ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ: ವಿದ್ವತ್ ಪಿಯು ಕಾಲೇಜಿಗೆ ಮತ್ತೊಂದು ಗರಿ

Date:

ವಿಜ್ಞಾನ ವಿಭಾಗದಲ್ಲಿ ಅಗ್ರಪಂಕ್ತಿ ಸಾಧಿಸಿದ ಚಿನ್ಮಯ್ ಜಿ.ಕೆ. ಶೇ.99.16

ಬೆಳ್ತಂಗಡಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು ಪ್ರಥಮ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ ದಾಖಲಿಸಿರುವ ನಡುವೆ ಮರು ಮೌಲ್ಯಮಾಪನದಲ್ಲಿ ಇದೀಗ ಚಿನ್ಮಯ್ ಜಿ.ಕೆ. (595) ಶೇ.99.16 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ 5 ನೇ ಸ್ಥಾನಕ್ಕೆ ಜಿಗಿದು ಕಾಲೇಜಿನಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.

ವಿಜ್ಞಾನ ವಿಭಾಗದ ಪ್ರಥಮ ಫಲಿತಾಂಶದಲ್ಲಿ ತನುಶ್ರೀ (593) ಶೇ.98.83 ಅಂಕ ಗಳಿಸಿ ರಾಜ್ಯದಲ್ಲಿ 7 ಸ್ಥಾನ ಪಡೆದಿದ್ದರು. ಈ ವೇಳೆ ಚಿನ್ಮಯ್ ಜಿ.ಕೆ. ಅವರು ಮರು ಮೌಲ್ಯಮಾಪನಕ್ಕೆ ಒಳಪಡಿಸಿದಂತೆ ಏಪ್ರಿಲ್ 29 ರಂದು ಹೊರಬಂದ ಮರು ಮೌಲ್ಯಮಾಪನ ಫಲಿತಾಂಶದಲ್ಲಿ (595) ಶೇ.99.16 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 5 ನೇ ರ್ಯಾಂಕ್ (ಭೌತಶಾಸ್ತ್ರ-100, ರಸಾಯನಶಾಸ್ತ್ರ-100, ಗಣಿತ-100 ಮತ್ತು ಗಣಕ ವಿಜ್ಞಾನ-100) ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ತನುಶ್ರೀ (593) ಶೇ.98.83% (ರಸಾಯನಶಾಸ್ತ್ರ-100, ಭೌತಶಾಸ್ತ್ರ-100 ಗಣಿತಶಾಸ್ತ್ರ-100, ಜೀವಶಾಸ್ತ್ರ-100) ನಾಲ್ಕು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದು ರಾಜ್ಯಕ್ಕೆ 7 ನೇ ರ್ಯಾಂಕ್ ಹಾಗೂ ಕಾಲೇಜಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಧ್ಯಾನ ಈ ಹಿಂದೆ (590) ಅಂಕ (ಕನ್ನಡ-100, ವ್ಯವಹಾರ ಅಧ್ಯಯನ-100, ಲೆಕ್ಕಶಾಸ್ತ್ರ-100) ಪಡೆದಿದ್ದು ಮರು ಮೌಲ್ಯಮಾಪನ ನಡೆಸಿದಾಗ ಭಾಷಾ ವಿಷಯದಲ್ಲಿ ಹೆಚ್ಚುವರಿ 1 ಅಂಕ ಪಡೆದು (591) ಶೇ.98.50 ಅಂಕ ಪಡೆದು ರಾಜ್ಯಕ್ಕೆ 9 ನೇ ರ್ಯಾಂಕ್, ಕಾಲೇಜಿಗೆ ತೃತೀಯ ಸ್ಥಾನಿಯಾಗಿದ್ದಾರೆ.

