ಕಲ್ಲಡ್ಕ: ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಗೆ ಸಂಚಾರಿ ಪೊಲೀಸರಿಂದ ಬ್ರೇಕ್

Date:

ಬಂಟ್ವಾಳ: ಕಲ್ಲಡ್ಕ ಪೇಟೆಯ ಸರ್ವಿಸ್ ರಸ್ತೆಯ ಎರಡೂ ಬದಿಗಳಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುತ್ತಿದ್ದ ವಾಹನಗಳನ್ನು ಬಂಟ್ವಾಳ ಸಂಚಾರಿ ಠಾಣಾ ಪೊಲೀಸ್ ಉಪ ನಿರೀಕ್ಷಕ ಆದರ್ಶ್ ಹಾಗೂ ಸಿಬ್ಬಂದಿಗಳು ತೆರವು ಕಾರ್ಯಾಚರಣೆ ನಡೆಸಿ, ನಿಯಮಬದ್ಧ ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸಿದರು.

ವಾಹನಗಳನ್ನು ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸಿದರೆ ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಲ್ಲದೆ ಇದು ಸರಿಯಾದ ಕ್ರಮವೂ ಅಲ್ಲ. ಆದುದರಿಂದ ರಸ್ತೆಯ ಎಡ ಬದಿಯಲ್ಲಿ ಒಂದೇ ಸಾಲಿನಲ್ಲಿ ನಿಲ್ಲಿಸಿದರೆ, ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಸಾರ್ವಜನಿಕರಿಗೆ ತಿಳುವಳಿಕೆ ನೀಡಿದ ಪೊಲೀಸರು ರಸ್ತೆಯ ಬೆಲೆ ಬದಿಯಲ್ಲಿ ನಿಲ್ಲಿಸಿದ್ದ ಎಲ್ಲಾ ವಾಹನಗಳನ್ನು ತೆರವುಗೊಳಿಸಿದರು.

ನಿಯಮಾನುಸಾರ ರಸ್ತೆಯ ಎಡಭಾಗದಲ್ಲಿ ವಾಹನ ನಿಲುಗಡೆ ಮಾಡುವ ಕುರಿತು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಅದನ್ನು ಎಲ್ಲರೂ ಪಾಲಿಸಬೇಕು, ಬಲಭಾಗ ವಾಹನ ಸಂಚಾರಕ್ಕೆ ಇರುವ ಕಾರಣ ಅಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ. ಸಂಚಾರ ನಿಯಮ ಪಾಲನೆಗೆ ಎಲ್ಲರೂ ಬದ್ಧರಾಗಿರಬೇಕು ಎಂದು ಬಂಟ್ವಾಳ ಸಂಚಾರಿ ಠಾಣಾ ಪೊಲೀಸ್ ಉಪ ನಿರೀಕ್ಷಕ ಆದರ್ಶ್ ಸೂಚಿಸಿದರು.

ಫ್ಲೈಓವರ್ ಅಡಿಭಾಗದಲ್ಲಿ ರಿಕ್ಷಾ, ಗೂಡ್ಸ್ ಟೆಂಪೋ ಹಾಗೂ ಖಾಸಗಿ ವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೂ.28: ಮೂಡಬಿದಿರೆಯಲ್ಲಿ ಇನ್ನರ್ ವ್ಹೀಲ್ ಜಿಲ್ಲಾ 318ರ 57ನೇ ಜಿಲ್ಲಾ ಅಸೆಂಬ್ಲಿ ‘ರೋಶ್ನಿ’ ಕಾಯ೯ಕ್ರಮ

ಮೂಡಬಿದಿರೆ: ಇನ್ನರ್ ವ್ಹೀಲ್ ಜಿಲ್ಲಾ 318ರ 57ನೇ ಜಿಲ್ಲಾ ಅಸೆಂಬ್ಲಿ ‘ರೋಶ್ನಿ’...

ಕಣಚೂರು ಪಬ್ಲಿಕ್ ಸ್ಕೂಲಿನಲ್ಲಿ ವಿದ್ಯಾರ್ಥಿ ನಾಯಕತ್ವ ಪದಗ್ರಹಣ ಸಮಾರಂಭ ಹಾಗೂ 2025–26ನೇ ಸಾಲಿನ CBSE -10ನೇ ತರಗತಿ ಸಾಧಕರ ಸನ್ಮಾನ

ಉಳ್ಳಾಲ: ಕಣಚೂರು ಪಬ್ಲಿಕ್ ಸ್ಕೂಲ್, ದೇರಳಕಟ್ಟೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ...

ಎನ್‌ಆರ್‌ಐ ಸಚಿವಾಲಯ ಜಾರಿಗೆ ಆಗ್ರಹಿಸಿ ಜೂನ್ 26ರಂದು ಜಾಗತಿಕ ಟ್ವಿಟರ್ (X) ಅಭಿಯಾನ

ಬೆಂಗಳೂರು, ಜೂನ್ 25: ಕರ್ನಾಟಕ ಅನಿವಾಸಿ ಒಕ್ಕೂಟದ ವತಿಯಿಂದ ಎನ್‌ಆರ್‌ಐ ಸಚಿವಾಲಯವನ್ನು...