ಸಾಲೆತ್ತೂರು: ಮುಖ್ಯ ರಸ್ತೆಯಲ್ಲಿ ದುರ್ಗಂಧ ಭೀರುತ್ತಿದೆ ಕೊಳಚೆ ನೀರಿನ ಹೊಂಡ, ಸಾರ್ವಜನಿಕರ ಆಕ್ರೋಶ

Date:

ಸಾಲೆತ್ತೂರು, ಮಾ.2: ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರು ಬದ್ರಿಯಾ ಜುಮಾ ಮಸೀದಿ ಸಮೀಪ ಗ್ರಾಮ ಪಂಚಾಯತ್ ವತಿಯಿಂದ ನಿರ್ಮಿಸಲಾದ ಕೊಳಚೆ ನೀರು ಶೇಖರಣಾ ಹೊಂಡವು ತೀವ್ರ ದುರ್ಗಂಧವನ್ನು ಹರಡುತ್ತಿದ್ದು, ಸಾರ್ವಜನಿಕರಿಗೆ ಭಾರೀ ತೊಂದರೆ ಉಂಟುಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಹೊಂಡದಿಂದ ಉಂಟಾಗುತ್ತಿರುವ ದುರ್ಗಂಧದ ಪರಿಣಾಮವಾಗಿ ಸುತ್ತಮುತ್ತಲಿನ ಮನೆ ನಿವಾಸಿಗಳು ಅಸಹನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದೇ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ಸಹ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಶಾಲಾ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಮೂಗು ಮುಚ್ಚಿಕೊಂಡೇ ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆ ಆರೋಗ್ಯ ಸಮಸ್ಯೆಗಳ ಭೀತಿ ಕೂಡ ಹೆಚ್ಚುತ್ತಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹೊಂಡವನ್ನು ಸ್ವಚ್ಛಗೊಳಿಸುವುದರ ಜೊತೆಗೆ ದುರ್ಗಂಧ ನಿವಾರಣೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು SDPI ಕೊಳ್ನಾಡು ಗ್ರಾಮ ಸಮಿತಿಯ ಅಧ್ಯಕ್ಷರಾದ ಬಶೀರ್ ಕೊಳ್ನಾಡು ಆಗ್ರಹಿಸಿದ್ದಾರೆ.

ಈ ಕುರಿತು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.

ಸ್ಥಳೀಯರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಮೂಡುಬಿದಿರೆ: ಕರಾವಳಿ ಹಾಗೂ ಮಲೆನಾಡಿನ...

ರಂಗ ಸ್ವರೂಪ (ರಿ.) ಕುಂಜತ್ತಬೈಲ್ ವತಿಯಿಂದ ಬೇಸಿಗೆ ಶಿಬಿರ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ

ಕಾವೂರು: ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಆಯೋಜಿಸಿದ ರಂಗೋತ್ಸವ 2026' 4ದಿನಗಳ...

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...