಗಮನಿಸಿ ಸ್ಥಳದಲ್ಲೇ ಸಂಸದರು (ಎಂಪಿ) ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಂದಿಗೆ ಫೋನ್ ಮೂಲಕ ಸಂಪರ್ಕಿಸಿ, ಕೈಕಂಬದ ರಸ್ತೆಯ ತಡೆಗೋಡೆಯ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಸೂಚನೆ ನೀಡಿದರು. ಶಾಸಕರು ಶಾಶ್ವತವಾಗಿ ನಾಗರಿಕರ ಸಮಸ್ಯೆಗೆ ಸ್ಪಂದಿಸುವಂತೆ ಭರವಸೆ ನೀಡಿದ್ದು, ಈ ಸ್ಪಂದನೆಗೆ ಕೈಕಂಬದ ನಾಗರಿಕರು ಸಂತೃಪ್ತಿಯ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಸುರೇಶ್ ಬೆಲ್ಚಡ, ಕಂದಾವರ ಮಸೀದಿ ಅಧ್ಯಕ್ಷ ರಾದ ಅಬ್ದುಲ್ಲ ವೆಂಝ್, ಉಪಾಧ್ಯಕ್ಷರಾದ ರಹಮಾನ್ ಮೂನ್ಲೈಟ್, ಮಯ್ಯದಿ ಟೆಂಪೋ, ಡಾ. ಯಾಕೂಬ್ ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...