ಮೂಡಬಿದಿರೆಯಲ್ಲಿ ಮಾರುತಿ ಸಿಯಾಜ್ ಕಾರಿಗೆ ಬೆಂಕಿ: ಕಾರಿನಲ್ಲಿದ್ದವರು ಪಾರು

Date:

ಮೂಡಬಿದಿರೆ: ಫಾಗ್ ಲೈಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರೊಂದು ಸುಟ್ಟ ಘಟನೆ ಮೂಡಬಿದಿರೆ ಪೇಟೆಯಲ್ಲಿ ಸೋಮವಾರ ಸಂಜೆ ನಡೆದಿದ್ದು ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಕೋಟೆಬಾಗಿಲಿನ ಮಸೂದು ಅವರು ಇಂದೇ ನಾಲ್ಕು ಗಂಟೆಯ ವೇಳೆಗೆ ಮೂಡುಮಾನಾ೯ಡಿನ ಅವಿನಾಶ್ ಎಂಬವರಿಂದ ಮಾರುತಿ ಸಿಯಾಜ್ ಕಾರನ್ನು ಖರೀದಿಸಿ ತಮ್ಮ ಕುಟುಂಬದೊಂದಿಗೆ ಮೂಡಬಿದಿರೆಗೆ ಬರುತ್ತಿದ್ದ ಸಂದಭ೯ ಪುರಸಭೆಯ ಹಳೆ ಕಟ್ಟಡದ ಬಳಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಕಾರನ್ನು ನಿಲ್ಲಿಸಿ ಒಳಗಿದ್ದ ಪುಟ್ಟ ಮಕ್ಕಳು ಮತ್ತು ಮಹಿಳೆಯರನ್ನು ಕೆಳಗಿಸಿದ್ದಾರೆ ಇದೇ ಸಂದಭ೯ದಲ್ಲಿ ಜೋರಾಗಿ ಬೆಂಕಿ ಉರಿಯಲು ಆರಂಭಿಸಿದೆ.

ಅಗ್ನಿಶಾಮಕ ದಳವು ಆಗಮಿಸಿ ಸಾವ೯ಜನಿಕರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಮೂಲ್ಕಿ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ

ಕೊಂಕಣ ರೈಲ್ವೆ ನಷ್ಟದಲ್ಲಿದೆ ವಿಲೀನಗೊಳಿಸುವುದೇ ಸೂಕ್ತ ಪರಿಹಾರ: ಬ್ರಿಜೇಶ್ ಚೌಟ ಮೂಲ್ಕಿ: ಹಣಕಾಸಿನ...

ನೀಕೆ೯ರೆ ಪ್ರೌಢಶಾಲೆಯಲ್ಲಿ ನೂತನ ಕೊಠಡಿಗಳ ಉದ್ಘಾಟನೆ

ಪ್ರಧಾನ ಮಂತ್ರಿಗಳ ಆಶಯದಂತೆ ವಿದ್ಯಾರ್ಥಿಗಳ ಭವಿಷ್ಯದ ಕನಸು ಸಾಕಾರ: ಸಂಸದ ಬ್ರಿಜೇಶ್...

ಜಿಲ್ಲಾ ಕಂಬಳ ಸಮಿತಿ ಮಹಾಸಭೆ: 2026-27ನೇ ಕಂಬಳ ವೇಳಾಪಟ್ಟಿ ಬಿಡುಗಡೆ

ಮೂಡಬಿದಿರೆ: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯ ಜಿಲ್ಲಾ...