ಕಣಚೂರು ಪಬ್ಲಿಕ್ ಸ್ಕೂಲಿನಲ್ಲಿ ವಿದ್ಯಾರ್ಥಿ ನಾಯಕತ್ವ ಪದಗ್ರಹಣ ಸಮಾರಂಭ ಹಾಗೂ 2025–26ನೇ ಸಾಲಿನ CBSE -10ನೇ ತರಗತಿ ಸಾಧಕರ ಸನ್ಮಾನ

Date:


ಉಳ್ಳಾಲ: ಕಣಚೂರು ಪಬ್ಲಿಕ್ ಸ್ಕೂಲ್, ದೇರಳಕಟ್ಟೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ನಾಯಕತ್ವ ಪದಗ್ರಹಣ (Investiture Ceremony) ಸಮಾರಂಭವು ಜೂನ್ 25, 2026 ರಂದು ಶಾಲಾ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಪ್ರೊ. ಡಾ. ಯತೀಶ್ ಕುಮಾರ್, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕರು, ಯುನಿವರ್ಸಿಟಿ ಕಾಲೇಜು ಮಂಗಳೂರು ಹಾಗೂ ಲೆಫ್ಟಿನೆಂಟ್ ಕಮಾಂಡರ್, 5 KAR NCC ನೇವಲ್ ಯುನಿಟ್ ಭಾಗವಹಿಸಿದ್ದರು.


ಕಾರ್ಯಕ್ರಮವು ಶಾಲಾ ಗಾಯನ ತಂಡದವರಿಂದ ಪ್ರಾರ್ಥನೆ ಹಾಗೂ ನಾಡಗೀತೆಯೊಂದಿಗೆ ಆರಂಭವಾಯಿತು. ನಂತರ ಶ್ರೀಮತಿ ಅರ್ಚನಾ ಶಿರಾಲಿ, ಹಿಂದಿ ಶಿಕ್ಷಕಿ ಮುಖ್ಯ ಅತಿಥಿಯನ್ನು ಸ್ವಾಗತಿಸಿ ಪರಿಚಯಿಸಿದರು. ಶ್ರೀಮತಿ ಕರೆನ್ ಟ್ರೆಸ್ಕಿಲ್ಲಾ ಡಿಸೋಜ, ಪ್ರಾಂಶುಪಾಲರು, ಕಣಚೂರು ಪಬ್ಲಿಕ್ ಸ್ಕೂಲ್, ಅವರು ಶಾಲಾ ವಿದ್ಯಾರ್ಥಿ ನಾಯಕ ಹಾಗೂ ಶಾಲಾ ವಿದ್ಯಾರ್ಥಿನಿ, ಉಪ ಶಾಲಾ ವಿದ್ಯಾರ್ಥಿ ನಾಯಕ ಹಾಗೂ ಉಪ ಶಾಲಾ ವಿದ್ಯಾರ್ಥಿ ನಾಯಕಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಮಾಸ್ಟರ್ ಹಯಾಝ್ ಅಹ್ಮದ್ ಅವರ ನೇತೃತ್ವದಲ್ಲಿ ನೂತನ ವಿದ್ಯಾರ್ಥಿ ಪರಿಷತ್ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು.


ನಂತರ ಶಾಲೆಯ ನೂತನ ಶಾಲಾ ವಿದ್ಯಾರ್ಥಿ ನಾಯಕ ಹಾಗೂ ಶಾಲಾ ವಿದ್ಯಾರ್ಥಿನಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಧಿಕಾರದ ಪ್ರತೀಕವಾದ ಬ್ಯಾಡ್ಜ್‌ಗಳನ್ನು ಅಲಂಕರಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪ್ರೊ. ಡಾ. ಯತೀಶ್ ಕುಮಾರ್,ಶ್ರೀಅಬ್ದುಲ್ ರಹಿಮಾನ್ ಸಂಚಾಲಕರು, ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಪ್ರೊ. ಇಕ್ಬಾಲ್ ಅಹ್ಮದ್ ಯು.ಟಿ., ಪ್ರಾಂಶುಪಾಲರು ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಸೈನ್ಸ್ ಹಾಗೂ ಶ್ರೀಮತಿ ಶಾಹಿದಾ ಬಿ.ಎಂ., ಪ್ರಾಂಶುಪಾಲರು, ಕಣಚೂರು ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಬ್ಯಾಡ್ಜ್‌ಗಳನ್ನು ಅಲಂಕರಿಸಿ ನಾಯಕತ್ವದ ಜವಾಬ್ದಾರಿಯನ್ನು ವಹಿಸಿದರು.


