ಮೂಡಬಿದಿರೆ: ಸೋಮವಾರ ಸಂಜೆ ದರೆಗುಡ್ಡೆ ಗ್ರಾಮದ ಕೆಲ್ಲಪುತ್ತಿಗೆ ಪರಾರಿ ಬಳಿಯ ಆನಂದ ಮೇರ ಎಂಬವರ ಮನೆಯ ಕೊಟ್ಟಿಗೆಗೆ ಸಿಡಿಲು ಬಡಿದು ಮೂರು ದನಗಳು ಮೃತ ಪಟ್ಟ ಘಟನೆ ನಡೆದಿದೆ.

ಸಂಜೆ ವೇಳೆ ಮೂಡಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಸಿಡಿಲಿನ ಅಬ್ಬರ ಹೆಚ್ಚಾಗಿತ್ತು. ಮಳೆ ಕೂಡಾ ಸುರಿದಿತ್ತು. ಆನಂದ ಮೇರ ಅವರು ಮೂರು ದನಗಳಿಂದ ಹಾಲು ಸಂಗ್ರಹಿಸಿ ದಿಪ್ಪೊಗೆ ನೀಡುತ್ತಿದ್ದರು ಎನ್ನಲಾಗಿದೆ.


