
ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ. ಜಿಲ್ಲಾ ಆಟೋ ರಾಜಕುಮಾರ್ ಯೂನಿಯನ್ ಸದಸ್ಯ ಹೈದರ್ ಅಲೀ ರವರ ಕುಟುಂಬಕ್ಕೆ ಧನ ಸಹಾಯ ನೀಡಲಾಯಿತು. ಕುಟುಂಬದ ನೆರವಿಗಾಗಿ ಆಟೋ ಚಾಲಕರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಸಂಗ್ರಹಿಸಿದ ಒಟ್ಟು 4,60,000 ರೂ. ಹಣವನ್ನು ಚೆಕ್ ಮೂಲಕ ಹಸ್ತಾಂತರ ಮಾಡಲಾಯಿತು.

ಈ ವೇಳೆ ಮಾತನಾಡಿದ ಆಟೋ ರಾಜಕುಮಾರ್ ಯೂನಿಯನ್ ಸ್ಥಾಪಕಾಧ್ಯಕ್ಷ ಸಿದ್ದೀಕ್ ಕೊಡಕ್ಕಲ್ ಹೈದರಾಲಿ ಅವರಿಗೆ ನಾಲ್ಕು ಸಣ್ಣ ಪ್ರಾಯದ ಮಕ್ಕಳು ಇದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಸಹಕಾರ ದಿಂದ ಸಂಗ್ರಹಿಸಿದ ಹಣ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಆಟೋ ರಾಜಕುಮಾರ್ ಯೂನಿಯನ್ ಸ್ಥಾಪಕಾಧ್ಯಕ್ಷ ಸಿದ್ದೀಕ್ ಕೊಡಕ್ಕಲ್,ಅಧ್ಯಕ್ಷ ಅಬ್ದುಲ್ ಜಲೀಲ್ ಕೆ,ಪ್ರಧಾನ ಕಾರ್ಯದರ್ಶಿ ಶಫೀಕ್ ಬೋಳಿಯಾರ್,ಹಣಕಾಸು ಕಾರ್ಯದರ್ಶಿ ಇಕ್ಬಾಲ್ ಮಾಡೂರ್,ಉಪಾಧ್ಯಕ್ಷ ಮನ್ಸೂರ್, ಕಾರ್ಯದರ್ಶಿ ಶಖೀಖ್ ,ಪದಾಧಿಕಾರಿಗಳಾದ ಶರೀಫ್, ಸಿರಾಜ್, ಅಬ್ಬಾಸ್, ಯೂಸುಫ್, ನಿಸಾರ್, ಸಾದಕ್, ಕಾರ್ಯನಿರ್ವಾಹಕರಾದ ರಿಝ್ವಾನ್, ತಾಸೀನ್, ಉಸ್ಮಾನ್, ಶಾಫೀ, ಹಾರಿಸ್, ಸಮೀರ್, ಇಮ್ರಾನ್, ರಝಾಕ್, ಅಬ್ದುಲ್ಲ ಕೆದುಂಬಾಡಿ ಮತ್ತಿತರರು ಉಪಸ್ಥಿತರಿದ್ದರು.