ಬಳಿಕ ಮುಖ್ಯ ಅತಿಥಿಗಳಾದ ಪ್ರೊ. ಡಾ. ಯತೀಶ್ ಕುಮಾರ್ ಹಾಗೂ ಗೌರವ ಅತಿಥಿಗಳಾದ ಪ್ರೊ. ಡಾ. ಎಂ. ಅಬ್ದುಲ್ ರಹಿಮಾನ್, ಅಧ್ಯಕ್ಷರು, ಸಲಹಾ ಮಂಡಳಿ, ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಾಜಿ ಕುಲಪತಿಗಳು, ಕಣ್ಣೂರು ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾಲಯಗಳು ವಿವಿಧ ಹೌಸ್ ಕ್ಯಾಪ್ಟನ್‌ಗಳಿಗೆ ಧ್ವಜಗಳನ್ನು ಹಸ್ತಾಂತರಿಸಿ ಶುಭ ಹಾರೈಸಿದರು.


ಇದೇ ಸಂದರ್ಭದಲ್ಲಿ 2025–26ನೇ ಸಾಲಿನ CBSE 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಧಕರಿಗೆ ಪ್ರಶಂಸಾ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಪರಿಶ್ರಮ ಮತ್ತು ಪೋಷಕರ ಸಹಕಾರ ಕಾರಣವೆಂದು ಗಣ್ಯರು ಅಭಿಪ್ರಾಯಪಟ್ಟರು.


ಮುಖ್ಯ ಅತಿಥಿಗಳಾದ ಪ್ರೊ. ಡಾ. ಯತೀಶ್ ಕುಮಾರ್ ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ, ಸೇವಾ ಮನೋಭಾವ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ನಾಯಕತ್ವ ಎಂದರೆ ಅಧಿಕಾರವಲ್ಲ, ಜವಾಬ್ದಾರಿ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ತಿಳಿಸಿದರು. ಶಾಲಾ ದಿನಗಳಲ್ಲೇ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಸಮಾಜದ ಆದರ್ಶ ಪ್ರಜೆಗಳಾಗಲು ಸಾಧ್ಯ ಎಂದು ಅವರು ಹೇಳಿದರು.
ಗೌರವ ಅತಿಥಿಗಳಾದ ಪ್ರೊ. ಡಾ. ಎಂ. ಅಬ್ದುಲ್ ರಹಿಮಾನ್, ಅಧ್ಯಕ್ಷರು, ಸಲಹಾ ಮಂಡಳಿ, ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಾಜಿ ಕುಲಪತಿಗಳು, ಕಣ್ಣೂರು ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾಲಯಗಳು ತಮ್ಮ ಸಂದೇಶದಲ್ಲಿ ಶಿಕ್ಷಣವು ಕೇವಲ ಅಂಕಗಳ ಗಳಿಕೆಗೆ ಸೀಮಿತವಾಗಿರದೆ, ವ್ಯಕ್ತಿತ್ವ ವಿಕಸನ ಹಾಗೂ ಮೌಲ್ಯಾಧಾರಿತ ಜೀವನ ನಿರ್ಮಾಣಕ್ಕೆ ದಾರಿಯಾಗಬೇಕು ಎಂದು ತಿಳಿಸಿದರು. ವಿದ್ಯಾರ್ಥಿ ನಾಯಕರು ತಮ್ಮ ಸಹಪಾಠಿಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಿ ಶಾಲೆಯ ಶಿಸ್ತು ಮತ್ತು ಗೌರವವನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು. ಕಣಚೂರು ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಪ್ರಗತಿಯನ್ನು ಶ್ಲಾಘಿಸಿದ ಅವರು, ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಸ್ಪರ್ಧೆಗಳಿಗೆ ತಮ್ಮನ್ನು ಸಜ್ಜುಗೊಳಿಸಿಕೊಳ್ಳುವಂತೆ ಕರೆ ನೀಡಿದರು.


