ದ್ವಿತೀಯ ಪಿಯು ಫಲಿತಾಂಶ: ನ್ಯೂ ವೈಬ್ರೆಂಟ್ ಪ. ಪೂ. ಕಾಲೇಜು ಅತ್ಯುತ್ತಮ ಸಾಧನೆ

Date:

ಮೂಡುಬಿದಿರೆ: ವೈಬ್ರೆಂಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನಡಿ ಕಾರ್ಯನಿರ್ವಹಿಸುತ್ತಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿದೆ. ಈ ಉತ್ತಮ ಸಾಧನೆಯೊಂದಿಗೆ ರಾಜ್ಯದ ಪ್ರಮುಖ ಪಿಯು ಕಾಲೇಜುಗಳಲ್ಲಿ ವೈಬ್ರೆಂಟ್ ಒಂದಾಗಿ ಗುರುತಿಸಿಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ರಾಂಕ್ ಪಡೆದಿರುವ ವಿದ್ಯಾರ್ಥಿ ಧನುಷ್ ಗುತ್ತಿ, “ನನಗೆ ವಿಜ್ಞಾನ ವಿಭಾಗದಲ್ಲಿ 598 ಅಂಕಗಳನ್ನು ಗಳಿಸಲು ನನ್ನ ಕಾಲೇಜಿನ ಕೊಡುಗೆ ಮಹತ್ತರವಾದುದು. ಕಾಲೇಜಿನಲ್ಲಿ ನಡೆಯುವ ಗೈಡೆಡ್ ಸ್ಟಡಿ ನನಗೆ ಉತ್ತಮ ಅಂಕ ಗಳಿಸಲು ಸಹಾಯ ವಾಯಿತು.” ಎಂಬ ಸಂತಸದ ಮಾತುಗಳನ್ನು ವ್ಯಕ್ತ ಪಡಿಸಿದರು.

ವಿಜ್ಞಾನ ವಿಭಾಗದ ರ್ಯಾಂಕ್ ವಿಜೇತೆ ಸರಸ್ವತಿ ಎಂ.ಎಸ್ ” 593 ಅಂಕ ಬಂದಿರುವುದು ಬಹಳ ಖುಷಿ ಆಯಿತು. ಹಲವು ದಿನಗಳಿಂದ ಉಪನ್ಯಾಸಕರ ಮಾರ್ಗದರ್ಶನ ಮತ್ತು ನಮ್ಮ ಕಾಲೇಜಿನ ನಿರ್ದೇಶಕರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು. ಎಂಬ ಹರುಷವನ್ನು ವ್ಯಕ್ತ ಪಡಿಸಿದರು.

ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ ರಾಂಕ್ ಪಡೆದಿರುವ ತಸ್ನೀಮ್ ಎಸ್. ಎಂ ” 592 ಅಂಕ ಬಂದಿರುವುದರಿಂದ ಬಹಳ ಸಂತೋಷ ಆಗ್ತಾ ಇದೆ. ನನ್ನ ಕಾಲೇಜಿನ ವಾತಾವರಣ, ಉಪನ್ಯಾಸಕರ ಮಾರ್ಗದರ್ಶನದಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು.” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾಲೇಜಿನ ನಿರ್ದೇಶಕರು ಮತ್ತು ಬೋಧಕ ಮತ್ತು ಬೋಧಕೇತರ ವೃಂದದವರು ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ವ್ಯಕ್ತ ಪಡಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...