ಮೂಡಬಿದಿರೆ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೂಡಬಿದಿರೆಯ ಇತಿಹಾಸ ಪ್ರಸಿದ್ಧ ಸಾವಿರ ಕಂಬ ಬಸದಿಯ ಆವರಣದಲ್ಲಿ ಜೈನ ಪ್ರೌಢಶಾಲೆಯ ಎನ್ಸಿಸಿ ಕೆಡೆಟ್ಗಳು ಯೋಗಾಭ್ಯಾಸ ನಡೆಸಿದರು.

ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಪ್ರಥ್ವಿರಾಜ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎನ್ಸಿಸಿ ಅಧಿಕಾರಿ ವಿನಯಚಂದ್ರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಶಿಕ್ಷಕಿ ಮಹಾದೇವಿ ಭಂಡಾರಿ ಉಪಸ್ಥಿತರಿದ್ದರು.



