vltvkannada.com ಉಳ್ಳಾಲ: ವರ್ಷಂಪ್ರತಿ “ಗುಲ್ಕನ್” ಎಂಬ ಹೆಸರಲ್ಲಿ ನಡೆಯುವ ವಿದ್ಯಾರ್ಥಿಗಳ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಒಂದು ಸೂಕ್ತ ವೇದಿಕೆಯಾಗಿದ್ದು ಅಲ್ ಮದೀನದಲ್ಲಿ ವಿಜೃಂಭಣೆಯ ವಿದ್ಯಾರ್ಥಿ ಕಲೋತ್ಸವ “ಗುಲ್ಕನ್ -25” ಕಾರ್ಯಕ್ರವು ಅ. 29-31 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಇದರ ಭಾಗವಾಗಿ ಸಾಹಿತಿಗಳು, ಕವಿಗಳು ಹಾಗೂ ಕಲಾವಿದರು ಭಾಗವಹಿಸುವ ವಿವಿಧ ಕಾರ್ಯಕ್ರಮಗಳೂ ,ಗೋಷ್ಟಿಗಳೂ ನಡೆಯಲಿದೆ ಎಂದು ಅಲ್ ಮದೀನ ಪ್ರಾದ್ಯಾಪಕ ಅಬ್ದುಲ್ ರಝಾಕ್ ಮಸ್ಟರ್ ತಿಳಿಸಿದರು.
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಈ ಮಾಹಿತಿ ನೀಡಿದರು.
ಕಲಾಪ್ರಿಯರನ್ನು ಆಕರ್ಷಿಸುವ “ಗುಲ್ಕನ್”ನ್ನು ಆಸ್ವಾದಿಸಲು ಸಾವಿರಾರು ಮಂದಿ ಆಲ್ ಮದೀನ ಕ್ಯಾಂಪಸ್ಸಿನಲ್ಲಿ ನೆರೆಯುತ್ತದೆ. ಆಗಸ್ಟ್ 29ರಂದು ಶುಕ್ರವಾರ ಸಯಂಕಾಲ 3 ಗಂಟೆಗೆ ಉದ್ಘಾಟನಾ ಸಮಾರಂಭದೊಂದಿಗೆ ಪ್ರಸ್ತುತ ಕಲೋತ್ಸವಕ್ಕೆ ಚಾಲನೆ ದೊರೆಯಲಿದೆ. ಆಲ್ ಮದೀನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದಿರ್ ಸಕಾಫಿಯ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಅಲ್ ಮದೀನ ಹಿಟ್ಸ್ ಹಾಲ್ ಆಫ್ ಎಕ್ಸಲೆನ್ಸ್ ನ ಪ್ರಾಶುಪಾಲರಾದ ಸಯ್ಯದ್ ಉವೈಸ್ ಅಸ್ಸಖಾಫ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಗುಲ್ಕನ್ ಕಾರ್ಯಕ್ರಮದ ಚೀಫ್ ಪಾಟ್ರೋನ್ ಅಬ್ದುಸ್ಸಲಾಂ ಅಹ್ವನಿ ಉದ್ಘಾಟಿಸಲಿದ್ದಾರೆ.
ತದ ನಂತರ ನಡೆಯುವ ವಿಚಾರ ಗೋಷ್ಠಿಯಲ್ಲಿ ಚಿಂತಕ, ಸಾಹಿತಿ ಹಾಗೂ ಅಂಕಣಕಾರ ಯೋಗೇಶ್ ಮಾಸ್ಟರ್ ವಿಷಯ ಮಂಡನೆ ಮಾಡಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಮಾಜಿಕ ಮುಖಂಡರುಗಳಾದ ಜನಾಬ್ ಅಬ್ದುಲ್ ಲತೀಫ್ ಗುರುಪುರ, ಅಮೀನ್ ಹಾಜಿ ಎಚ್ ಎಚ್ ಕೋ, ಅಬ್ದುನ್ನಸಿರ್ ಮಬ್ರಾರ್ ಗೊಲ್ಡ್ ಭಾಗವಹಿಸಲಿದ್ದಾರೆ. ರಾತ್ರಿ 7 ಗಂಟೆಗೆ ಫವಾಝ್ ಪಾಲಕ್ಕಾಡ್ ಕಲಾವಿದ ತಂಡದವರಿಂದ ಆಕರ್ಷಕ “ಇಶಲ್ ನೈಟ್” ಪ್ರಕರ್ತನ ಗಾಯನಾ ಕಾರ್ಯಕ್ರಮ ನಡೆಯಲಿದೆ. ಅಗಸ್ಟ್ 30 ಮತ್ತು 31 ರಂದು ‘ಇಸ್ರಾ’, ‘ಹಿಜ್ರಾ’ ಮತ್ತು ‘ಫತ್’ ಎಂಬ ಮೂರು ಪ್ರತಿಭಾ ತಂಡಗಳ ಪ್ರತಿಭಾ ಪ್ರರ್ದಶನ ನಡೆಯಲಿದೆ. ಆಗಸ್ಟ್ 31 ಸಯಂಕಾಲ 9:00ಕ್ಕೆ ಸಮಾರೋಪ ಹಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.
ಮೂರು ದಶಕಗಳ ಹಿಂದೆ, ಖ್ಯಾತ ವಿದ್ವಾಂಸ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ರಿಂದ ಸ್ಥಾಪನೆಗೊಂಡ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ-ನರಿಂಗಾನ ಇದರ ಅಧೀನದಲ್ಲಿರುವ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿದೆ ಅಲ್ ಮದೀನ ಹಿಬ್ ಹಾಲ್ ಆಫ್ ಎಕ್ಸೆಲೆನ್ಸ್. ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಆಹಾರ -ವಸತಿಯೊಂದಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಪದವಿ ಪೂರ್ವ ವಿದ್ಯಾಭ್ಯಾಸದಿಂದ ಸ್ನಾತಕೋತ್ತರ ಪದವಿ ತನಕ ಶಿಕ್ಷಣ ನೀಡುವ ಸಂಸ್ಥೆಯಿದು. ಕೇವಲ ಅಕಾಡೆಮಿಕ್ ಶಿಕ್ಷಣ ಮಾತ್ರವಲ್ಲದೆ, ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಿ ಬಾಳುವ ರೀತಿಯಲ್ಲಿ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಹಾಗೂ ಅವರಲ್ಲಿರುವ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯಗಳನ್ನೂ ಮಾಡುತ್ತಿದೆ.ಈ ಮೂಲಕ ಇಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಭಾಷಣ, ಬರಹ, ಕವನ, ಗಾಯನ ಮತ್ತಿತರ ಕಲೆಗಳಲ್ಲಿ ಗುರುತಿಸುವ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಗುಲ್ಕನ್ ಕಲೋತ್ಸವದ ಚೆಯರ್ಮಾನ್ ಜುರೈಜ್ ವಿರಾಜಪೇಟೆ,ಕನರ್ ಅಬ್ದುಲ್ ರಹಿಮಾನ್ ಕೊಣಾಜೆ, ಬಿಷಾರತುಲ್ ಮದಿನಾ ಸ್ಟುಡೆಂಟ್ಸ್ ಎಸೋಸಿಯೇಶನ್ ಅಧ್ಯಕ್ಷ ಲುಕ್ಕಾನುಲ್ ಹಕೀಂ ಕುತ್ತಾರ್, ಕಾರ್ಯದರ್ಶಿ ಮುಝಮ್ಮಿಲ್ ಲಾಡಿ ಉಪಸ್ಥಿತರಿದ್ದರು.