ಉಳಿದಂತೆ ವಿಜ್ಞಾನ ವಿಭಾಗದಲ್ಲಿ ಈ ಹಿಂದೆ ಜಿ.ಎಸ್.ರಾಹುಲ್ (584) -ಶೇ.97.33% ಪಡೆದಿದ್ದು ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ 4 ಅಂಕಪಡೆದು (588)- ಶೇ.98, ಆಶ್ಲೇಷ್ ಜೆ.ಎಸ್. ಹೆಚ್ಚುವರಿ 6 ಅಂಕ ಪಡೆದು (573) ಶೇ.95., ಸಮ್ಯಕ್ ತೇಜಸ್ವಿ ಹೆಚ್ಚುವರಿ 4 ಅಂಕ ಪಡೆದು (576) ಶೇ.96 ಹಾಗೂ ಮೈತಿಲಿ ಗೋರೆ, ಮೋಕ್ಷಾ, ನಿನಾದ ಎಸ್.ಎ., ಪ್ರಣವ್ ದೇವ್, ವೆನಿಕಾ ಬಿ.ವೈ., ವಿಕಾಸ್ ಜಿ.ಎನ್., ಯಶಸ್ವಿ ಆರ್.ಸಾಲ್ಯಾನ್, ಯಶಸ್ವಿನಿ ಜಯೇಂದ್ರ ಬಂಗೇರ ಹೆಚ್ಚುವರಿ ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ನೇಹಾ ಭಟ್ ಈ ಹಿಂದೆ 573 ಅಂಕ ಪಡೆದಿದ್ದು ಹೆಚ್ಚುವರಿ 11 ಅಂಕ ಪಡೆದು (584) ಶೇ.97.33, ಒಟ್ಟು 17 ಮಂದಿ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕಾಗಿ ಪ್ರಯತ್ನಿಸಿದ್ದು ಈ ಪೈಕಿ ಬಹುತೇಕ ಮಂದಿ ಅತ್ಯುತ್ತಮ ಅಂಕದೊಂದಿಗೆ ಕಾಲೇಜಿಗೆ ಮತ್ತೊಂದು ಗರಿ ತಂದಿದ್ದಾರೆ. ಈ ಫಲಿತಾಂಶದಿಂದ ಕಾಲೇಜಿನ ಶೈಕ್ಷಣಿಕ ಮಂಡಳಿಯನ್ನು ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ರೈ, ಖಜಾಂಚಿ ಎಂ.ಕೆ.ಕಾಶಿನಾಥ್., ಶೈಕ್ಷಣಿಕ ನಿರ್ದೇಶಕ ಗಂಗಾಧರ್ ಇ.ಮಂಡಗಳಲೆ ಪ್ರಶಂಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ: ಆಳ್ವಾಸ್ ಕ್ರೀಡಾಪಟುಗಳ ಗಮನಾಹ೯ ಸಾಧನೆ

ಮೂಡುಬಿದಿರೆ: ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ರಾಜ್ಯಮಟ್ಟದ ದಸರಾ ಸಿಎಂ ಕಪ್...

ಪುತ್ತಿಗೆ ಗುಂಡ್ಯಡ್ಕದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕ ಶ್ರೀನಿವಾಸಪುರ ವಿಠೋಭ ಭಜನಾ...

ಮೂಡಬಿದಿರೆ: ಧವಲಾ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ‘ವೇಯ್ಟ್ ಲಿಫ್ಟಿಂಗ್’ ಸ್ಪರ್ಧೆ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಕಾಲೇಜಿನಲ್ಲಿ 2026-27ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ...

ಮಂಗಳೂರು: ಎಂಆರ್‌ಪಿಎಲ್ ಸ್ಫೋಟ ದುರಂತಕ್ಕೆ ಮತ್ತೊಂದು ಬಲಿ; ಗಂಭೀರ ಗಾಯಗೊಂಡಿದ್ದ ರಾಜೇಶ್ ಡಿಸಿಲ್ವ ನಿಧನ

ಮಂಗಳೂರು: ಮಂಗಳೂರು ನಗರದ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ದುರಂತ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ...