ಜೂ.28: ಮೂಡಬಿದಿರೆಯಲ್ಲಿ ಇನ್ನರ್ ವ್ಹೀಲ್ ಜಿಲ್ಲಾ 318ರ 57ನೇ ಜಿಲ್ಲಾ ಅಸೆಂಬ್ಲಿ ‘ರೋಶ್ನಿ’ ಕಾಯ೯ಕ್ರಮ

Date:

ಮೂಡಬಿದಿರೆ: ಇನ್ನರ್ ವ್ಹೀಲ್ ಜಿಲ್ಲಾ 318ರ 57ನೇ ಜಿಲ್ಲಾ ಅಸೆಂಬ್ಲಿ ‘ರೋಶ್ನಿ’ ಕಾರ್ಯಕ್ರಮವು ಹಾಲಿ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್ ನೇತೃತ್ವದಲ್ಲಿ ಜೂನ್ 28ರಂದು ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಅಧಿವೇಶನದ ಕಾರ್ಯದರ್ಶಿ, ಜಿಲ್ಲಾ ಪೂರ್ವ ಚೇರ್ಮನ್ ಶಾಲಿನಿ ನಾಯಕ್ ಅವರು ಬುಧವಾರ ಮೂಡಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2026-27ನೇ ಸಾಲಿನ ಜಿಲ್ಲಾ ಚೇರ್ಮನ್ ಆಗಿ ರಜನಿ ಭಟ್ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಜರುಗಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತದ ಇನ್ನರ್ ವ್ಹೀಲ್ ಕ್ಲಬ್‌ಗಳ ಅಸೋಸಿಯೇಷನ್ ಅಧ್ಯಕ್ಷೆ ವಿನುತಾ ಹರೀಶ್ ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಭಾಗವಹಿಸಲಿದ್ದಾರೆ.

ಅಸೆಂಬ್ಲಿ ಚೇರ್ಮನ್ ಜಯಶ್ರೀ ಅಮರನಾಥ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಉಮಾ ಮಹೇಶ್, ಅಸೆಂಬ್ಲಿ ಕಾರ್ಯದರ್ಶಿ ಶಾಲಿನಿ ನಾಯಕ್, ಮೂಡಬಿದಿರೆ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನಿಶ್ಮಿತಾ ಶೀನಪ್ಪ ಉಪಸ್ಥಿತರಿರುವರು. ಜೂನ್ 27ರಂದು ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ‘ಶುಕ್ರಿಯಾ’ ಕೃತಜ್ಞತಾ ಸಮಾರಂಭ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ವಿನುತಾ ಹರೀಶ್ ಮುಖ್ಯ ಅತಿಥಿಯಾಗಿ ಹಾಗೂ ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ 318ರ ವ್ಯಾಪ್ತಿಯ 55 ಕ್ಲಬ್‌ಗಳಿಂದ ಪೂರ್ಣ ಪ್ರಮಾಣದ ನೋಂದಣಿ ನಡೆದಿದ್ದು, 650ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಎಡಿಟರ್ ಸಹನಾ ನಾಗರಾಜ್, ಮೂಡಬಿದಿರೆ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ರೇಷ್ಮಾ ವರ್ಮ, ಕೋಶಾಧಿಕಾರಿ ಸುಚೇತಾ ಜಯರಾಮ್ ಸುದ್ದಿಗೋಷ್ಠಿಯಲ್ಲಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ: ಆಳ್ವಾಸ್ ಕ್ರೀಡಾಪಟುಗಳ ಗಮನಾಹ೯ ಸಾಧನೆ

ಮೂಡುಬಿದಿರೆ: ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ರಾಜ್ಯಮಟ್ಟದ ದಸರಾ ಸಿಎಂ ಕಪ್...

ಪುತ್ತಿಗೆ ಗುಂಡ್ಯಡ್ಕದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕ ಶ್ರೀನಿವಾಸಪುರ ವಿಠೋಭ ಭಜನಾ...

ಮೂಡಬಿದಿರೆ: ಧವಲಾ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ‘ವೇಯ್ಟ್ ಲಿಫ್ಟಿಂಗ್’ ಸ್ಪರ್ಧೆ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಕಾಲೇಜಿನಲ್ಲಿ 2026-27ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ...

ಮಂಗಳೂರು: ಎಂಆರ್‌ಪಿಎಲ್ ಸ್ಫೋಟ ದುರಂತಕ್ಕೆ ಮತ್ತೊಂದು ಬಲಿ; ಗಂಭೀರ ಗಾಯಗೊಂಡಿದ್ದ ರಾಜೇಶ್ ಡಿಸಿಲ್ವ ನಿಧನ

ಮಂಗಳೂರು: ಮಂಗಳೂರು ನಗರದ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ದುರಂತ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ...