ಉಳ್ಳಾಲ: ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಬುಲ್ ಬುಲ್ ಗಳಾದ ರುಷದ ಬಲ್ಕಿಸ್, ಮರಿಯಂ ಹಫೀಫ, ಫಾತಿಮಾ ಅಲೀನ, ಫಾತಿಮಾ ಹಸ್ನ ರವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಬುಲ್ ಬುಲ್ ವಿಭಾಗದಲ್ಲಿ ರಾಜ್ಯಪಾಲರಿಂದ ಪಡೆ ಮಾಡಲ್ಪಡುವ ಅತ್ಯುನ್ನತ ಪ್ರಶಸ್ತಿಯಾದ ಹಿರೇಕ್ ಗರಿ ಪ್ರಶಸ್ತಿಯನ್ನು ಪಡೆದಿರುವರು. ಇತ್ತೀಚೆಗೆ ಜಿಲ್ಲಾ ತರಬೇತಿ ಸಂಸ್ಥೆ ಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವಿದ್ಯಾರ್ಥಿಗಳ ಈ ಸಾಧನೆಗೆ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಜನಾಬ್ ಬಿಜಿ ಹನೀಫ್ ಹಾಜಿ, ಅಭಿನಂದಿಸಿ ಸಹಕರಿಸಿದ ಶಿಕ್ಷಕಿ ಶ್ರೀಮತಿ ಹಸೀನ್ ತಾಜ್ ರವರಿಗೆ ಕೃತಜ್ಞತೆಯನ್ನು ಸಲ್ಲಿಸಿರುವರು


