ಪೂನದಲ್ಲಿ ಎಣ್ಣೆಹೊಳೆಯ ಹೋಟೆಲ್ ಉದ್ಯಮಿಯ ಹತ್ಯೆ

Date:

ಮುಂಬಯಿ, ಆ.27: ಹೊಟೇಲ್ ಸಿಬ್ಬಂದಿಯೊಬ್ಬ ಮದ್ಯಪಾನ ಮಾಡಿ ಕೆಲಸ ಮಾಡುತ್ತಿದ್ದಕ್ಕೆ ಗದರಿದ ಹೊಟೇಲ್ ಮಾಲೀಕನನ್ನೇ ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಪೂನಾದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಕಾರ್ಕಳ ತಾಲೂಕಿನ ಎಣ್ಣೆಹೊಳೆ ಕುಮೇರುಮನೆ ನಿವಾಸಿ ಹೊಟೇಲ್ ಉದ್ಯಮಿ ಸಂತೋಷ್ ಶೆಟ್ಟಿ (46.) ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶ ಮೂಲದ ವೆಚ್ಚರ್‌ ಹೊಟೇಲ್ ನಲ್ಲಿ ಕೆಲಸದ ಸಮಯದಲ್ಲಿ ಮದ್ಯಪಾನ ಮಾಡಿರುವುದಕ್ಕೆ ಬೈದು ಬುದ್ದಿವಾದ ಹೇಳಿದ್ದಕ್ಕೆ ಸಿಟ್ಟಿಗೆದ್ದ ಆತ ಕಿಚನ್’ನಿಂದ ಕತ್ತಿ ಹಿಡಿದುಕೊಂಡು ಬಂದು ಸಂತೋಷ್‌ ಶೆಟ್ಟಿಯವರು ಕುಳಿತ್ತಿದ್ದ ವೇಳೆ ಹಿಂಬದಿಯಿಂದ ಕುತ್ತಿಗೆಗೆ ಕಡಿದು ಹತ್ಯೆ ಮಾಡಿದ್ದಾನೆ.ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಭೀಕರ ಹತ್ಯೆಯಿಂದ ಪೂನಾದ ಹೊಟೇಲ್ ಉದ್ಯಮಿಗಳು ಬೆಚ್ಚಿಬಿದ್ದಿದ್ದು ಘಟನಾ ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದಾರೆ.
ಮೃತ ಸಂತೋಷ್‌ ಶೆಟ್ಟಿ ಶವವನ್ನು ಹುಟ್ಟೂರು ಗೆಹೊಳೆಗೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...