
ದಮ್ಮಾಮ್(K.S.A.): ಮಂಜೇಶ್ವರ ಉದ್ಯಾವರ ಅನಿವಾಸಿ ಒಕ್ಕೂಟ (U.I.E.O) ದಮ್ಮಾಮ್ ಕಮಿಟಿಯ ಸ್ಥಾಪಕ ಸದಸ್ಯರು ಹಾಗೂ ಸಮುದಾಯದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸದಾ ಶ್ರಮಿಸುತ್ತಿರುವ, ನಮ್ಮೂರಿನ ಸದ್ದಿಲ್ಲದ ಸಮಾಜ ಸೇವಕರಾದ ಹನೀಫ್ ಕಜ’ರವರಿಗೆ ದಮ್ಮಾಮ್ ಕಮಿಟಿಯ ವತಿಯಿಂದ ಶಾಲು ಹೊದಿಸಿ ಗೌರವಪೂರ್ಣ ಸನ್ಮಾನ ಸ್ವೀಕಾರ ಸಲ್ಲಿಸಲಾಯಿತು. ಸಮುದಾಯದ ಬೆಳವಣಿಗೆಗೆ ನೀಡಿದ ಅವರ ನಿರಂತರ ಸೇವೆಯನ್ನು ಸಮಿತಿಯ ವಕ್ತಾರರು ಹೃತ್ಪೂರ್ವಕವಾಗಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಮೊಯಿದೀನ್ ಬೆಳ್ತರಿ, ಕಾದರ್ ಕರೋಡ, ಹ್ಯಾರಿಸ್ ಕಜ,
ನಿಝಾರ್ ಗುಡ್ವೇ, ರಾಝಿಕ್ ಉದ್ಯಾವರ, ಫಯಾಜ್ 10 ಮೈಲ್, ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.