ಅಧ್ಯಕ್ಷೀಯ ಭಾಷಣದಲ್ಲಿ ಶ್ರೀಅಬ್ದುಲ್ ರಹಿಮಾನ್ ಸಂಚಾಲಕರು, ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅವರು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ನೈತಿಕ ಮೌಲ್ಯಗಳು, ಮಾನವೀಯತೆ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ನಾಯಕತ್ವ ಹುದ್ದೆಗಳನ್ನು ಅಲಂಕರಿಸಿರುವ ವಿದ್ಯಾರ್ಥಿಗಳು ಶಿಸ್ತು, ಜವಾಬ್ದಾರಿ ಹಾಗೂ ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಜೊತೆಗೆ, ತಮ್ಮ ನಾಯಕತ್ವ ಗುಣಗಳ ಮೂಲಕ ಶಾಲೆಯ ಕೀರ್ತಿ ಹಾಗೂ ಗೌರವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರವಹಿಸಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಪ್ರೊ. ಇಕ್ಬಾಲ್ ಅಹ್ಮದ್ ಯು.ಟಿ., ಪ್ರಾಂಶುಪಾಲರು, ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಸೈನ್ಸ್, ಶ್ರೀಮತಿ ಶಾಹಿದಾ ಬಿ.ಎಂ., ಪ್ರಾಂಶುಪಾಲರು, ಕಣಚೂರು ಪಿಯು ಕಾಲೇಜು, ಶ್ರೀಮತಿ ಕರೆನ್ ಟ್ರೆಸ್ಕಿಲ್ಲಾ ಡಿಸೋಜ, ಪ್ರಾಂಶುಪಾಲರು, ಕಣಚೂರು ಪಬ್ಲಿಕ್ ಸ್ಕೂಲ್ ಹಾಗೂ ಶ್ರೀಮತಿ ಲಿನೆಟ್ ಡಿಸೋಜ, ಪ್ರಾಂಶುಪಾಲರು, ಕಣಚೂರು ಪ್ರೀಸ್ಕೂಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿ ನಾಯಕಿ ಕುಮಾರಿ ಹಾಜರಾ ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭವು ಯಶಸ್ವಿಯಾಗಿ ಸಮಾಪ್ತಿಯಾಯಿತು. ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಎನ್‌ಆರ್‌ಐ ಸಚಿವಾಲಯ ಜಾರಿಗೆ ಆಗ್ರಹಿಸಿ ಜೂನ್ 26ರಂದು ಜಾಗತಿಕ ಟ್ವಿಟರ್ (X) ಅಭಿಯಾನ

ಬೆಂಗಳೂರು, ಜೂನ್ 25: ಕರ್ನಾಟಕ ಅನಿವಾಸಿ ಒಕ್ಕೂಟದ ವತಿಯಿಂದ ಎನ್‌ಆರ್‌ಐ ಸಚಿವಾಲಯವನ್ನು...

ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಲೋಬೋ ಫೌಂಡೇಶನ್ (ರಿ) ಜಂಟಿ ಆಶ್ರಯದಲ್ಲಿ “ಬಾಲಿಕಾ ಜಾಗೃತಿ ಅಭಿಯಾನ”

ಮಂಗಳೂರು: ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ಲೋಬೋ ಫೌಂಡೇಶನ್ (ರಿ)...

ಡಾ. ಜಿ.ಪರಮೇಶ್ವರ್ ಅವರು ತಮ್ಮ ವ್ಯಕ್ತಿತ್ವದಿಂದ ಶ್ರೀಮಂತರು: ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ

ಬೆಂಗಳೂರು: ರಾಜಕೀಯವಾಗಿ ತಮ್ಮ ವೈಯುಕ್ತಿಕ ಸಾಮರ್ಥ್ಯದ ಜೊತೆಗೆ ಧಾರ್ಮಿಕ ನಂಬಿಕೆಯ ಶಕ್ತಿಯ...

“ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್‌ಮಾಲ್? 19 ಸಾವಿರ ಮಹಿಳೆಯರಿಗೆ ಒಂದೇ ಬ್ಯಾಂಕ್ ಖಾತೆ, ಸಿಎಜಿ ವರದಿಯಲ್ಲಿ ಬೆಚ್ಚಿಬೀಳಿಸುವ ಅಂಶಗಳು!

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದಲ್ಲಿ ಗಂಭೀರ ಅಕ್ರಮಗಳು...