
ಕೊಣಾಜೆ: ಭಾನುವಾರ ಆಗಸ್ಟ್ 31ರಂದು ಬೆಳಗ್ಗೆ ಉಳ್ಳಾಲ ತಾಲೂಕು ಪಜೀರು ಗ್ರಾಮದ ಕಂಬಳಪದವು ಶ್ರೀ ದುರ್ಗಾ ಕಾಳಿ ದೇವಸ್ಥಾನದ ರಸ್ತೆಯಲ್ಲಿ ಡೋರ್ ನಂಬ್ರ 1-303E ಮನೆಯಲ್ಲಿ ಆಕ್ರಮವಾಗಿ ಮದ್ಯ ತಯಾರಿಕೆ ನಡೆಸುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಆರೋಪಿಗಳು ತಪ್ಪಿಸಿಕೊಂಡು ಹೋಗುವ ಸಾಧ್ಯತೆ ಇರುವುದರಿಂದ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ದಾಳಿ ನಡೆಸುವ ಸಮಯ ಹಾಜರಿರುವ ಬಗ್ಗೆ ನೋಟೀಸು ಜ್ಯಾರಿ ಮಾಡಿ 11-30 ಗಂಟೆಗೆ ಪಂಚರ ಸಮಕ್ಷಮ ಮನೆಗೆ ದಾಳಿ ಮಾಡಿ ಆರೋಪಿಗಳಾದ ಪ್ರಣವ್ ವಿ ಶೆಣೈ ಮತ್ತು ಅನೂಷ್ ಆರ್ ರವರ ಬಂಧಿಸಿದ್ದಾರೆ, ಸದ್ರಿ ಆರೋಪಿಗಳು ವಿಸಿ ತೋಮಸ್ ಮತ್ತು ಮಣಿಕುಟ್ಟನ್ ರವರೊಂದಿಗೆ ಸೇರಿಕೊಂಡು ಆಕ್ರಮ ಮದ್ಯ ತಯಾರಿಸುತ್ತಿದ್ದು, ಆರೋಪಿಗಳನ್ನು ಮಧ್ಯಾಹ್ನ ದಸ್ತಗಿರಿ ಕ್ರಮ ಜರುಗಿಸಿ ಆರೋಪಿಗಳ ಸಮಕ್ಷಮ ಪಂಚರ ಜೊತೆಯಲ್ಲಿ ಮನೆಯನ್ನು ಪರಿಶೀಲಿಸಲಾಗಿ ಸುಮಾರು 1,15,110-00 ಬೆಲೆಯ ಆಕ್ರಮ ಮದ್ಯ ತಯಾರಿಕ ಮೂರು ಮಿಶಿನ್ ಗಳು, ಮಿಕ್ಸರ್ ಮೆಶಿನ್, ಆಕ್ರಮ ಮದ್ಯದ ಬಾಟ್ಲಿಗಳು, ಗೋವ ರಾಜ್ಯದಲ್ಲಿ ಮಾತ್ರ ಮಾರಾಟ ಮಾಡುವ ಪರವಾನಿಗೆ ಇರುವ 8 MANSION HOUSE ಎಂಬ ಹೆಸರಿನ ಮದ್ಯದ ಬಾಟ್ಲಿಗಳು , ಮದ್ಯ ತಯಾರಿಕೆಗೆ ಬೇಕಾದ ಇತರ ಸೊತ್ತುಗಳು ಪತ್ತೆಯಾಗಿರುವುದರಿಂದ
ಕೊಣಾಜೆ ಪೊಲೀಸ್ ಠಾಣಾ ಅ.ಕ್ರ. 104/2025 ಕಲಂ 123 ಜೊತೆಗೆ 3(5) BNS 2023, ಮತ್ತು ಕಲಂ 13, 32, 34 KE ACT ಕಾಯ್ದೆಯಂತೆ ಪ್ರಕರಣ ದಾಖಲುಮಾಡಲಾಗಿದೆ. ಬಂಧಿತ
ಆರೋಪಿಗಳು ಪ್ರಣವ್ ಪಿ ಶೆಣೈ, ಪ್ರಾಯ: 24 ವರ್ಷ, ತಂದೆ: ಪ್ರಶಾಂತ್ ಶೆಣೈ, ವಾಸ: ಗಣೇಶ್ ಕೃಪಾ, ಬೀಚ್ ರೋಡು, ಕಾಸರಗೋಡು ಅಂಚೆ, ಕಾಸರಗೋಡು, ಕೇರಳ ರಾಜ್ಯ – 671121 ಮತ್ತು ಅನೂಷ್ ಆರ್, ಪ್ರಾಯ 24 ವರ್ಷ, ತಂದೆ: ರವಿ, ವಾಸ: ಗೋಪಾಲ ಹೌಸ್, ತಾಳಿಪಡ್ಪು ಗ್ರೌಂಡ್, ತಾಳಿಪಡ್ಪು, ಅಡ್ಕದಬೈಲ್, ಕಾಸರಗೋಡು, ಕೇರಳ ರಾಜ್ಯ ಎಂದು ತಿಳಿದು ಬಂದಿದೆ.
ಈ ಕಾರ್ಯಚರಣೆಯನ್ನು ಶ್ರೀ ಸುಧೀರ್ ಕುಮಾರ್ ರೆಡ್ಡಿ, ಐ.ಪಿ.ಎಸ್. ಮಾನ್ಯ ಪೊಲೀಸ್ ಆಯುಕ್ತರು, ಮಂಗಳೂರು ನಗರ ರವರ ಮಾರ್ಗದರ್ಶನದಂತೆ, ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ಆಯುಕ್ತರಾದ ಶ್ರೀ ಮಿಥುನ್ ಹೆಚ್ ಎನ್. ಐಪಿಎಸ್ ಮತ್ತು ಅಪರಾಧ & ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತರಾದ ಶ್ರೀ ರವಿ ಶಂಕರ ರವರ ನಿರ್ದೇಶನದಂತೆ, ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ವಿಜಯಕ್ರಾಂತಿ ರವರ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕರಾದ ವಿರೂಪಾಕ್ಷ, ಪಿಎಸ್ಐ ನಾಗರಾಜ್ ಸಿಬ್ಬಂದಿಗಳಾದ ಹೆಚ್ ಸಿ 608 ಶೈಲೇಂದ್ರ, ಪಿಸಿ 3050 ರಮೇಶ್, ಪಿಸಿ 2349 ಬಸವನ ಗೌಡ ಮತ್ತು ಪಿಸಿ 640 ನೇ ರಮೇಶ್ ರವರುಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.